ಕನ್ನಡಪ್ರಭ ವಾರ್ತೆ ರಬಕವಿ-ಬನಹಟ್ಟಿ
ನೂರಾರು ಭಕ್ತರು ಹೊಂಡಕ್ಕೆ ನೀರು ತುಂಬಿದರು. ನೂರಕ್ಕೂ ಅಧಿಕ ಯುವಕರ ತಂಡ ಹೊಂಡದಲ್ಲಿನ ನೀರನ್ನು ತುಂಬಿಕೊಂಡು ಪರಸ್ಪರ ಎರಚಿ ಸಂಭ್ರಮಿಸಿದರು.
ನಾಗಪ್ಪ ಬಕರೆ ಹೊಂಡದ ಪೂಜೆಯೊಂದಿಗೆ ನೀರೋಕುಳಿಗೆ ಚಾಲನೆ ನೀಡಿದರು. ಕಾರ್ಯಕ್ರಮದಲ್ಲಿ ಈರಣ್ಣ ಹೊನವಾಡ, ಕುಮಾರ ಬಕರೆ, ಪ್ರಶಾಂತ ಕೊಳಕಿ, ಮಹಾಶಾಂತ ಶೆಟ್ಟಿ, ಗಿರೀಶ ಹಾಸೀಲಕರ, ವಾಸು ಕೋಪರ್ಡೆ, ಬಾಳು ಶ್ರೀಶೈಲ ಗಣೇಶನವರ, ರಾಮು ಕೋಪರ್ಡೆ, ಮಹಾಂತೇಶ ಜಾಲಿಕಟ್ಟಿ, ಮುಕುಂದ ಕೋಪರ್ಡೆ, ಗಂಗಪ್ಪ ಗೋಂದಕರ, ಬಾಳು ಗಣೇಶನವರ, ಮಾದೇವ ಬಸ್ಮೆ, ರಾಜು ಬಂಡಿಗಣಿ, ರಮೇಶ ಬೆಳ್ಳಗಿ, ಕಿರಣ ಭಸ್ಮೆ, ಆತ್ಮಾರಾಮ ಬಕರೆ, ಚಂದು ಗೋಂದಕರ, ಶ್ರೀಶೈಲ ಬಂಡಿಗಣಿ, ಮಹಾಂತೇಶ ಜಾಲಿಕಟ್ಟಿ, ಮಾನಿಂಗ ಕೋಪರ್ಡೆ, ಬಾಳಕೃಷ್ಣ ಹಾಸೀಕರ, ಜ್ಯೋತಿಭಾ ಕೋಪರ್ಡೆ ಹನುಮಾನ ದೇವರ ಟ್ರಸ್ಟ್ ಕಮಿತಿಯ ನೂರಾರು ಕಾರ್ಯಕರ್ತರು ಸೇರಿದಂತೆ ಅನೇಕರು ಇದ್ದರು.