ಕನ್ನಡಪ್ರಭ ವಾರ್ತೆ ಬೆಂಗಳೂರು
ರಾಜ್ಯ ಪೊಲೀಸ್ ಇಲಾಖೆ ಹಾಗೂ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ಸಹಯೋಗದಲ್ಲಿ ಭಾನುವಾರ ಆಯೋಜಿಸಿದ್ದ 3ನೇ ಆವೃತ್ತಿಯ ಪೊಲೀಸ್ ರನ್ ಸ್ಪರ್ಧೆಗೆ ವಿಧಾನಸೌಧದ ಬೃಹತ್ ಮೆಟ್ಟಿಲುಗಳ ಮುಂಭಾಗದಲ್ಲಿ ಹಸಿರು ನಿಶಾನೆ ತೋರಿ ಅವರು ಮಾತನಾಡಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತದ ಸರ್ಕಾರ ರಾಜ್ಯವನ್ನು ಮಾದಕ ವಸ್ತುಗಳ ವ್ಯಸನ ಮುಕ್ತಗೊಳಿಸುವ ಸಂಕಲ್ಪ ಹೊಂದಿದೆ. ಇದಕ್ಕಾಗಿ ರಾಜ್ಯದಲ್ಲಿ ಬೆಂಗಳೂರು ಸೇರಿದಂತೆ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲೂ ವಾಕಥಾನ್ ಅನ್ನು ಆಯೋಜಿಸುತ್ತಿದೆ. ಇದರ ಉದ್ದೇಶ ಜನಸಮುದಾಯದಲ್ಲಿ ಅದರಲ್ಲಿಯೂ ವಿಶೇಷವಾಗಿ ಯುವಕರಲ್ಲಿ ಮಾದಕ ವಸ್ತುಗಳ ವಿರುದ್ಧ ಜಾಗೃತಿ, ಸೈಬರ್ ಅಪರಾಧ ಕುರಿತು ತಿಳಿವಳಿಕೆ ನೀಡುವುದಾಗಿದೆ. ಮಾದಕ ವಸ್ತುಗಳ ಹಾವಳಿಯನ್ನು ಸವಾಲಾಗಿ ಸ್ವೀಕರಿಸಿದ್ದೇವೆ. ಅದನ್ನು ಮಟ್ಟ ಹಾಕಲು ನಿರಂತರ ಪ್ರಯತ್ನ ನಡೆಯುತ್ತಿದೆ. ಒಂದಲ್ಲಾ ಒಂದು ದಿನ ನಾವು ಗುರಿ ತಲುಪುತ್ತೇವೆ ಎಂದು ತಿಳಿಸಿದರು.ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಡಾ.ಎಂ.ಎ ಸಲೀಂ, ಎಸ್‌ಬಿಐ ಸಿಜಿಎಂ ಜೂಹಿ ಸ್ಮಿತಾ ಸಿನ್ಹಾ, ಡಿಜಿಪಿ ಪ್ರಣವ್ ಮೊಹಂತಿ, ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಭಾಗವಹಿಸಿದ್ದರು.
ಗೆದ್ದವರಿಗೆ ಬಹುಮಾನ