ವಿಜಯಪುರ: ನಗರದ ಮನಗೂಳಿ ಅಗಸಿ ಹತ್ತಿರದ ಫತ್ಹೇ ದರವಾಜಾ ಮಸೀದಿ ಜಮಾತ್ ವತಿಯಿಂದ ವಕ್ಫ್ ಸಲಹಾ ಸಮಿತಿ ನೂತನ ಪದಾಧಿಕಾರಿಗಳು ಹಾಗೂ ಚಿನ್ನದ ಪದಕ ಪಡೆದ ಸಾಧಕರಿಗೆ ಸನ್ಮಾನಿಸಲಾಯಿತು. ಮಹಾನಗರ ಪಾಲಿಕೆಯ ಆಯುಕ್ತ ಬಿ.ಎ.ಸೌದಾಗರ ಮಾತನಾಡಿ, ಜ್ಞಾನಕ್ಕಿಂತ ಮಿಗಿಲಾದುದು ಯಾವುದು ಇಲ್ಲ. ಎಲ್ಲ ಕಡೆ ಶಿಕ್ಷಣವಂತರಿಗೆ ಮಾತ್ರ ಬೆಲೆಯಿದ್ದು, ಪ್ರತಿಯೊಬ್ಬರೂ ಉತ್ತಮ ಶಿಕ್ಷಣವಂತರಾಗಿ ಸಮಾಜಮುಖಿ ಜೀವನ ರೂಪಿಸಿಕೊಳ್ಳಬೇಕು ಎಂದು ಹೇಳಿದರು.
ಮಾಜಿ ಮೇಯರ್ ಸಜ್ಜಾದೆಪೀರಾ ಮುಶ್ರೀಫ್ ಹಾಗೂ ಜಿಲ್ಲಾ ವಕ್ಫ್ ಕಮೀಟಿಯ ಉಪಾಧ್ಯಕ್ಷ ಅಲ್ತಾಪ ಲಕ್ಕುಂಡಿ ಮಾತನಾಡಿ, ನಮ್ಮ ಸಮಾಜದಲ್ಲಿ ಸಾಕಷ್ಟು ಶಿಕ್ಷಣದ ಕೊರತೆಯಿದೆ. ಒಂದು ಹೊತ್ತು ಊಟ ಕಡಿಮೆ ಮಾಡಿಯಾದರೂ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಬೇಕು ಎಂದರು.ಜಿಲ್ಲಾ ವಕ್ಫ್ ಕಮೀಟಿ ನೂತನ ಚೇರಮನ್ ನಿಯಾಜ್ ಕೌಸರ್ ಇನಾಮದಾರ, ನನ್ನ ಅಧಿಕಾರಾವಧಿಯಲ್ಲಿ ಜಿಲ್ಲಾ ವಕ್ಫ್ ಕಮಿಟಿ ವ್ಯವಸ್ಥೆಯನ್ನು ಬದಲಾಯಿಸುತ್ತೇನೆ. ಸರಕಾರದಿಂದ ಬರುವ ಸೌಲಭ್ಯಗಳನ್ನು ಅರ್ಹರಿಗೆ ತಲುಪಿಸಲು ಪ್ರಮಾಣಿಕ ಪ್ರಯತ್ನ ಮಾಡುವುದಾಗಿ ತಿಳಿಸಿದರು.
ನ್ಯಾಯವಾದಿ ಎ.ಎಂ.ತಾಂಬೋಳಿ, ವಕ್ಫ್ ಆಸ್ತಿಯನ್ನು ಯಾರೊಬ್ಬರೂ ದುರುಪಯೋಗ ಪಡಿಸಿಕೊಳ್ಳಬಾರದು. ಅದರ ಸಂರಕ್ಷಣೆ ನಮ್ಮ ಆದ್ಯ ಕರ್ತವ್ಯವಾಗಬೇಕೆಂದರು.ಪತ್ರಕರ್ತ ಇರಫಾನ್ ಶೇಖ್ ಪ್ರಸ್ತಾವಿಕವಾಗಿ ಮಾತನಾಡಿದರು. ಶಿಕ್ಷಕ-ಸಾಹಿತಿ ಕಬೂಲ್ ಕೊಕಟನೂರ, ನೂರಹಮ್ಮದ್ ಅತ್ತಾರ, ನ್ಯಾಯವಾದಿ ಅಸ್ಲಾಂ ಅತ್ತಾರ, ರಾಜೀವಗಾಂಧಿ ಆರೋಗ್ಯ ವಿವಿಯಿಂದ ಚಿನ್ನದ ಪದಕ ಪಡೆದ ದಿಲಶಾದ್ ಬಣಗಾರ, ಆಶೀಫ್ ಬಣಗಾರ, ಮುದಸ್ಸರ ಖುರೇಶಿ, ಆಬಿದ್ ಇಮಾರತವಾಲೆ, ಶೈಕತ್ ಇನಾಮದಾರ, ರಶೀದ ಇನಾಮದಾರ, ಸಲೀಮ್ ಇನಾಮದಾರ, ಗಫೂರ ಇಮಾರತವಾಲೆ, ಮುನ್ನಾ ಮುಲ್ಲಾ, ಇಸಾಕ್ ಲಕ್ಕುಂಡಿ, ಅಪ್ಪು ನಾಗಠಾಣ, ಮೊಮೀನ್ ಸರ್, ಸಮದ ಮದಭಾವಿ, ರಹಿಮಾ ಮೊಮೀನ್, ಹಾಜಿ ಪಿಂಜಾರ, ಆಶೀಪ್ ಕನ್ನೂರ, ಹನೀಫ್ ಕನ್ನೂರ, ಬಿಸ್ಮಿಲ್ಲಾ ಲಕ್ಕುಂಡಿ, ಚಾಂದ ಮುಲ್ಲಾ, ಗುಡುಲಾಲ್ ಟುಬಾಕೆ ಸೇರಿದಂತೆ ಹಲವರು ಭಾಗವಹಿಸಿದ್ದರು.