ಹಿಂದುಳಿದ ಪ್ರದೇಶದ ಅಭಿವೃದ್ಧಿಗೆ ಕಾಲ್ನಡಿಗೆ

KannadaprabhaNewsNetwork |  
Published : Aug 01, 2025, 12:00 AM IST
ಫೋಟೋ 31ಪಿವಿಡಿ1ಪಾವಗಡ ಪಟ್ಟಣದ 12ನೇ ವಾರ್ಡಿನಲ್ಲಿ ವೃದ್ದ ಕಾರ್ಮಿಕ ಮಹಿಳೆಯೊಬ್ಬರ ಆರೋಗ್ಯ ಹಾಗೂ ಜೀವನ ಸ್ಥಿತಿಗತಿ ಕುರಿತು ಶಾಸಕ ಎಚ್‌.ವಿ.ವೆಂಕಟೇಶ್‌ ಹಾಗೂ ಪುರಸಭೆ ಅಧ್ಯಕ್ಷ ಸುದೇಶ್‌ಬಾಬು ಮಾಹಿತಿ ಸಂಗ್ರಹಿಸಿ ಅಭಿವೃದ್ಧಿ ಭರವಸೆ ವ್ಯಕ್ತಪಡಿಸಿದರು.ಫೋಟೋ 31ಪಿವಿಡಿ2ಪಟ್ಟಣದ 5ನೇ ವಾರ್ಡ್‌ ಗುಟ್ಟಹಳ್ಳಿಯ ಅಭಿವೃದ್ದಿ ಕುರಿತು ಶಾಸಕ ಎಚ್‌.ವಿ.ವೆಂಕಟೇಶ್‌ ಪರಿಶೀಲನೆ ನಡೆಸಿ ನೈರ್ಮಲ್ಯ ಶುಚಿತ್ವ ಕಾಪಾಡುವಂತೆ ಮುಖ್ಯಾಧಿಕಾರಿ ಜಾಫರ್‌ ಷರೀಫ್‌ರಿಗೆ ಆದೇಶಿಸಿದರು.ಫೋಟೋ 31ಪಿವಿಡಿ3ಪಟ್ಟಣದ ಕುರುಬರ ಬೀದಿ ವಾರ್ಡ್‌ಗೆ ಭೇಟಿ ನೀಡಿದ ಶಾಸಕ ಎಚ್‌.ವಿ.ವೆಂಕಟೇಶ್‌,ಸಮಸ್ಯೆ ಕುರಿತು ಅಲಿಸಿ ಕೂಡಲೇ ಹೈಮಾಸ್‌ ಲೈಟ್‌ ಮತ್ತು ಸಿಸಿರಸ್ತೆ ಪ್ರಗತಿಗೆ ಅಧ್ಯತೆ ನೀಡುವ ಭರವಸೆ ವ್ಯಕ್ತಪಡಿಸಿ ವಾರ್ಡ್‌ನ ಸಾರ್ವಜನಿಕರಿಂದ ಸನ್ಮಾನ ಸ್ವೀಕರಿಸಿದರು.    | Kannada Prabha

ಸಾರಾಂಶ

ಅಭಿವೃದ್ಧಿಗೆ ವಿಶೇಷ ಒತ್ತು ನೀಡಿ ಹೆಚ್ಚು ಅನುದಾನ ಕಲ್ಪಿಸಿ ಪ್ರಗತಿಗೆ ಆದ್ಯತೆ ನೀಡುವುದಾಗಿ ಶಾಸಕ ಹಾಗೂ ತುಮುಲ್‌ ಅಧ್ಯಕ್ಷ ಎಚ್‌.ವಿ.ವೆಂಕಟೇಶ್‌ ಹೇಳಿದರು.

ಕನ್ನಡಪ್ರಭವಾರ್ತೆ ಪಾವಗಡ

ಪಾವಗಡ ನಗರದ ಉತ್ತರ ಭಾಗಕ್ಕಿರುವ ಅತ್ಯಂತ ಹಿಂದುಳಿದ ಗುಟ್ಟಹಳ್ಳಿ ಹಾಗೂ ಪಶ್ಚಿಮ ಭಾಗದ ರೈನ್‌ಗೆಜ್‌ ಬಡಾವಣೆಯ ಸರ್ವತೋಮುಖ ಅಭಿವೃದ್ಧಿಗೆ ವಿಶೇಷ ಒತ್ತು ನೀಡಿ ಹೆಚ್ಚು ಅನುದಾನ ಕಲ್ಪಿಸಿ ಪ್ರಗತಿಗೆ ಆದ್ಯತೆ ನೀಡುವುದಾಗಿ ಶಾಸಕ ಹಾಗೂ ತುಮುಲ್‌ ಅಧ್ಯಕ್ಷ ಎಚ್‌.ವಿ.ವೆಂಕಟೇಶ್‌ ಹೇಳಿದರು.

ಕಾಲ್ನೆಡಿಗೆ ಮೂಲಕ ಪಟ್ಟಣದ 23ವಾರ್ಡ್ ಗಳ ಪರ್ಯಾಟನೆ ನಡೆಸಿ, ಮೂಲಭೂತ ಸಮಸ್ಯೆ ಕುರಿತು ಮಾಹಿತಿ ಸಂಗ್ರಹಿಸಿದ ಶಾಸಕರು, ನಗರದ ವಿನಾಯಕ ನಗರ, ರೆಡ್ಡಿ ಕಾಲೋನಿ, ಬನಶಂಕರಿ, ಶಾಂತಿ ನಗರ, ಹಳೇಕುಂಬಾರರ ಬೀದಿ, ಗಾಂಧಿನಗರ ಕನ್‌ ಮಾನ್‌ ಚೆರ್ಲು, ಗುಟ್ಟಹಳ್ಳಿ ಆದರ್ಶ ನಗರ, ಇತರೆ 23 ವಾರ್ಡ್ ಗಳ ಭೇಟಿ ಪರಿಶೀಲನೆ ನಡೆಸಿದರು.

ರೈಜ್‌ಗೆಜ್‌ ಬಡಾವಣೆಯಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಜನತೆಯ ಅಶೀರ್ವಾದದಿಂದ ಶಾಸಕರಾಗಿ ಆಯ್ಕೆಯಾಗಿದ್ದು ಚುನಾವಣೆ ವೇಳೆ ಜನತೆಗೆ ನೀಡಿದ ಭರವಸೆ ಈಡೇರಿಸಲು ಬದ್ಧರಿದ್ದೇವೆ. ಕೊಟ್ಟ ಮಾತಿನಂತೆ ವಿವಿಧ ಯೋಜನೆ ಅಡಿ ನಗರ ಹಾಗೂ ತಾಲೂಕಿನ ಪ್ರಗತಿಗೆ ವಿಶೇಷ ಒತ್ತು ನೀಡಲಾಗಿದೆ . ತಾಲೂಕಿನ ಬೊಮ್ಮತನಹಳ್ಳಿಯಿಂದ ಭೋವಿ ಕಾಲೋನಿ ರಸ್ತೆ ಪ್ರಗತಿಗೆ 50ಲಕ್ಷ ವಿನಿಯೋಗಿಸಿದ್ದು, ರೈನ್‌ಗೆಜ್‌ ಬಡಾವಣೆಯಲ್ಲಿ ಸಿಸಿರಸ್ತೆ ಪ್ರಗತಿಗೆ 10ಲಕ್ಷ ಹಾಗೂ ಸಿದ್ದಲಿಂಗಪ್ಪ ಮನೆ ಬಳಿ ಆನಾಹುತ ತಪ್ಪಿಸಲು ರಕ್ಷಣೆ ಗೋಡೆ, ಗುಟ್ಟಹಳ್ಳಿಯಲ್ಲಿ ಕಾಂಕ್ರಿಟ್‌ ರಸ್ತೆ, ಶೌಚಗೃಹ, ಹಾಗೂ ಸೊಳ್ಳೆ ಹಂದಿ ಇತರೇ ಕ್ರಿಮಿ ಕೀಟದ ಹಾವಳಿ ತಪ್ಪಿಸಲು ಚರಂಡಿಯ ಮೇಲ್ಬಾಗದ ಮುಚ್ಚಳ, ನೈರ್ಮಲ್ಯ, ಹಾಗೂ ಇತರೆ ಮೂಲಭೂತ ಸೌಲಭ್ಯ ಕಲ್ಪಿಸಿ ಮಾದರಿ ವಾರ್ಡ್‌ನ್ನಾಗಿ ರೂಪಿಸಲು ಮುಖ್ಯಾಧಿಕಾರಿ ಜಾಫರ್ ಷರೀಫ್‌ಗೆ ಆದೇಶಿಸಲಾಗಿದೆ ಎಂದರು.

ಮನೆಮನೆಯ ಕುಡಿಯುವ ನೀರು ಸರಬರಾಜ್‌ನ ಪೈಪ್‌ ಲೈನ್‌ ಕಾಮಗಾರಿ ತ್ವರಿತವಾಗಿ ಪೂರೈಸಿ, ಗುಂಡಿಗಳನ್ನು ಸಿಮೆಂಟ್‌ನಲ್ಲಿ ಮುಚ್ಚುವಂತೆ ,ಅಮೃತ್‌ ಯೋಜನೆ ವಿಭಾಗದ ಎಂಜಿನಿಯರ್‌ ಚಂದ್ರಶೇಖರ್‌ಗೆ ಆದೇಶಿಸಿದ್ದು, ಶ್ರೀನಿವಾಸ ನರದ ಜೈನ್‌ ದೇವಾಲಯ ನಿರ್ಮಾಣಕ್ಕೆ 10ಲಕ್ಷ ಹಾಗೂ ಭೋವಿ ಕಾಲೋನಿಯ ಸಮುದಾಯ ಭವನಕ್ಕೆ 10ಲಕ್ಷ ಹಾಗೂ ಕಾಂಪೌಂಡ್‌ ನಿರ್ಮಾಣಕ್ಕೆ ಅನುದಾನ ಕಲ್ಪಿಸಲು ಈಗಾಗಲೇ ಭರವಸೆ ವ್ಯಕ್ತಪಡಿಸಿರುವುದಾಗಿ ಹೇಳಿದರು. ಸರ್ಕಾರಿ ಕ್ರೀಡಾಂಗಣವನ್ನು ಅಭಿವೃದ್ಧಿ ಪಡಿಸುವ ಸಲುವಾಗಿ ಸ್ಥಳಕ್ಕೆ ಭೇಟಿ ನೀಡಿದ ಶಾಸಕರು, ಕ್ರೀಡಾಂಗಣದಲ್ಲಿ 6 ಹೈ ಮಾಸ್ಕ್ ಲೈಟ್, ವಾಕಿಂಗ್ ಪಾತ್ ಮತ್ತು ಗಿಡಗಳನ್ನು ಬೆಳೆಸುವುದಕ್ಕೆ ಕ್ರಿಯಾಯೋಜನೆ ಸಿದ್ದಪಡಿಸುವಂತೆ ಕೆಆರ್ ಐಡಿಎಲ್‌ ಅಧಿಕಾರಿಗಳಿಗೆ ಸ್ಥಳದಲ್ಲಿಯೇ ಸೂಚಿಸಿದರು.ಇದೇ ವೇಳೆ ಪುರಸಭೆ ಅಧ್ಯಕ್ಷರಾದ ಸುದೇಶ್‌ಬಾಬು, ಮುಖ್ಯಾಧಿಕಾರಿ ಜಾಫರ್‌ ಷರೀಫ್‌,ಆರೋಗ್ಯಾಧಿಕಾರಿ ಶಂಷುದ್ದೀನ್‌, ಎಂಜಿನಿಯರ್ ಯಂಜೇಶ್‌ಬಾಬು, ಅಮೃತ್‌ ಯೋಜನೆಯ ಎಂಜಿನಿಯರ್‌ ಚಂದ್ರಶೇಖರ್‌ , ಮುಖಂಡರಾದ ಎ.ಶಂಕರರೆಡ್ಡಿ, ಮಹಮ್ಮದ್‌ ಇತರರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪತ್ರಕರ್ತ ತಗಡೂರಿಗೆ ಲೋಹಿಯಾ ಪ್ರಶಸ್ತಿ ಪ್ರದಾನ
ಕನ್ನಡದಲ್ಲಿ ರೈಲ್ವೆ ಪರೀಕ್ಷೆಗೆ ಇಲಾಖೆ : ಕರವೇ