ಮತದಾನ ಪ್ರಜಾಪ್ರಭುತ್ವದ ಪವಿತ್ರ ಕಾರ್ಯ: ಕೃಷ್ಣಪ್ಪ ಧರ್ಮರ

KannadaprabhaNewsNetwork | Published : Apr 9, 2024 12:55 AM

ಸಾರಾಂಶ

ಲಕ್ಷ್ಮೇಶ್ವರ ಪಟ್ಟಣದ ಮಹಾಕವಿ ಪಂಪ ವೃತ್ತದಲ್ಲಿ ಮತದಾರರ ಜಾಗೃತಿ ಅಭಿಯಾನದಲ್ಲಿ ಮಾನವ ಸರಪಳಿ ಮತ್ತು ಮಾನವ ಪಿರಮಿಡ್‌ ರಚಿಸಲಾಯಿತು.

ಲಕ್ಷ್ಮೇಶ್ವರ: ಎಲ್ಲರನ್ನು ಒಳಗೊಳ್ಳುವ ರಾಷ್ಟ್ರ ನಿರ್ಮಾಣ ಮಾಡುವುದು ಸಂವಿಧಾನದ ಆಶಯವಾಗಿದೆ. ಈ ನಿಟ್ಟಿನಲ್ಲಿ ಎಲ್ಲ ವಯಸ್ಕರಿಗೂ ಸಮಾನ ಮತದಾನ ಹಕ್ಕು ಕಲ್ಪಿಸಲಾಗಿದೆ. ಎಲ್ಲರೂ ತಪ್ಪದೆ ಮತದಾನ ಮಾಡಬೇಕು ಎಂದು ಲಕ್ಷ್ಮೇಶ್ವರ ತಾಪಂ ಇಒ ಹಾಗೂ ತಾಲೂಕು ಸ್ವೀಪ್ ಕಮಿಟಿ ಅಧ್ಯಕ್ಷ ಕೃಷ್ಣಪ್ಪ ಧರ್ಮರ ಹೇಳಿದರು.

ಪಟ್ಟಣದ ಮಹಾಕವಿ ಪಂಪ ವೃತ್ತದಲ್ಲಿ ಸ್ವೀಪ್ ಕಮಿಟಿ ಹಮ್ಮಿಕೊಂಡಿದ್ದ ಮತದಾರರ ಜಾಗೃತಿ ಅಭಿಯಾನದಲ್ಲಿ ಮಾನವ ಸರಪಳಿ ಮತ್ತು ಮಾನವ ಪಿರಮಿಡ್‌ಗೆ ಚಾಲನೆ ನೀಡಿ ಅವರು ಮಾತನಾಡಿದರು.

ಮತದಾನವು ಪ್ರಜಾಪ್ರಭುತ್ವದ ಪವಿತ್ರ ಕಾರ್ಯವಾಗಿದೆ. ಸಂವಿಧಾನದ ಆಶಯಗಳು ಈಡೇರಿಕೆಗೆ ನಮ್ಮ ಕನಸು ಸಾಕಾರಗೊಳ್ಳಲು ತಪ್ಪದೆ ಮತ ಚಲಾಯಿಸಬೇಕು. ಮತದಾನದಿಂದ ನಮ್ಮ ಹಕ್ಕು ಮತ್ತು ಕರ್ತವ್ಯಗಳ ಪಾಲನೆ ಮಾಡಲು ಸಾಧ್ಯವಾಗುತ್ತದೆ. ಅದಕ್ಕಾಗಿ ಪ್ರತಿಯೊಬ್ಬರೂ ತಪ್ಪದೆ ಮತದಾನ ಮಾಡಬೇಕು ಎಂದು ಹೇಳಿದರು.

ಈ ವೇಳೆ ಪುರಸಭೆ ಮುಖ್ಯಾಧಿಕಾರಿ ಮಹೇಶ ಹಡಪದ ಮಾತನಾಡಿ, ಸಂವಿಧಾನ ನೀಡಿದ ಮತದಾನದ ಹಕ್ಕನ್ನು ಪ್ರತಿಯೊಬ್ಬ ನಾಗರಿಕ ಚಲಾಯಿಸಬೇಕು. ತನ್ನ ಜವಾಬ್ದಾರಿ ಅರಿತು ಮತದಾನದಲ್ಲಿ ಪಾಲ್ಗೊಳ್ಳಬೇಕು ಎಂದರು.

ಬಿಆರ್‌ಪಿ ಈಶ್ವರ ಮೆಡ್ಲೇರಿ ಮಾತನಾಡಿ, ನಿಮ್ಮ ಅಮೂಲ್ಯವಾದ ಮತ ದೇಶದ ಭವಿಷ್ಯವನ್ನು ಬದಲಾವಣೆ ಮಾಡುತ್ತದೆ. ಅದಕ್ಕಾಗಿ ಹಕ್ಕು ಚಲಾಯಿಸಿ ಎಂದರು.

ಇದೇ ವೇಳೆ ಶಾಲಿನ್ ಕರಾಟೆ ಅಕಾಡೆಮಿಯ ಮಕ್ಕಳಿಂದ ಮಾನವ ಪಿರಮಿಡ್ ನಿರ್ಮಾಣ ಮಾಡಿದ್ದು ಅತ್ಯಕರ್ಷವಾಗಿತ್ತು. ಹಾಗೆಯೇ ಲಕ್ಷ್ಮೇಶ್ವರ ಪಟ್ಟಣದ ಎಲ್ಲ ಸರ್ಕಾರಿ ಅನುದಾನಿತ ಮತ್ತು ಅನುದಾನರಹಿತ ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಾಲೆಗಳ ಶಿಕ್ಷಕರಿಂದ ಮಾನವ ಸರಪಳಿ ಏರ್ಪಡಿಸಿ, ಮತದಾನದ ಜಾಗೃತಿ ಮೂಡಿಸಲಾಯಿತು.

ಬಸವರಾಜ ಎಂ. ಯರಗುಪ್ಪಿ, ವಾಸು ದೀಪಾಳಿ, ಸಿಆರ್‌ಪಿ ಸತೀಶ ಬೊಮಲೆ, ಉಮೇಶ ನೇಕಾರ, ಆರ್. ಮಹಾಂತೇಶ, ಎನ್.ಎ. ಮುಲ್ಲಾ, ನಾಗರಾಜ ಮಜ್ಜಿಗುಡ್ಡ ಮತ್ತು ಶಾಹಿನ್ ಕರಾಟೆ ಅಕಾಡೆಮಿಯ ಸಯ್ಯದ್ ರಫೀಕ್ ಪೀರಜಾದೆ, ಜಿಲ್ಲಾ ನೌಕರರ ಸಂಘದ ಪರಿಷತ್ ಸದಸ್ಯ ಎಂ.ಎಸ್. ಹಿರೇಮಠ, ಮಂಜುನಾಥ ಮುದಗಲ್, ಎಸ್.ಬಿ. ಅಣ್ಣಿಗೇರಿ, ಪ್ರಧಾನ ಗುರುಗಳಾದ ಜೆ.ಡಿ. ಲಮಾಣಿ, ಡಿ.ಎನ್. ದೊಡ್ಡಮನಿ , ಎಚ್.ಬಿ. ಸಣ್ಣಮನಿ, ಕೆ.ಡಿ. ಕಗ್ಗಲಗೌಡರ, ಎಸ್.ಪಿ. ಮುಳಗುಂದ, ಎಲ್.ಎಂ. ಹುರಕುಪ್ಪಿ, ಜಿ.ಡಿ. ಕಲ್ಲಣ್ಣವರ, ಅಶೋಕ ಪೀಟರ್, ಸಿ.ಎಫ್. ಪಾಟೀಲ, ಜಿ.ಎನ್. ಶೀರನಹಳ್ಳಿ, ಐ.ಆರ್. ಕುಲಕರ್ಣಿ, ಎಸ್.ಎನ್. ಕ್ಷತ್ರಿಯ, ಎಸ್.ಎಸ್. ಜಿರಂಕಳ್ಳಿ ಹಾಗೂ ಎಲ್ಲ ಶಾಲೆಗಳ ಶಿಕ್ಷಕರು ಹಾಜರಿದ್ದರು.

Share this article