ಕನ್ನಡಭ ವಾರ್ತೆ ವಿಜಯಪುರ
ಜಿಲ್ಲಾ ಸ್ವೀಪ್ ಸಮಿತಿ ಹಾಗೂ ಕಾರ್ಮಿಕ ಇಲಾಖೆ ವಿಜಯಪುರ ಇವರ ಸಹಯೋಗದಲ್ಲಿ ವಿಜಯಪುರ ನಗರದ ಹೊಸ ಬಸ್ ನಿಲ್ದಾಣದ (ಸ್ಯಾಟ್ ಲೈಟ್) ಹತ್ತಿರ ನೆರೆದಿರುವ ದಿನಗೂಲಿ ಕಾರ್ಮಿಕರು, ಪಾಟೀಲ ಪ್ಲಾನೆಟ್ ಶೋರೂಮ್ ಹಾಗೂ ಬಿಜ್ಜರಗಿ ಟಾಟಾ ಮೋಟರ್ಸ್ ಕಂಪನಿಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಕಾರ್ಮಿಕರೊಂದಿಗೆ ಮತದಾರರ ಜಾಗೃತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿಕೊಂಡು ಮಾತನಾಡಿದರು.
ಮತದಾನ ಎಂಬುವುದು ನಮ್ಮ ಜವಾಬ್ದಾರಿಯಷ್ಟೇ ಅಲ್ಲ ಅದು ನಮ್ಮ ಹಕ್ಕು. ಸದೃಢ ಸಮಾಜ ನಿರ್ಮಾಣ ಮಾಡಲು ಮತದಾನ ಸಹಕಾರಿಯಾಗುತ್ತದೆ. ಕುಟುಂಬ, ನೆರೆಹೊರೆಯ ಜನರಿಗೆ ಮತದಾನದ ಮಹತ್ವವನ್ನು ಸಾರಿ ಜಾಗೃತಿ ಮೂಡಿಸಬೇಕಾಗಿದೆ. ಮತದಾನ ದಿನದಂದು ಎಲ್ಲ ಕಾರ್ಮಿಕರಿಗೆ ವೇತನ ಸಹಿತ ರಜೆ ಘೋಷಿಸಲಾಗಿದೆ. ಇದರ ಸದುಪಯೋಗ ಪಡೆದುಕೊಂಡು ಮತದಾನ ಮಾಡಿ ಪ್ರಜಾಪ್ರಭುತ್ವದ ಹಬ್ಬವನ್ನು ನಾವೆಲ್ಲರೂ ಮತದಾನ ಮಾಡುವುದರ ಮೂಲಕ ಸಂಭ್ರಮಿಸೋಣ ಎಂದರು.ಎಲ್ಲರೂ ಮತದಾರರ ಪ್ರತಿಜ್ಞಾ ವಿಧಿಯನ್ನು ಸ್ವೀಕರಿಸಿದರು. ಬಳಿಕ ಎಲ್ಲ ಅಧಿಕಾರಿಗಳು, ಸಿಬ್ಬಂದಿಯವರು ಹಾಗೂ ಕಾರ್ಮಿಕರು ಚುನಾವಣಾ ಪರ್ವ ದೇಶದ ಗರ್ವ, “ಮತದಾನ ನಮ್ಮೆಲ್ಲರ ಹಕ್ಕು”, “ಮತದಾನ ಮಾಡಿದವನೇ ಮಹಾಶೂರ”, “ನೋಂದಾಯಿಸಿ ನೋಂದಾಯಿಸಿ ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರನ್ನು ನೊಂದಾಯಿಸಿ”, “ಮಾಡಿ ಮಾಡಿ ಮತದಾನ”, “ಮತದಾರರ ಪಟ್ಟಿಯ ಮಾಹಿತಿ ತಿದ್ದುಪಡಿಗಾಗಿ ನಮೂನೆ 8 ಬಳಸಿ” ಎಂಬ ಘೋಷಣೆಗಳನ್ನು ಕೂಗಲಾಯಿತು.
ಜಿಲ್ಲಾ ಪಂಚಾಯತಿಯ ಯೋಜನಾ ಅಂದಾಜು ಮತ್ತು ಮೌಲ್ಯಮಾಪನಾಧಿಕಾರಿ ಎ. ಬಿ. ಅಲ್ಲಾಪೂರ, ಕಾರ್ಮಿಕ ಇಲಾಖೆಯ ಕಾರ್ಮಿಕ ಅಧಿಕಾರಿ ಸಿದ್ದಪ್ಪ ಖೈನೂರ, ಕಾರ್ಮಿಕ ನಿರೀಕ್ಷಕಿ ಜಗದೇವಿ ಸಜ್ಜನ, ಜಿಲ್ಲಾ ಪಂಚಾಯತಿ ಸುರೇಶ ಕೊಂಡಗೂಳಿ, ಅಮೋಘಿ ಗೌಳಿ, ವಿಶ್ವನಾಥ ಶಹಾಪೂರ, ಸುವರ್ಣ ಭಜಂತ್ರಿ ಸೇರಿದಂತೆ ಸಿಬ್ಬಂದಿಗಳು ಉಪಸ್ಥಿತರಿದ್ದರು.