ರೈತರ ಸುಸ್ಥಿರ ಅಭಿವೃದ್ಧಿಗೆ ಜಲಸಮೃದ್ಧಿ ಅಡಿಪಾಯ: ಸಚಿವ ಡಾ.ಅಜಯ್‌ ಸಿಂಗ್‌

KannadaprabhaNewsNetwork |  
Published : Nov 04, 2026, 12:15 AM IST
ಫೋಟೋ- ಕೆಕೆ ಅಜಯ್‌ 1, ಕೆಕೆ ಅಜಯ್‌ 2, ಕೆಕ ಅಜಯ್‌ 3ಬೆಂಗಳೂರಿನ ಸಣ್ಣ ನೀರಾವರಿ ಇಲಾಖೆ ಮುಖ್ಯ ಇಂಜಿನಿಯರ್‌ ಕಚೇರಿಯಲ್ಲಿ ನಡೆದ ಕಲ್ಯಾಣ ನಾಡಿನ 7 ಜಿಲ್ಲೆಗಳ ಸಣ್ಣ ನೀರಾವರಿಗೆ ಕಾಯಕಲ್ಪ ಕೊಡುವ ಮಹತ್ವದ ಸಭೆಯಲ್ಲಿ ಸಚಿವ ಡಾ. ಅಜಯ್‌ ಸಿಂಗ್‌, ಉನ್ನತ ಅಧಿಕಾರಿಗಳು ಪಾಲ್ಗೊಂಡಿದ್ದರು. | Kannada Prabha

ಸಾರಾಂಶ

ಕಲ್ಯಾಣ ಕರ್ನಾಟ ಪ್ರದೇಶದ 7 ಜಿಲ್ಲೆಗಳು, 41 ಅಸೆಂಬ್ಲಿ ಕ್ಷೇತ್ರಗಳಲ್ಲಿನ ಸುಸ್ಥಿರ ಅಭಿವೃದ್ಧಿಗೆ ಸಮ್ಣ ನೀರಾವರಿ ರಂಗದಲ್ಲಿ ಹೊಸ ಯೋಜನೆ ರೂಪಿಸಿ ಜಲ ಸಮೃದ್ದಿಯ ಭದ್ರ ಬುನಾದಿ ಹಾಕಲು ಸಣ್ಣ ನೀರಾವರಿ ಸಚಿವ ಡಾ. ಅಜಯ್‌ ಧರ್ಮಸಿಂಗ್‌ ಸಂಕಲ್ಪ ಮಾಡಿದ್ದಾರೆ.

ಕನ್ನಡಪ್ರಭ ವಾರ್ತೆ ಕಲಬುರಗಿ ಕಲ್ಯಾಣ ಕರ್ನಾಟ ಪ್ರದೇಶದ 7 ಜಿಲ್ಲೆಗಳು, 41 ಅಸೆಂಬ್ಲಿ ಕ್ಷೇತ್ರಗಳಲ್ಲಿನ ಸುಸ್ಥಿರ ಅಭಿವೃದ್ಧಿಗೆ ಸಮ್ಣ ನೀರಾವರಿ ರಂಗದಲ್ಲಿ ಹೊಸ ಯೋಜನೆ ರೂಪಿಸಿ ಜಲ ಸಮೃದ್ದಿಯ ಭದ್ರ ಬುನಾದಿ ಹಾಕಲು ಸಣ್ಣ ನೀರಾವರಿ ಸಚಿವ ಡಾ. ಅಜಯ್‌ ಧರ್ಮಸಿಂಗ್‌ ಸಂಕಲ್ಪ ಮಾಡಿದ್ದಾರೆ.ತಮ್ಮ ಈ ವಿನೂತನಸಂಕಲ್ಪಕ್ಕೆ ಪೂರಕವಾಗಿ ಸಚಿವರು ಸೋಮವಾರ ಬೆಂಗಳೂರಿನ ಮುಖ್ಯ ಇಂಜಿನಿಯರ್ ಕಚೇರಿಯಲ್ಲಿ ಸಣ್ಣ ನೀರಾವರಿ ಇಲಾಖೆಯ ಕಲಬುರಗಿ ವಿಭಾಗದ ವಿವಿಧ ನೀರಾವರಿ ಯೋಜನೆಗಳ ಕುರಿತಂತೆ ಸಣ್ಣ ನೀರಾವರಿ ಖಾತೆ ಸಚಿವ ಡಾ.ಅಜಯ್‌ ಧರ್ಮಸಿಂಗ್‌ ಪ್ರಗತಿ ಪರಿಶೀಲನಾ ಸಭೆ ನಡೆಸಿ ಗಮನ ಸೆಳೆದಿದ್ದಾರೆ.ಕಲ್ಯಾಣ ನಾಡಿನ ಹೆಬ್ಬಾಗಿಲು ಕಲಬುರಗಿ ಸಹಿತ ಕಲ್ಯಾಣ ಪ್ರದೇಶದ ಬೀದರ್‌, ರಾಯಚೂರು, ಕೊಪ್ಪಳ, ಬಳ್ಳಾರಿ, ಯಾದಗಿರಿ ಹಾಗೂ ವಿಜಯನಗರ ಜಿಲ್ಲೆಗಳಲ್ಲಿರುವ ಸಣ್ಣ ನಿರಾವರಿ ಕ್ಷೇತ್ರಕ್ಕೆ ಹೊಸ ಕಾಯಕಲ್ಪ ಕೊಡುವ ಸಂಕಲ್ಪದೊಂದಿಗೆ

ಸಭೆಯಲ್ಲಿ ಸಚಿವರು ಹಲವು ಮಹತ್ವದ ವಿಷಯಗಳನ್ನು ಪ್ರಸ್ತಾಪಿಸಿ ಈ ಭಾಗದ ಇಂಜಿನಿಯರ್‌ಗಳು, ಅಧಿಕಾರಿಗಳು, ತಾಂತ್ರಿಕ ಪರಿಣಿತರಿಗೆ ಸೂಚನೆಗಳನ್ನು ರವಾನಿಸಿದ್ದಾರೆ. ಕಲ್ಯಾಣ ಕರ್ನಾಟಕದ ಪ್ರತಿಯೊಂದು ಪ್ರದೇಶಕ್ಕೂ ಸಮರ್ಪಕ ನೀರಾವರಿ ಸೌಲಭ್ಯ ಕಲ್ಪಿಸುವ ದೂರದೃಷ್ಟಿಯೊಂದಿಗೆ, ಪ್ರಗತಿಯಲ್ಲಿರುವ ಯೋಜನೆಗಳ ಅನುಷ್ಠಾನ, ಸ್ಥಗಿತಗೊಂಡ ಕಾಮಗಾರಿಗಳ ಪುನಶ್ಚೇತನ ಹಾಗೂ ಹೊಸ ನೀರಾವರಿ ಯೋಜನೆಗಳ ರೂಪುರೇಷೆಗಳ ಕುರಿತು ಸಮಗ್ರ ಚರ್ಚೆ ನಡೆಸಲಾಯಿತು ಎಂದು ಬೆಂಗಳೂರಿನ ಸಭೆಯಲ್ಲಿನ ಮಹತ್ವದ ಚರ್ಚೆಗಳ ಕುರಿತಂತೆ ಸಚಿವ ಡಾ. ಅಜಯ್‌ ಸಿಂಗ್‌ ಹೇಳಿಕೆ ನೀಡಿದರು.ಕಲ್ಯಾಣ ಕರ್ನಾಟಕದಲ್ಲಿರುವ ನೀರಾವರಿ ಮೂಲಸೌಕರ್ಯ ಬಲಪಡಿಸುವುದು, ಜಲಸಂಪನ್ಮೂಲಗಳ ಸಮರ್ಪಕ ಬಳಕೆ ಮತ್ತು ಕೃಷಿ ಉತ್ಪಾದಕತೆಯನ್ನು ಹೆಚ್ಚಿಸುವುದು ನಮ್ಮ ಆದ್ಯತೆಯಾಗಿದೆ. ಕಲ್ಯಾಣ ಕರ್ನಾಟಕದ ಸಮಗ್ರ ಅಭಿವೃದ್ಧಿಗೆ ಜಲಸಮೃದ್ಧಿ ಅಡಿಪಾಯ ಹಾಕಿ ರೈತರ ಬದುಕಿನಲ್ಲಿ ಸಮೃದ್ಧಿ ತರುವ ಸುಸ್ಥಿರ ನೀರಾವರಿ ವ್ಯವಸ್ಥೆಯ ನಿರ್ಮಾಣ ಮಾಡುವ ಗುರಿ ತಮ್ಮದಾಗಿದೆ ಎಂದು ಡಾ.ಅಜಯ್‌ ಸಿಂಗ್‌ ಹೇಳಿದರು.ಇದಲ್ಲದೆ ಜಿಲ್ಲೆಗೊಂದು ವಿಶೇಷ ನೀರಾವರಿ ಯೋಜನೆ ಕೈಗೆತ್ತಿಕೊಳ್ಳುವುದು, ಇಡೀ ಪ್ರದೇಶದ ಅಸೆಂಬ್ಲಿ ಕ್ಷೇತ್ರವಾರು ಶಾಸಕರ ಅಭಿಪ್ರಾಯದಂತೆ ಹೊಸ ನೀರಾವರಿ ಯೋಜನೆ ಅನುಷ್ಠಾನಕ್ಕೆ ತರುವ ಬಗ್ಗೆಯೂ ಸಭೆಯಲ್ಲಿ ಚರ್ಚಿಸಲಾಗಿದೆ.ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆ, ಕೆಕೆಆರ್‌ಡಿಬಿ ಸಹಯೊಗದೊಂದಿಗೆ ಅದಾಗಲೇ ಕಳೆದ ಬಾರಿ 200 ಕೋಟಿ ರು. ವೆಚ್ಚದಲ್ಲಿ ಅಂತರ್ಜಲ ಮಟ್ಟ ಹೆಚ್ಚಳದ ಯೋಜನೆ ರೂಪಿಲಾಗಿತ್ತು. ಈ ಬಾರಿ ಇದೇ ಸಹಕಾರದಲ್ಲಿ 300 ಕೋಟಿ ರು. ಮೊತ್ತದ ಯೋಜನೆ ರೂಪಿಸುವ ಚಿಂನೆ ಇರುವ ಬಗ್ಗೆಯೂ ಸಭೆಯಲ್ಲಿ ಪ್ರಸ್ತಾಪಿಸಿ ಇಂಜಿನಿಯರ್‌ಗಳಿಗೆ ತಾಂತ್ರಿಕ ವರದಿ ಸಿದ್ಧಪಡಿಸಲು ಸೂಚಿಸಿದ್ದಾಗಿ ಸಚಿವ ಡಾ. ಅಜಯ್‌ ಸಿಂಗ್‌ ಹೇಳಿದರು.ಕಾಮಗಾರಿಗಳಲ್ಲಿ ಗುಣಮಟ್ಟ, ವೇಗ ಮತ್ತು ಪಾರದರ್ಶಕತೆಯನ್ನು ಖಚಿತಪಡಿಸಿಕೊಂಡು, ಪ್ರತಿಯೊಂದು ಯೋಜನೆಯ ಪ್ರಯೋಜನ ನೇರವಾಗಿ ರೈತರ ಹೊಲಗಳಿಗೆ ತಲುಪುವಂತೆ ಅಧಿಕಾರಿಗಳು ಬದ್ಧತೆಯಿಂದ ಕಾರ್ಯನಿರ್ವಹಿಸಬೇಕು ಎಂದು ಸೂಚಿಸಿದ ಸಚಿವರು ಜಿಲ್ಲೆಯ ಪ್ರತಿಯೊಬ್ಬರಿಂದಲೂ ಇಲಾಖೆಯ ಮಾಹಿತಿ ಪಡೆದಿರುವ ತಾವು ಬರುವ ದಿನಗಳಲ್ಲಿ ಕಲ್ಯಾಣದ ಜಿಲ್ಲೆಗಳಲ್ಲಿ ಸಣ್ಣ ನೀರಾವರಿ ಯೋಜನೆಗಳಿಗೆ ಹೊಸ ವೇಗದೊಂದಿಗೆ ಅನುಷ್ಠಾನಕ್ಕೆ ತರುವುದಾಗಿ ಹೇಳಿದರು.ಸಣ್ಣ ನೀರಾವರಿ ಸಚಿವ ಡಾ. ಅಜಯ್‌ ಸಿಂಗ್‌ ಅಧ್ಯಕ್ಷತೆಯಲ್ಲಿ ನಡೆದ ಈ ಸಭೆಯಲ್ಲಿ ಇಲಾಖೆಯ ಮುಖ್ಯ ಇಂಜಿನಿಯರ್‌, ಉನ್ನತ ಅಧಿಕಾರಿಗಳು, ಕಲ್ಯಾಣ ನಾಡಿನ ಕಲಬುರಗಿ ಸೇರಿದಂತೆ 7 ಜಿಲ್ಲೆಗಳ ಸಣ್ಣ ನೀರಾವರಿ ಇಲಾಖೆ ಹಿರಿಯ ಇಂಜಿನಿಯರ್‌ಗಳು ಪಾಲ್ಗೊಂಡಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕಿತ್ತೂರ ಚೆನ್ನಮ್ಮ, ಭುವನೇಶ್ವರಿದೇವಿ ಭಾವಚಿತ್ರದ ಮೆರವಣಿಗೆ
ಫೋಟೋಗಳನ್ನು ಆಧರಿಸಿ ಮಹಿಳೆಯ ಆದಾಯ ನಿರ್ಧರಿಸಲಾಗದು: ಕೋರ್ಟ್‌