ಕನ್ನಡಪ್ರಭ ವಾರ್ತೆ ಹನೂರು
ಪಟ್ಟಣದ ಹನೂರು ಜಿವಿ ಗೌಡ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಶನಿವಾರ ಹನೂರು ತಾಲೂಕು ಆಡಳಿತ, ಕಾನೂನು ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ, ಬೆಂಗಳೂರು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಚಾಮರಾಜನಗರ, ತಾಲೂಕು ಕಾನೂನು ಸೇವೆಗಳ ಸಮಿತಿ, ವಕೀಲರ ಸಂಘ ಕೊಳ್ಳೇಗಾಲ ಹಾಗೂ ಜಿವಿ ಗೌಡ ಕಾಲೇಜು ಸಹಯೋಗದೊಂದಿಗೆ 15ನೇ ಮತದಾರರ ದಿನಾಚರಣೆ ಹಾಗೂ ಕಾನೂನಿನ ಅರಿವು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ನಮ್ಮ ಸಂವಿಧಾನದ ಆಶಯಗಳು ಶ್ರೇಷ್ಠವಾದದ್ದು. ಸಂವಿಧಾನವು ಸಮಾಜವಾದ, ಜಾತ್ಯಾತೀತ, ಪ್ರಜಾಸತ್ತಾತ್ಮಕ, ಗಣರಾಜ್ಯವಾಗಿದೆ. ನಾವೆಲ್ಲರೂ ಕೂಡ ಸಂವಿಧಾನದಡಿಯಲ್ಲಿ ಬದುಕಬೇಕಾಗಿದೆ. ಈ ದೇಶದ ಪ್ರಜೆಗಳು ಮತದಾನದ ಅರಿವನ್ನು ಮೂಡಿಸಿಕೊಳ್ಳಬೇಕಾಗಿದೆ. ಯಾವುದೇ ಆಮಿಷಗಳಿಗೆ ಒಳಗಾಗದೆ ನಿರ್ಭೀತಿಯಿಂದ ಮತದಾನ ಮಾಡಬೇಕು ಆಗ ಈ ದೇಶ ಪ್ರಬುದ್ಧ ಭಾರತವಾಗುತ್ತದೆ ಎಂದು ತಿಳಿಸಿದರು. ತಾಲೂಕು ಆಡಳಿತದಿಂದ ಬಿಎಲ್‌ಒಗಳಿಗೆ ಸನ್ಮಾನಿಸಿದರು.ಈ ಸಂದರ್ಭದಲ್ಲಿ ತಹಸೀಲ್ದಾರ್ ವೈಕೆ ಗುರುಪ್ರಸಾದ್, ಪ್ರಾಂಶುಪಾಲರಾದ ಲಾಜರಸ್, ಉಪ ತಹಸೀಲ್ದಾರ್ ಸುರೇಖಾ, ವಕೀಲ ಸಂಘದ ಕಾರ್ಯದರ್ಶಿ ಸಿ. ಬಿ. ಮಹೇಶ್ ಕುಮಾರ್, ವಕೀಲರಾದ ಚಿನ್ನರಾಜು, ರೋಹಿತ್ ಕುಮಾರ್, ಉಪನ್ಯಾಸಕರಾದ ಫರ್ಹಾನ ಬೇಗಂ, ಕುಸುಮ, ಸವಿತಾ, ಶಿವಕುಮಾರ್, ಮಹೇಂದ್ರ, ಸುಮತಿ, ದೇವಿಕಾ, ಹಾಗೂ ಆಡಳಿತ ಸಿಬ್ಬಂದಿ ಪ್ರಭು ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.