ವಾಕರೂ ಜಾಹಿರಾತು ಫಲಕ ತೆರವು

KannadaprabhaNewsNetwork | Published : Nov 4, 2023 12:31 AM

ಸಾರಾಂಶ

ಚನ್ನಪಟ್ಟಣ: ತಾಲೂಕಿನ ಬೈರಾಪಟ್ಟಣದ ಬಳಿ ಬೆಂಗಳೂರು-ಮೈಸೂರು ಹೆದ್ದಾರಿ ಬದಿಯಲ್ಲಿ ಕರ್ನಾಟಕದ ಬಾವುಟಕ್ಕೆ ಬಳಸಲಾಗುವ ಹಳದಿ ಹಾಗೂ ಕೆಂಪು ಬಣ್ಣವನ್ನು ಬಳಸಿ ಅಳವಡಿಸಿದ್ದ ವಾಕರೂ ಪಾದರಕ್ಷೆ ಕಂಪನಿಯ ಜಾಹೀರಾತು ಫಲಕವನ್ನು ತೆರವುಗೊಳಿಸಲಾಗಿದೆ.
ಚನ್ನಪಟ್ಟಣ: ತಾಲೂಕಿನ ಬೈರಾಪಟ್ಟಣದ ಬಳಿ ಬೆಂಗಳೂರು-ಮೈಸೂರು ಹೆದ್ದಾರಿ ಬದಿಯಲ್ಲಿ ಕರ್ನಾಟಕದ ಬಾವುಟಕ್ಕೆ ಬಳಸಲಾಗುವ ಹಳದಿ ಹಾಗೂ ಕೆಂಪು ಬಣ್ಣವನ್ನು ಬಳಸಿ ಅಳವಡಿಸಿದ್ದ ವಾಕರೂ ಪಾದರಕ್ಷೆ ಕಂಪನಿಯ ಜಾಹೀರಾತು ಫಲಕವನ್ನು ತೆರವುಗೊಳಿಸಲಾಗಿದೆ. ಮಂಗಳವಾರ ಕನ್ನಡ ರಾಜ್ಯೋತ್ಸವದ ದಿನವೇ ಬೆಂ-ಮೈ ಹೆದ್ದಾರಿಯಲ್ಲಿ ಬೈರಾಪಟ್ಟಣದ ಬಳಿಯ ಖಾಸಗಿ ಜಮೀನಿನಲ್ಲಿ ಕರ್ನಾಟಕದ ಭಾವುಟಕ್ಕೆ ಬಳಸುವ ಹಳದಿ ಹಾಗೂ ಕೆಂಪು ಬಣ್ಣವನ್ನು ಬಳಸಿ ವಾಕರೂ ಪಾದರಕ್ಷೆ ಕಂಪನಿಯ ಜಾಹಿರಾತು ಫಲಕ ಅಳವಡಿಸಲಾಗಿತ್ತು. ಇದು ಗಮನಕ್ಕೆ ಬರುತ್ತಿದ್ದಂತೆ ಕಸ್ತೂರಿ ಕರ್ನಾಟಕ ಜನಪರ ವೇದಿಕೆ, ಕರುನಾಡ ಸೇನೆ, ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣ್‌ಶೆಟ್ಟಿ ಬಣ), ಕರ್ನಾಟಕ ರಕ್ಷಣಾ ವೇದಿಕೆಯ ಸ್ವಾಭಿಮಾನಿ ಸೇರಿದಂತೆ ಹಾಗೂ ವಿವಿಧ ಕನ್ನಡಪರ ಸಂಘಟನೆಗಳ ಪದಾಧಿಕಾರಿಗಳು ಜಾಹಿರಾತು ಫಲಕವನ್ನು ಹರಿದು ಪ್ರತಿಭಟನೆ ನಡೆಸಿದ್ದರು. ತಮಿಳುನಾಡು ಮೂಲಕ ವಾಕರೂ ಸಂಸ್ಥೆ ಕನ್ನಡ ರಾಜ್ಯೋತ್ಸವದ ದಿನವೇ ರಾಜ್ಯದಲ್ಲಿ ಅಳವಡಿಸಿರುವ ಜಾಹಿರಾತು ಫಲಕಗಳಿಗೆ ಕರ್ನಾಟಕದ ಬಾವುಟಕ್ಕೆ ಬಳಸುವ ಹಳದಿ ಹಾಗೂ ಕೆಂಪು ಬಣ್ಣವನ್ನು ಬಳಸುವ ಮೂಲಕ ರಾಜ್ಯಕ್ಕೆ ಅವಮಾನ ಮಾಡಿದ್ದು, ಈ ಕೂಡಲೇ ಕಂಪನಿಯ ಜಾಹೀರಾತು ಫಲಕವನ್ನು ತೆರವುಗೊಳಿಸುವಂತೆ ಆಗ್ರಹಿಸಿದ್ದರು. ಕನ್ನಡಪರ ಸಂಘಟನೆಗಳು ಹೋರಾಟಕ್ಕೆ ಮುಂದಾಗುತ್ತಿದ್ದಂತೆ ಎಚ್ಚೆತ್ತ ಮಳೂರು ಗ್ರಾಪಂನ ಅಧಿಕಾರಿಗಳು ಸ್ಥಳಕ್ಕೆ ಬಂದು ಜಾಹಿರಾತು ತೆರವುಗೊಳಿಸುವ ಬರವಸೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ಕನ್ನಡ ಬಾವುಟದ ಬಣ್ಣ ಬಳಸಿ ರಚಿಸಿದ್ದ ವಾಕರೂ ಚಪ್ಪಲಿಯ ಜಾಹೀರಾತು ಫಲಕವನ್ನು ತೆರವುಗೊಳಿಸಿ ಫಲಕಕ್ಕೆ ಬಿಳಿಯ ಬಣ್ಣ ಬಳಿಯಲಾಗಿದೆ. ಪೊಟೋ೩ಸಿಪಿಟಿ೨: ಚನ್ನಪಟ್ಟಣ ತಾಲೂಕಿನ ಬೈರಾಪಟ್ಟಣ ಗ್ರಾಮದ ಬಳಿ ಅಳವಡಿಸಿದ್ದ ವಾಕರೂ ಕಂಪನಿಯ ಜಾಹಿರಾತು ತೆರವುಗೊಳಿಸಿ ಫಲಕಕ್ಕೆ ಬಿಳಿ ಬಣ್ಣ ಬಳಿಯಲಾಗಿದೆ.

Share this article