ವೃಕ್ಷಥಾನ್ ಓಟ: ವಿಜೇತರಿಗೆ ಬಹುಮಾನ ವಿತರಣೆ

KannadaprabhaNewsNetwork |  
Published : Dec 08, 2025, 03:00 AM IST
ವಿಜಯಪುರ | Kannada Prabha

ಸಾರಾಂಶ

ಪ್ರಾಚೀನ ಸ್ಮಾರಕಗಳ ಸಂರಕ್ಷಣೆಗಾಗಿ ಭಾನುವಾರ ಆಯೋಜಿಸಿದ ವೃಕ್ಷಥಾನ್ ಪಾರಂಪರಿಕ ಓಟ- 2025ದಲ್ಲಿ ಭಾಗವಹಿಸಿ ವಿಜೇತರಾದ ಓಟಗಾರರಿಗೆ ಬಹುಮಾನ ವಿತರಿಸಲಾಯಿತು.

ಕನ್ನಡಪ್ರಭ ವಾರ್ತೆ ವಿಜಯಪುರ

ಜಿಲ್ಲಾಡಳಿತ, ಜಿಪಂ, ಅರಣ್ಯ, ಪ್ರವಾಸೋದ್ಯಮ ಇಲಾಖೆ ಹಾಗೂ ವೃಕ್ಷ ಅಭಿಯಾನ ಪ್ರತಿಷ್ಠಾನ ಆಶ್ರಯದಲ್ಲಿ ಪರಿಸರ, ಪ್ರಾಚೀನ ಸ್ಮಾರಕಗಳ ಸಂರಕ್ಷಣೆಗಾಗಿ ಭಾನುವಾರ ಆಯೋಜಿಸಿದ ವೃಕ್ಷಥಾನ್ ಪಾರಂಪರಿಕ ಓಟ- 2025ದಲ್ಲಿ ಭಾಗವಹಿಸಿ ವಿಜೇತರಾದ ಓಟಗಾರರಿಗೆ ಬಹುಮಾನ ವಿತರಿಸಲಾಯಿತು.

ಈ ಓಟದಲ್ಲಿ ಅರಣ್ಯ ಸಚಿವ ಈಶ್ವರ ಖಂಡ್ರೆ, ಸಚಿವ ಡಾ.ಎಂ.ಬಿ.ಪಾಟೀಲ, ಶಾಸಕ ವಿಠ್ಠಲ ಕಟಕಧೋಂಡ, ಪರಿಷತ್ತಿನ ಶಾಸಕ ಸುನೀಲಗೌಡ ಪಾಟೀಲ್, ಜಿಲ್ಲಾಧಿಕಾರಿ ಡಾ.ಆನಂದ.ಕೆ, ಜಿಪಂ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ರಿಷಿ ಆನಂದ, ಎಸ್.ಪಿ.ಲಕ್ಷ್ಮಣ ನಿಂಬರಗಿ, ಅಮೃತಾನಂದ ಸ್ವಾಮೀಜಿ, ಶಿವಯೋಗೇಶ್ವರ ಸ್ವಾಮೀಜಿ ಸೇರಿದಂತೆ ವಿವಿಧ ಜನಪ್ರತಿನಿಧಿಗಳು, ಹಿರಿಯ ಅಧಿಕಾರಿಗಳು ಅತಿ ಉತ್ಸಾಹದಿಂದ ಓಟದಲ್ಲಿ ಪಾಲ್ಗೊಂಡು 5 ಕಿ.ಮೀ ಓಡಿ ಯುವಕರನ್ನು ಹುರಿದುಂಬಿಸಿದರು. 26 ವಿಭಾಗಗಳಲ್ಲಿ 21 ಕಿ.ಮೀ, 10 ಕಿ.ಮೀ ಹಾಗೂ 5 ಕಿ.ಮೀ ವಿಭಾಗಗಳಲ್ಲಿ ನಡೆದ ವೃಕ್ಷಥಾನ್ ಪಾರಂಪರಿಕ ಓಟದಲ್ಲಿ ಮಹಿಳೆಯರು ಮತ್ತು ಪುರುಷರು ಸೇರಿದಂತೆ ನಾನಾ ವಯೋಮಾನದವರು ಭಾಗವಹಿಸಿದ್ದರು.

21 ಕಿ.ಮೀ ಪುರುಷರ ವಿಭಾಗ:

18 ರಿಂದ 34 ವರ್ಷದೊಳಗೆ ಶಿವಾನಂದ ಚಿಗರಿ ಪ್ರಥಮ, ಪ್ರವೀಣ ಕಾಂಬಳೆ ದ್ವಿತೀಯ, ಪ್ರಜ್ವಲ ಎಸ್.ವೈ ತೃತೀಯ. 35 ರಿಂದ 44 ವರ್ಷದೊಳಗೆ ನಂಜುಂಡಪ್ಪ ಎನ್ ಪ್ರಥಮ, ರಾಮನಾಥ ಬೊಂಬಿಲವಾರ ದ್ವಿತೀಯ, ವೀರಣ್ಣ ಬಂಡಿ ತೃತೀಯ. 45ರಿಂದ 59 ವರ್ಷದೊಳಗೆ ಮಂಜೀತ ಸಿಂಗ್ ಪ್ರಥಮ, ಸಾಲ್ವೆರಾಮ ಶಿಂಧೆ ದ್ವಿತೀಯ, ಸೈಫುದ್ದೀನ್ ಎ.ಕೆ ತೃತೀಯ. 60 ವರ್ಷ ಮೇಲ್ಪಟ್ಟವರಲ್ಲಿ ಪಾಂಡುರಂಗ ಚೌಗುಲೆ ಪ್ರಥಮ, ಕೇಶವ ಮೋತೆ ದ್ವಿತೀಯ, ಬಸವರಾಜ ಹುಂಬೆರಿ ತೃತೀಯ ಸ್ಥಾನ ಪಡೆದುಕೊಂಡರು.

21 ಕಿ.ಮೀ ಮಹಿಳೆಯರ ವಿಭಾಗ:

18ರಿಂದ 34 ವರ್ಷ: ಸುಶ್ಮಿತಾ ವಿ.ಎಂ ಪ್ರಥಮ, ಸುಧಾರಾಣಿ ಪೂಜಾರಿ ದ್ವಿತೀಯ, ಅನುಪಮ ಪೂಜಾರಿ ತೃತೀಯ. 35 ರಿಂದ 44 ವರ್ಷ: ದೀಪಿಕಾ ಪ್ರಕಾಶ ಪ್ರಥಮ, ತಾನ್ಯ ಅಬ್ರಹಾಂ ಗಂಗೂಲಿ ದ್ವಿತೀಯ, ನಾಗರತ್ನ ಯಲಗೊಂಡೆ ತೃತೀಯ. 45 ರಿಂದ 59 ವರ್ಷ: ಸವಿತಾ ಕಲ್ಲೂರ ಪ್ರಥಮ 60 ವರ್ಷ ಮೇಲ್ಪಟ್ಟವರಲ್ಲಿ ಸುಲತಾ ಕಾಮತ ಪ್ರಥಮ.

10 ಕಿ.ಮೀ ಪುರುಷರ ವಿಭಾಗ:

18 ರಿಂದ 34 ವರ್ಷ- ಸುಮಂತ ರಾಜಭರ ಪ್ರಥಮ, ಅನಿಕೇತ ದೇಶಮುಖ ದ್ವಿತೀಯ, ಭೈರು ಭೈರು ತೃತೀಯ. 35 ರಿಂದ 44 ವರ್ಷ- ಪರಶುರಾಮ ಭೊಯಿ ಪ್ರಥಮ, ಸಂಜಯ ನೇಗಿ ದ್ವಿತೀಯ, ಪ್ರಶಾಂತ ಶಿರಹಟ್ಟಿ ತೃತೀಯ. 45 ರಿಂದ 59 ವರ್ಷ- ಪರಶುರಾಮ ಗುಣಗಿ ಪ್ರಥಮ, ದವ್ಯ ಸಂಚೀಸ್ ದ್ವಿತೀಯ, ರಂಜಿತ ಕಣಬರಕರ ತೃತೀಯ, 60 ವರ್ಷ ಮೇಲ್ಪಟ್ಟವರು- ವಿರುಪಾಕ್ಷಿ ಬಲಕುಂದಿ ಪ್ರಥಮ, ಶಶಿಕಾಂತ ಬೆದ್ರೆ ದ್ವಿತೀಯ, ಬಸವರಾಜ ಬಿಜ್ಜರಗಿ ತೃತಿಯ.

10 ಕಿ.ಮೀ ಮಹಿಳೆಯರ ವಿಭಾಗ:

18 ರಿಂದ 34 ವರ್ಷ- ಶಹೀನ ಎಸ್.ಡಿ ಪ್ರಥಮ, ಪ್ರಿಯಾ ಪಾಟೀಲ ದ್ವಿತೀಯ, ವಿನಿತಾ ಪಾಲ ತೃತೀಯ. 35 ರಿಂದ 44 ವರ್ಷ- ಚಂದನ ಕಲಿತಾ ಪ್ರಥಮ ಹುಸೇನಿಬಾವಿ ಸೈಯ್ಯದ ದ್ವಿತೀಯ, ಸ್ಮೀತಾ ಬಿರಾದಾರ ತೃತೀಯ. 45 ರಿಂದ 59 ವರ್ಷ- ಮೇಘನಾ ಬಾಳಿಕಾಯಿ ಪ್ರಥಮ, ಶೈಲಜಾ ಪಾಟೀಲ ದ್ವಿತೀಯ, ಶಕುಂತಲಾ ಎಸ್. ತೃತೀಯ, 60 ವರ್ಷ ಮೇಲ್ಪಟ್ಟವರು- ಪಾರ್ವತಿ ಬಿ.ಸಿ. ಪ್ರಥಮ.

5 ಕಿ.ಮೀ ಪುರುಷರ ವಿಭಾಗ:

12 ರಿಂದ 17 ವರ್ಷ- ಅಬೂಬಕರ ಕಡಬಿ ಪ್ರಥಮ, ಪ್ರೇಮ ಡಾಂಗೆ ದ್ವಿತೀಯ, ಪುಷ್ಪೇಂದ್ರ ತೃತೀಯ, 18 ರಿಂದ 34 ವರ್ಷ- ಶ್ರೀಕಂಠ ಪ್ರಥಮ, ವಿಜಯ ಸಂಜಯ ದ್ವಿತೀಯ, ಈರಪ್ಪ ಬ್ಯಾಡಗಿ ತೃತೀಯ, 35 ರಿಂದ 44 ವರ್ಷ- ರಾಜು ಪಿರಗಣ್ಣನವರ ಪ್ರಥಮ, ಸುರೇಶ ಎಂ. ದ್ವಿತೀಯ, ಸುರೇಶ ಐ. ಬಿರಾದಾರ ತೃತೀಯ, 45 ರಿಂದ 59 ವರ್ಷ- ತುಳಜಪ್ಪ ದಾಸರ ಪ್ರಥಮ, ಅತುಲ ಬಂಡಿವಡ್ಡರ ದ್ವಿತೀಯ, ಡಾ.ಜಿ.ಡಿ.ಅಕಮಂಚಿ ತೃತೀಯ, 60 ವರ್ಷ ಮೇಲ್ಪಟ್ಟವರು- ಸಂಜಯ ಆನಂದ ಪಾಟೀಲ ಪ್ರಥಮ, ಉದಯ ಮಹಾಜನ ದ್ವಿತೀಯ, ಕದೀರಅಹ್ಮದ್ ಮಣಿಯಾರ ತೃತೀಯ.

5 ಕಿ.ಮೀ ಮಹಿಳೆಯರ ವಿಭಾಗ:

12 ರಿಂದ 17 ವರ್ಷ- ಆರೋಹಿ ಪಟಮಾಸ ಪ್ರಥಮ, ಅಂಕಿತಾ ಯಾದವ ದ್ವಿತೀಯ, ಸ್ವರಾಂಜಲಿ ಭಾಂಡಗೆ ತೃತೀಯ. 18 ರಿಂದ 34 ವರ್ಷ- ನೂರಜಹಾನ ಮುಜಾವರ ಪ್ರಥಮ, ವಿಜಯಲಕ್ಣ್ಮಿ ಕರಲಿಂಗಣ್ಣನವರ ದ್ವಿತೀಯ, ನಕುಶಾ ಮಾನೆ ತೃತೀಯ. 35 ರಿಂದ 44 ವರ್ಷ- ಉಮಾ ಎಸ್.ಎಂ ಪ್ರಥಮ, ವೈಶಾಲಿ ಕೇಶವ ಗುಂಟುಕ ದ್ವಿತೀಯ, ಎಸ್.ಬಿ.ಕರಿಕಬ್ಬಿ ತೃತೀಯ, 45 ರಿಂದ 59 ವರ್ಷ- ವಿದ್ಯಾ ಬಿ.ಎಚ್ ಪ್ರಥಮ, ಆರ್.ವಿ. ಸೂರ್ಯವಂಶಿ ದ್ವಿತೀಯ, ಶೈಲಜಾ ಇಂಗಳೇಶ್ವರ ತೃತೀಯ. 60 ವರ್ಷ ಮೇಲ್ಪಟ್ಟವರು- ಗ್ಲ್ಯಾಡಿಸ್ ಪೈಸ್ ಪ್ರಥಮ, ಗಂಗವ್ವ ಬೆಳಗಾವಿ ದ್ವಿತೀಯ, ನೂರಜಹಾನ ಹುಲ್ಲೂರ ತೃತೀಯ ಸ್ಥಾನ ಪಡೆದಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

‘ಮುಂದಿನ ಸಿಎಂ ಯಾರು?’ ಎನ್ನುವ ಬಗ್ಗೆಯೂ ರಾಜ್ಯದಲ್ಲಿ ಬೆಟ್ಟಿಂಗ್‌ - ನಿಯಂತ್ರಿಸಿ'
ಕ್ರೈಂ ಹೆಚ್ಚಳಕ್ಕೆ ಸಿಬ್ಬಂದಿ ಕೊರತೆ ಕಾರಣ : ಡಾ.ಜಿ.ಪರಮೇಶ್ವರ್‌