ವಕ್ಫ್‌ ಹೋರಾಟ: ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಪ್ಲಾನ್‌ ಭಿನ್ನರಿಂದ ಹೈಜಾಕ್‌?

KannadaprabhaNewsNetwork |  
Published : Nov 17, 2024, 01:20 AM ISTUpdated : Nov 17, 2024, 07:26 AM IST
BY vijayendraa

ಸಾರಾಂಶ

ವಕ್ಫ್ ಅವಾಂತರದ ವಿರುದ್ಧ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ರೂಪಿಸಲು ಯೋಜಿಸಿದ್ದ ಹೋರಾಟವನ್ನು ಪಕ್ಷದ ಭಿನ್ನಮತೀಯ ನಾಯಕರು ಹೈಜಾಕ್‌ ಮಾಡಿ, ವಿಜಯೇಂದ್ರಗಿಂತಲೂ ಮೊದಲೇ ಅದನ್ನು ಘೋಷಿಸಿದ್ದಾರೆಯೇ ಎಂಬ ಪ್ರಶ್ನೆ ಬಿಜೆಪಿ ಪಾಳೆಯದಲ್ಲಿ ಕೇಳಿಬಂದಿದೆ.

 ಬೆಂಗಳೂರು : ವಕ್ಫ್ ಅವಾಂತರದ ವಿರುದ್ಧ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ರೂಪಿಸಲು ಯೋಜಿಸಿದ್ದ ಹೋರಾಟವನ್ನು ಪಕ್ಷದ ಭಿನ್ನಮತೀಯ ನಾಯಕರು ಹೈಜಾಕ್‌ ಮಾಡಿ, ವಿಜಯೇಂದ್ರಗಿಂತಲೂ ಮೊದಲೇ ಅದನ್ನು ಘೋಷಿಸಿದ್ದಾರೆಯೇ ಎಂಬ ಪ್ರಶ್ನೆ ಬಿಜೆಪಿ ಪಾಳೆಯದಲ್ಲಿ ಕೇಳಿಬಂದಿದೆ.

ಉಪ ಚುನಾವಣೆ ಮುಗಿಯುತ್ತಿದ್ದಂತೆ ವಕ್ಫ್ ವಿರುದ್ಧ ಹೋರಾಟ ರೂಪಿಸಲು ಬಿ.ವೈ.ವಿಜಯೇಂದ್ರ ತೀರ್ಮಾನಿಸಿದ್ದರು. ಇದಕ್ಕಾಗಿ ತಮ್ಮ ಆಪ್ತ ವಲಯದಲ್ಲಿ ಚರ್ಚಿಸಿ ಹೋರಾಟದ ರೂಪರೇಷೆ ನಿರ್ಧರಿಸಿದ್ದರು. ವಿಧಾನಸಭಾ ಚಳಿಗಾಲದ ಅಧಿವೇಶನದ ದಿನಾಂಕ ನೋಡಿಕೊಂಡು ಹೋರಾಟ ಘೋಷಿಸುವ ಯೋಜನೆ ಹಾಕಿಕೊಂಡಿದ್ದರು ಎನ್ನಲಾಗಿದೆ.

ಆದರೆ, ಅದಕ್ಕೂ ಮೊದಲೇ ಬಿಜೆಪಿಯ ಭಿನ್ನಮತೀಯ ನಾಯಕರು ಪತ್ರಿಕಾಗೋಷ್ಠಿ ನಡೆಸಿ, ರಾಜ್ಯಾದ್ಯಂತ ಸಂಚರಿಸಿ ವಕ್ಫ್‌ ಅವಾಂತರದ ವಿರುದ್ಧ ಹೋರಾಟ ನಡೆಸುವ ಬಗ್ಗೆ ಘೋಷಿಸಿದ್ದಾರೆ. ಹೀಗಾಗಿ ವಿಜಯೇಂದ್ರ ಆಪ್ತ ವಲಯದಲ್ಲಿದ್ದವರೇ ಯಾರೋ ಮಾಹಿತಿ ಸೋರಿಕೆ ಮಾಡಿದ್ದಾರೆಯೇ ಎಂಬ ಅನುಮಾನ ವಿಜಯೇಂದ್ರ ಟೀಮ್‌ನಲ್ಲಿ ವ್ಯಕ್ತವಾಗಿದೆ.

ವಕ್ಫ್ ವಿರುದ್ಧ ಪಕ್ಷವು ಅಧಿಕೃತವಾಗಿ ಹೋರಾಟ ಘೋಷಿಸುವ ಮೊದಲೇ ಬಸನಗೌಡ ಯತ್ನಾಳ್ ತಂಡ ಹೋರಾಟ ಘೋಷಿಸಿದ್ದು ವಿಜಯೇಂದ್ರ ಅವರ ತಂಡಕ್ಕೆ ಅಚ್ಚರಿ ತಂದಿದೆ. ಈ ಹಿನ್ನೆಲೆಯಲ್ಲಿ ತರಾತುರಿಯಲ್ಲಿ ಬಿಜೆಪಿಯ ಅಧಿಕೃತ ತಂಡ ರಚನೆಯಾಗಿ ಪ್ರಕಟವಾಯಿತಲ್ಲದೇ, ಶನಿವಾರ ಮತ್ತೆ ತಂಡದ ಪಟ್ಟಿಯ ಪರಿಷ್ಕರಣೆಯೂ ನಡೆದಿದೆ. ವಿಧಾನಮಂಡಲ ಅಧೀವೇಶನ ದಿನಾಂಕ ನೋಡದೇ ಹೋರಾಟ ಪ್ರಕಟಿಸಿರುವುದು ಹೋರಾಟದ ನಿರಂತರತೆ ಅಡ್ಡಿಯಾಗಹುದು ಎಂಬ ಅನುಮಾನ ಪಕ್ಷದಲ್ಲಿ ವ್ಯಕ್ತವಾಗಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಾಜ್ಯದಲ್ಲಿ ಮದ್ಯ ಮಾರಾಟ ನಿಷೇಧವಾಗುತ್ತಾ ?
ಯಾವ ದೇವ್ರಿಗೆ ಪೂಜೆ ಮಾಡಿಸಿದ್ದೀರಿ? : ಮಧುಗೆ ರವಿ!