ವಿಶ್ವನಾಥ ಮುನವಳ್ಳಿ
ಕನ್ನಡಪ್ರಭ ವಾರ್ತೆ ಮುಧೋಳಮುಧೋಳ ತಾಲೂಕಿನಲ್ಲಿ ಹರಿದಿರುವ ಘಟಪ್ರಭ ನದಿಯು ನೀರಿಲ್ಲದೆ ಸಂಪೂರ್ಣ ಬತ್ತಿ ಬರಿದಾಗಿದೆ. 2023-24ನೇ ಸಾಲಿನಲ್ಲಿ ತೀವ್ರ ಮಳೆ ಕೊರತೆಯಿಂದ ಹಾಗೂ ಹೆಚ್ಚಿನ ಉಷ್ಣತೆಯ ಕಾರಣದಿಂದ ನದಿಯ ನೀರು ಬತ್ತಿ ಹೋಗಿದೆ. ನದಿಯಲ್ಲಿ ನೀರಿಲ್ಲದಿರುವುದರಿಂದ ಜನ ಮತ್ತು ಜಾನುವಾರು, ಪ್ರಾಣಿ, ಪಕ್ಷಿಗಳ ಕುಡಿಯುವ ನೀರಿಗೆ ಸಮಸ್ಯೆಯಾದರೆ, ನದಿ ನೀರನ್ನೇ ಅವಲಂಬಿತ ಕೃಷಿಕರು ಬೆಳೆದ ಬೆಳೆಗಳು ಸಂಪೂರ್ಣ ಒಣಗಿ ಹೋಗಿದೆ. ಒಟ್ಟಾರೆ ನದಿಗೆ ನೀರಿಲ್ಲದಿರುವುದರಿಂದ ಜನ ಮತ್ತು ಜಾನುವಾರು, ಜೀವಸಂಕುಲ ಸಂಕಷ್ಟಕ್ಕೆ ಸಿಲುಕಿದೆ.
ನೀರು ಬಿಡುವಂತೆ ರೈತರ ಹೋರಾಟ:ನದಿಗೆ ನೀರು ಬಿಡುವಂತೆ ತಾಲೂಕಿನ ರೈತರು ಹಲವು ಬಾರಿ ಪ್ರತಿಭಟನೆ ನಡೆಸಿ, ರಸ್ತೆ ಸಂಚಾರ ಸ್ಥಗಿತಗೊಳಿಸಿ, ತಹಸೀಲ್ದಾರ್ ಕಚೇರಿಗೆ ಮುತ್ತಿಗೆ ಹಾಕಿ, ಕಚೇರಿಯಲ್ಲಿಯೇ ವಾಸ್ತವ್ಯ ಹೂಡಿ ಆಕ್ರೋಶ ವ್ಯಕ್ತಪಡಿಸಿದ್ದರ ಪರಿಣಾಮ ಮೇ 8ರಂದು ಹಿಡಕಲ್ ಜಲಾಶಯದಿಂದ ನೀರು ಬಿಡುವುದಾಗಿ ತಾಲೂಕಾಡಳಿತ ಪ್ರಕಟಣೆ ಹೊಡಿಸಿದ್ದರ ಪರಿಣಾಮ ರೈತರು ಪ್ರತಿಭಟನೆ ಹಾಗೂ ಹೋರಾಟ ಹಿಂಪಡೆದರು.
ಮೇ 8 ದಾಟಿದರೂ ನದಿಗೆ ನದಿಗೆ ನೀರು ಬಾರದೆ ಇದ್ದಾಗ ಆಕ್ರೋಶಗೊಂಡ ಮತ್ತೆ ರೈತರು ತೀವ್ರ ಪ್ರತಿಭಟನೆ ಮುಂದುವರಿಸಿದ್ದರು. ಮೇ 10ರಂದು ಸಂಜೆ 6 ಗಂಟೆಗೆ ಹಿಡಕಲ್ ಜಲಾಶಯದಿಂದ ನೀರು ಬಿಟ್ಟಿರುವ ಸುದ್ದಿ ತಿಳಿದ ರೈತರು ಹೋರಾಟ ಹಿಂಪಡೆದರು.ಮೇ 10ರಂದು ಸಂಜೆ 6 ಗಂಟೆಗೆ ಹಿಡಕಲ್ ಜಲಾಶಯದಿಂದ ಘಟಪ್ರಭ ನದಿಗೆ ಬಿಟ್ಟಿರುವ ನೀರು ಭಾನುವಾರ ಸಂಜೆ 6 ಗಂಟೆಯಾದರೂ ಮುಧೋಳ ತಲುಪಿಲ್ಲ, ಜಲಾಶಯದಿಂದ ಬಿಟ್ಟಿರುವ ನೀರು ಮುಧೋಳಕ್ಕೆ ಯಾವಾಗ ಬರುತ್ತೆದೆ ಎಂದು ರೈತರು ಕಾಯ್ದು ಕುಳತಿದ್ದಾರೆ.
ನದಿಯ ನೀರನ್ನು ನಂಬಿ ರೈತರು ಬೆಳೆದ ಬೆಳೆಯು ಬಿಸಲಿನ ತಾಪಕ್ಕೆ ಒಣಗುತ್ತಲಿದೆ. ಇದರಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ.ಬೇಸಿಗೆ ಸಂದರ್ಭದಲ್ಲಿ ನದಿಗೆ ಬಿಡಬೇಕಾಗಿದ್ದ ನೀರನ್ನು ಪ್ರತಿವರ್ಷ ಹಿಡಕಲ್ ಜಲಾಶಯದಲ್ಲಿ ಕಾಯ್ದರಿಸಲಾಗುತ್ತದೆ, ಕಾಯ್ದಿರಿಸುವ ನೀರು ನದಿಗೆ ಬಿಡಲು ಏಕೆ ಮೀನಮೇಷ ಮಾಡುತ್ತಿರುವುದು ತಿಳಿದು ಬರುತ್ತಿಲ್ಲ ಎನ್ನುತ್ತಾರೆ ರೈತರು.
ಪ್ರಾಣಿ, ಪಕ್ಷಿ ಮತ್ತು ಜನರು ನದಿಯಲ್ಲಿ ನೀರಿಲ್ಲದೆ ಪರದಾಡುವಂತಾಗಿದೆ. ತೋಟಗಾರಿಕೆ ಬೆಳೆಗಳು ಒಣಗಿ ರೈತರ ತೊಂದರೆಗೆ ಸಿಲುಕಿದ್ದಾರೆ. ತಾಲೂಕು ಮತ್ತು ಜಿಲ್ಲಾ ಆಡಳಿತ ರೈತರ ಸಮಸ್ಯೆಗಳಿಗೆ ಸ್ಪಂದಿಸುವಂತೆ ಒತ್ತಾಯಿಸುತ್ತೇವೆ.-ಸುಭಾಷ ಶಿರಬೂರ ಪ್ರಗತಿಪರ ರೈತರುಮಳೆಗಾಲ ಆರಂಭವಾಗಿದೆ. ಮಳೆ ಆಗುವ ಮುಂಚೆ ನದಿಗೆ ನೀರು ಹರಿಸಿದರೆ ಜನ ಜಾನುವಾರುಗಳಿಗೆ ಉಪಯುಕ್ತವಾಗುತ್ತದೆ. ಜನಪ್ರತಿನಿಧಿಗಳು, ಅಧಿಕಾರಿಗಳು ರೈತರ ಸಂಕಷ್ಟ ಅರಿತು ನದಿಗೆ ನೀರು ಬಿಡಲು ಕ್ರಮ ಕೈಗೊಳ್ಳಬೇಕಿದೆ.
-ದುಂಡಪ್ಪ ಯರಗಟ್ಟಿ ಪ್ರಗತಿಪರ ರೈತರು