ಮತಾಂತರ ಪ್ರಚೋದಿತ ಕಾರ್ಯಕ್ರಮಕ್ಕೆ ಪರವಾನಿಗೆ ನೀಡಿದರೆ ಹೋರಾಟದ ಎಚ್ಚರಿಕೆ

KannadaprabhaNewsNetwork |  
Published : Mar 17, 2026, 02:45 AM IST
ಸಾಧಕರಿಗೆ ನೀಡಲಾಗುವ ಪ್ರತಿಷ್ಠಿತ ಕೆ.ಎಚ್.ಪಾಟೀಲ ಪ್ರಶಸ್ತಿಯನ್ನು ಈ ಬಾರಿ ಪದ್ಮಶ್ರೀ ಪುರಸ್ಕೃತರು ಹಾಗೂ ಮಾಜಿ ರಾಜ್ಯಸಭಾ ಸದಸ್ಯ ಡಾ. ಪ್ರಭಾಕರ ಕೋರೆ ಅವರಿಗೆ ಪ್ರದಾನ ಮಾಡಿ ಗೌರವಿಸಲಾಯಿತು. | Kannada Prabha

ಸಾರಾಂಶ

ನಗರದ ಮಿಶನ್‌ ಆಸ್ಪತ್ರೆಯ ಪರಿಸರದಲ್ಲಿ ಮಾ. 20ರಿಂದ 22ರವರೆಗೆ ತಮಿಳುನಾಡಿನ ವಿವಾದಾತ್ಮಕ ಮೋಹನ್ ಸಿ. ಲಾಝರಸ್ ಎಂಬವರು ನಡೆಸಿಕೊಡುವ ಸಮಾಧಾನ ಮಹೋತ್ಸವಕ್ಕೆ ಅವಕಾಶ ನೀಡಬಾರದು ಎಂದು ಹಿಂದೂ ಜಾಗರಣಾ ವೇದಿಕೆ ಜಿಲ್ಲಾಡಳಿತವನ್ನು ಆಗ್ರಹಿಸಿದೆ.

ಉಡುಪಿ: ನಗರದ ಮಿಶನ್‌ ಆಸ್ಪತ್ರೆಯ ಪರಿಸರದಲ್ಲಿ ಮಾ. 20ರಿಂದ 22ರವರೆಗೆ ತಮಿಳುನಾಡಿನ ವಿವಾದಾತ್ಮಕ ಮೋಹನ್ ಸಿ. ಲಾಝರಸ್ ಎಂಬವರು ನಡೆಸಿಕೊಡುವ ಸಮಾಧಾನ ಮಹೋತ್ಸವಕ್ಕೆ ಅವಕಾಶ ನೀಡಬಾರದು ಎಂದು ಹಿಂದೂ ಜಾಗರಣಾ ವೇದಿಕೆ ಜಿಲ್ಲಾಡಳಿತವನ್ನು ಆಗ್ರಹಿಸಿದೆ.ಈಗಾಗಲೇ ಬೇರೆ ರಾಜ್ಯಗಳಲ್ಲಿ ಮೋಹನ್ ಲಾಝರಸ್‌ ಮೇಲೆ ಮತಾಂತರ ಪ್ರಕರಣಗಳು ದಾಖಲಾಗಿವೆ. ಉಡುಪಿಯಲ್ಲಿ ಈ ಸಮಾಧಾನ ಮಹೋತ್ಸವವು ಮತಾಂತರದ ಷಡ್ಯಂತ್ರವಾಗಿದ್ದು, ಇದಕ್ಕೆ ಅವಕಾಶ ನೀಡಿದರೆ ತೀವ್ರ ಹೋರಾಟ ಮಾಡುತ್ತೇವೆ ಎಂದು ವೇದಿಕೆಯ ವತಿಯಿಂದ ಜಿಲ್ಲಾಧಿಕಾರಿ ಮತ್ತು ಪೊಲೀಸ್ ವರಿಷ್ಠಾಧಿಕಾರಿ ಅವರಿಗೆ ಮನವಿ ಸಲ್ಲಿಸಲಾಗಿದೆ.

ಈ ಬಗ್ಗೆ ವೇದಿಕೆಯ ದಕ್ಷಿಣ ಪ್ರಾಂತ ಪ್ರಮುಖ್ ಶ್ರೀಕಾಂತ ಶೆಟ್ಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ವಿರೋಧಿ ಭಾಷಣ ಮಾಡುವ ಮೋಹನ್ ಸಿ. ಲಾಝರಸ್ ಅವರು ಈ ಹಿಂದೆ ''''''''''''''''ಹಿಂದೂ ದೇವಾಲಯಗಳು ಸೈತಾನನ ನೆಲೆಗಳು'''''''''''''''' ಎಂದು ಹೇಳಿ ಕೋಟ್ಯಂತರ ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ. ಅವರ ಈ ಭಾಷಣಕ್ಕೆ ತಮಿಳುನಾಡಿನ 7ಕ್ಕೂ ಹೆಚ್ಚು ಪೊಲೀಸ್ ಠಾಣೆಗಳಲ್ಲಿ ಐಪಿಸಿ ಸೆಕ್ಷನ್ 153ಎ ಮತ್ತು 295ಎ ಅಡಿಯಲ್ಲಿ ಎಫ್‌ಐಆರ್ ದಾಖಲಾಗಿತ್ತು. ನಂತರ ಅವರು ನ್ಯಾಯಾಲಯದಲ್ಲಿ ತಮ್ಮ ಹೇಳಿಕೆಗೆ ಬೇಷರತ್ ಕ್ಷಮೆ ಕೇಳಿದ್ದರು ಎಂದರು.ಅಲ್ಲದೇ ಅವರು ನಡೆಸುವ ‘ಜೀಸಸ್ ರಿಡೀಮ್ಸ್’ ಎಂಬ ಸಂಸ್ಥೆಯ ಮೇಲೆ ವಿದೇಶಿ ದೇಣಿಗೆ ನಿಯಂತ್ರಣ ಕಾಯ್ದೆಯನ್ನು ಉಲ್ಲಂಘಿಸಿದ್ದಕ್ಕೂ ಎಫ್‌ಐಆರ್ ದಾಖಲಾಗಿದೆ. ಈ ಸಂಸ್ಥೆ ವಿದೇಶಗಳಿಂದ ಬಂದ ಹಣವನ್ನು ಕೋಮು ಸೌಹಾರ್ದ ಕೆಡಿಸುವ ಕೆಲಸಗಳಿಗೆ ಬಳಸುತ್ತಿದೆ, ದೇಶ ವಿರೋಧಿ ಚಟುವಟಿಕೆಗಳನ್ನು ನಡೆಸುತ್ತಿದೆ ಎಂಬ ಗಂಭೀರ ಆರೋಪದ ಮೇಲೆ ಕೇಂದ್ರ ಗೃಹ ಸಚಿವಾಲಯವು ಈ ಸಂಸ್ಥೆಯ ಪರವಾನಿಗೆಯನ್ನೇ ಅಮಾನತುಗೊಳಿಸಿದೆ ಎಂದು ವಿವರಗಳ‍ನ್ನು ನೀಡಿದರು.

ರಾಜ್ಯದಲ್ಲಿ ಸಿದ್ದರಾಮಯ್ಯ ಸರ್ಕಾರ ಮೌಡ್ಯ ನಿಷೇಧ ಕಾಯ್ದೆಯನ್ನು ಜಾರಿಗೆ ತಂದಿದೆ, ಈ ಸಮಾಧಾನ ಕಾರ್ಯಕ್ರಮದಲ್ಲಿ ಪ್ರಾರ್ಥನೆ ಮೂಲಕ ರೋಗಗಳನ್ನು ಗುಣುಪಡಿಸುವುದಾಗಿ ಹೇಳುವ ಈ ಮಿಷನರಿ ಮೇಲೆ ಈ ಕಾಯ್ದೆಯಂತೆ ಪ್ರಕರಣ ದಾಖಲಿಸಬೇಕು ಎಂದೂ ಅವರು ಆಗ್ರಹಿಸಿದರು.

ಉಡುಪಿ ದೇಗುಲಗಳ ಪವಿತ್ರ ಭೂಮಿ, ಇಲ್ಲಿ ಅನಗತ್ಯವಾಗಿ ಶಾಂತಿಯನ್ನು ಕೆಡಿಸುವ ಇಂತಹ ಸಮಾಧಾನ ಮಹೋತ್ಸವಗಳಿಗೆ ಅವಕಾಶ ನೀಡಬಾರದು, ಈ ಕಾರ್ಯಕ್ರಮದ ಸಂಘಟಕರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು. ಕಾರ್ಯಕ್ರಮ ನಡೆಸಿದರೆ ವಿವಿಧ ಸಂಘಟನೆಗಳ ಮೂಲಕ ಹೋರಾಟ ನಡೆಸುವುದು ಅನಿವಾರ್ಯವಾಗುತ್ತದೆ ಎಂದರು.

ಸುದ್ಧಿಗೋಷ್ಠಿಯಲ್ಲಿ ಹಿಂ.ಜಾ.ವೇ. ಜಿಲ್ಲಾ ಸಂಯೋಜಕ ರಾಜೇಶ್ ಉಚ್ಚಿಲ, ಜಿಲ್ಲಾ ಪ್ರಮುಖರಾದ ರತ್ನಾಕರ ಅಮೀನ್, ಗುರುಪ್ರಸಾದ್ ನಾರಾವಿ, ನಗರಸಭಾ ಸದಸ್ಯ ವಿಜಯ ಕೊಡವೂರು ಮುಂತಾದವರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಜಾನಪದ ಕಲೆಗಳಿಗೆ ಪ್ರಕೃತಿ ನಿಕಟ ಸಂಬಂಧ: ಟಿ.ಪಿ. ರಮೇಶ್
ಮೂಡುಬಿದಿರೆ ಇನ್ಸ್‌ಪೆಕ್ಟರ್ ಪ್ರಕರಣ: ಪೀಡಿತೆಯರಿದ್ದರೆ ದೂರು ನೀಡಲು ಸಲಹೆ