ಬನ್ನಿಕೊಪ್ಪ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ ಮಾಳೆಕೊಪ್ಪ ಗ್ರಾಮಕ್ಕೆ ಬರುವ ನೀರಿನ ಮೂಲಗಳಾದ ಬನ್ನಿಕೊಪ್ಪ ಸಂಪ್ ಹೌಸ್ ಮೋಟಾರ್, ಬೋರ್‌ವೆಲ್, ಎಲ್ ಆ್ಯಂಡ್ ಟಿ ನೀರಿನ ಸರಬರಾಜು ಯಂತ್ರ ಕೆಟ್ಟ ಪರಿಣಾಮ ಐದಾರು ದಿನದಿಂದ ಹನಿ ನೀರು ಸಹ ಗ್ರಾಮಕ್ಕೆ ಬಂದಿಲ್ಲ.
ಕುಕನೂರು:
ನೀರು ಪೂರೈಸುವ ಮೋಟಾರ್ ಕೆಟ್ಟ ಪರಿಣಾಮ ತಾಲೂಕಿನ ಮಾಳೆಕೊಪ್ಪದಲ್ಲಿ ನೀರಿಗೆ ಹಾಹಾಕಾರ ಉಂಟಾಗಿದ್ದು ನೀರಿಲ್ಲದೆ ಗ್ರಾಮಸ್ಥರು ಪರದಾಡುತ್ತಿದ್ದಾರೆ.
ಕಳೆದ ಒಂದು ವಾರದಿಂದ ಗ್ರಾಮದಲ್ಲಿ ನೀರಿನ ಸಮಸ್ಯೆ ತಲೆದೋರಿದೆ. ಈ ಕುರಿತು ಗ್ರಾಮಸ್ಥರು ಸಂಬಂಧಿಸಿದವರಿಗೆ ತಿಳಿಸಿದರೂ ಇಂದು, ನಾಳೆ ಎಂದು ದಿನದೂಡಿದ್ದಾರೆ.
ಬನ್ನಿಕೊಪ್ಪ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ ಮಾಳೆಕೊಪ್ಪ ಗ್ರಾಮಕ್ಕೆ ಬರುವ ನೀರಿನ ಮೂಲಗಳಾದ ಬನ್ನಿಕೊಪ್ಪ ಸಂಪ್ ಹೌಸ್ ಮೋಟಾರ್, ಬೋರ್‌ವೆಲ್, ಎಲ್ ಆ್ಯಂಡ್ ಟಿ ನೀರಿನ ಸರಬರಾಜು ಯಂತ್ರ ಕೆಟ್ಟ ಪರಿಣಾಮ ಐದಾರು ದಿನದಿಂದ ಹನಿ ನೀರು ಸಹ ಗ್ರಾಮಕ್ಕೆ ಬಂದಿಲ್ಲ. ಇದರಿಂದ ನೀರಿನ ಸಮಸ್ಯೆ ತಲೆದೋರಿದೆ.
ಗ್ರಾಪಂ ಅಧ್ಯಕ್ಷನಿಗೆ ತರಾಟೆ:
ಬನ್ನಿಕೊಪ್ಪ ಗ್ರಾಮ ಪಂಚಾಯಿತಿ ಅಧ್ಯಕ್ಷ ನಾಗರಾಜ ವೆಂಕಟಾಪುರ ಮಾಳೆಕೊಪ್ಪಕ್ಕೆ ಭೇಟಿ ನೀರಿನ ಸಮಸ್ಯೆ ಆಲಿಸಿದ್ದಾರೆ. ಈ ವೇಳೆ ಆಕ್ರೋಶಗೊಂಡ ಜನರು, ನಮಗೆ ಏಕೆ ನೀರು ಬಿಡುತ್ತಿಲ್ಲ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ. ಆಗ ಅಧ್ಯಕ್ಷ, ನನಿಗೆ ನೀರಿನ ಸಮಸ್ಯೆ ಕುರಿತು ಶನಿವಾರ ರಾತ್ರಿ ಮಾಹಿತಿ ಬಂದಿದೆ. ಹೀಗಾಗಿ ನಾನು ಬಂದಿದ್ದೇನೆ ಎಂದರು. ಇಲ್ಲಿನ ಗ್ರಾಪಂ ಸದಸ್ಯರು ಈ ಸಮಸ್ಯೆ ನಿವಾರಣೆಗೆ ಮುಂದಾಳತ್ವ ವಹಿಸಬೇಕಿತ್ತು. ಆದರೂ ಸಹ ನಾನೇ ನಿಮ್ಮ ಸಮಸ್ಯೆ ನಿವಾರಿಸುತ್ತೇನೆ. ಸೋಮವಾರದಿಂದ ಖಂಡಿತ ನೀರು ಸರಬರಾಜು ಆಗುತ್ತದೆ ಎಂದು ಭರವಸೆ ನೀಡಿದರು.
ಸ್ಥಳದಲ್ಲಿಯೇ ಮೋಟಾರ್ ದುರಸ್ತಿ ಮಾಡುವವರಿಗೆ ದೂರವಾಣಿ ಕರೆ ಮಾಡಿ ಯಂತ್ರ ದುರಸ್ತಿ ಮಾಡಿಸಿದ್ದಾರೆ. ಗ್ರಾಮಸ್ಥರು ಸೋಮವಾರ ನೀರು ಬಂದರೆ ಸರಿ. ಇಲ್ಲದಿದ್ದರೆ ಗ್ರಾಮ ಪಂಚಾಯಿತಿ ಎದುರು ಧರಣಿ ನಡೆಸಲಾಗುವುದು ಎಂದು ಎಚ್ಚರಿಸಿದರು.ಐದಾರು ದಿನಗಳಿಂದ ಗ್ರಾಮಕ್ಕೆ ನೀರು ಪೂರೈಕೆಯಾಗಿಲ್ಲ. ಈ ಬಗ್ಗೆ ಗ್ರಾಪಂಗೆ ತಿಳಿಸಿದರೂ ಸ್ಪಂದಿಸಿಲ್ಲ. ತಕ್ಷಣ ಗ್ರಾಮಕ್ಕೆ ನೀರು ಪೂರೈಸುವ ಜತೆಗೆ ನಿರ್ಲಕ್ಷ್ಯ ತೋರಿದ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮಕೈಗೊಳ್ಳಬೇಕು.
ಮಾಳೆಕೊಪ್ಪ ಗ್ರಾಮಸ್ಥರುನೀರಿನ ಸಮಸ್ಯೆ ಕುರಿತು ನನ್ನ ಗಮನಕ್ಕೆ ಬರುತ್ತಿದ್ದಂತೆ ಗ್ರಾಮಕ್ಕೆ ಭೇಟಿ ನೀಡಿ ಯಂತ್ರಗಳ ದುರಸ್ತಿ ಮಾಡಿಸಿದ್ದೇನೆ. ಸೂಚಿಸಿದ್ದೇನೆ. ಸೋಮವಾರದಿಂದ ನೀರು ಸರಬರಾಜು ಆಗಲಿದೆ. ಬನ್ನಿಕೊಪ್ಪದಿಂದ ಬಹುಗ್ರಾಮ ಕುಡಿಯುವ ನೀರಿನ ಸಂಪ್‌ನಿಂದ ಮಾಳೆಕೊಪ್ಪಕ್ಕೆ ಪ್ರತ್ಯೇಕವಾಗಿ ನೀರು ಸರಬರಾಜು ಮಾಡುವಂತೆ ತಾಲೂಕು ಪಂಚಾಯಿತಿಗೆ ಸಹ ಬರೆಯುತ್ತೇನೆ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.