ನೀರಿನ‌ ಮಿತ ಬಳಕೆ ಎಲ್ಲರ ಜವಾಬ್ದಾರಿ: ರಾಜೇಶ್ ನಾಯ್ಕ್

KannadaprabhaNewsNetwork |  
Published : Feb 11, 2026, 03:00 AM IST
ಕಳ್ಳಿಗೆಯಲ್ಲಿ ಜಲ ಅರ್ಫಣ್ | Kannada Prabha

ಸಾರಾಂಶ

ಕೇಂದ್ರ ಸರ್ಕಾರದ ಜಲ್ ಜೀವನ್ ಮಿಷನ್ ಯೋಜನೆಯಡಿ ಕಳ್ಳಿಗೆ ಗ್ರಾಮಕ್ಕೆ 24X7 ಕುಡಿಯುವ ನೀರು ಪೂರೈಕೆ ಉದ್ದೇಶದಿಂದ ಮಂಗಳವಾರ ಕಳ್ಳಿಗೆ ಗ್ರಾಪಂ ಕಚೇರಿಯಲ್ಲಿ ನಡೆದ ಜಲ್ ಅರ್ಪಣ್ ದಿವಸ್ ಕಾರ್‍ಯಕ್ರಮವನ್ನು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ

ಬಂಟ್ವಾಳ: ಕೇಂದ್ರ ಸರ್ಕಾರದ ಜಲ್ ಜೀವನ್ ಮಿಷನ್ ಯೋಜನೆಯಡಿ ಕಳ್ಳಿಗೆ ಗ್ರಾಮಕ್ಕೆ 24X7 ಕುಡಿಯುವ ನೀರು ಪೂರೈಕೆ ಉದ್ದೇಶದಿಂದ ಮಂಗಳವಾರ ಕಳ್ಳಿಗೆ ಗ್ರಾಪಂ ಕಚೇರಿಯಲ್ಲಿ ನಡೆದ ಜಲ್ ಅರ್ಪಣ್ ದಿವಸ್ ಕಾರ್‍ಯಕ್ರಮವನ್ನು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಉದ್ಘಾಟಿಸಿದರು.

ಜೀವ ಜಲ ಸಂರಕ್ಷಣೆ ನಮ್ಮೆಲ್ಲರ ಆದ್ಯ ಕರ್ತವ್ಯ. ಸುಮಾರು 1.80 ಕೋಟಿ ರು. ಅನುದಾನದಲ್ಲಿ ಕಳ್ಳಿಗೆ ಗ್ರಾಮದಲ್ಲಿ ಈ ಯೋಜನೆಯನ್ನು ಯಶಸ್ವಿಯಾಗಿ ಪೂರೈಸಲಾಗಿದೆ. ನೀರನ್ನು ಮಿತವಾಗಿ ಬಳಸೋಣ. ಗ್ರಾಮೀಣ ಭಾಗದ ಪ್ರತಿ ಮನೆ ಮನೆಗೂ ನಿರಂತರ ಕುಡಿಯುವ ನೀರು ಪೂರೈಸುವುದು ಯೋಜನೆಯ ಉದ್ದೇಶವಾಗಿದೆ ಎಂದು ರಾಜೇಶ್ ನಾಯ್ಕ್ ನುಡಿದರು.ಕಳ್ಳಿಗೆ ಗ್ರಾಪಂ ಅಧ್ಯಕ್ಷ ಪುರುಷೋತ್ತಮ ಕೊಟ್ಟಾರಿ ಮಾಡಂಗೆ, ಬಂಟ್ವಾಳ ತಾ.ಪಂ. ಕಾರ್‍ಯನಿರ್ವಹಣಾಧಿಕಾರಿ ಸಚಿನ್ ಕುಮಾರ್, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಸಹಾಯಕ ಕಾರ್‍ಯನಿರ್ವಾಹಕ ಅಭಿಯಂತರರಾದ ನಟೇಶ್, ಕಿರಿಯ ಅಭಿಯಂತರರಾದ ಜಗದೀಶ್, ಪಿಡಿಒ ಚಂದ್ರಾವತಿ, ಕಳ್ಳಿಗೆ ಗ್ರಾಪಂ ಮಾಜಿ ಅಧ್ಯಕ್ಷೆ ಯಶೋಧಾ ಜಾರಂದಗುಡ್ಡೆ, ಮಾಜಿ ಉಪಾಧ್ಯಕ್ಷ ದಾಮೋದರ ನೆತ್ತರಕೆರೆ, ಸದಸ್ಯರಾದ ಮನೋಜ್ ವಳವೂರು, ರೇಶ್ಮಾ ಬೆಂಜನಪದವು, ಪ್ರಮುಖರಾದ ಸತೀಶ್ ಮಾಡಂಗೆ, ಪುಷ್ಪಾ ಬಂಜನ್ ದರಿಬಾಗಿಲು, ಓಮಯ್ಯ ಜೆ. ಕೋಟ್ಯಾನ್ ಕನಪಾಡಿ, ಸಂಜೀವ ಬೆದ್ರಾಡಿ, ಸಂತೋಷ್ ಬ್ರಹ್ಮರಕೂಟ್ಲು, ಮಾಧವ ಬ್ರಹ್ಮರಕೂಟ್ಲು, ಯೋಗೀಶ್ ದರಿಬಾಗಿಲು, ಗಿರೀಶ್ ಚಂದ್ರಿಗೆ, ದಿನಕರ ಚಂದ್ರಿಗೆ ಮತ್ತಿತರರಿದ್ದರು.

ಪುರುಷೋತ್ತಮ ಕೊಟ್ಟಾರಿ ಮಾಡಂಗೆ ಸ್ವಾಗತಿಸಿದರು. ಪಿಡಿಓ ಚಂದ್ರಾವತಿ ವಂದಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗಾಯಾಳುವಿಗೆ ಕೆಜಿ ಭೋಪಯ್ಯ ಸಾಂತ್ವನ
ಉತ್ತಮ ಆರೋಗ್ಯದಿಂದ ಶೈಕ್ಷಣಿಕ ಪ್ರಗತಿ ಸಾಧ್ಯ: ದಿನಕರ ಹೇರೂರು