ರಾಂ ಅಜೆಕಾರು
ಬರಪೀಡಿತ ತಾಲೂಕಾಗಿ ಹೆಬ್ರಿ: ಈ ವರ್ಷ ರಾಜ್ಯ ಸರ್ಕಾರ ಹೆಬ್ರಿ ತಾಲೂಕನ್ನು ಬರಪೀಡಿತ ತಾಲೂಕು ಎಂದು ಘೋಷಿಸಿದೆ. ಮಲೆನಾಡಿನ ಜೊತೆ ಹಂಚಿಕೊಂಡಿರುವ ತಪ್ಪಲಿನ ಕಬ್ಬಿನಾಲೆ, ನಾಡ್ಪಾಲು ಕೆಲವು ಭಾಗಗಳಲ್ಲಿ ಕಳೆದ ವರ್ಷ ಬೋರ್‌ವೆಲ್‌ಗಳನ್ನು ಸುಮಾರು 600 ಅಡಿ ಆಳದವರೆಗೆ ಕೊರೆಸಿದರೂ ನೀರಿನ ಲಭ್ಯತೆ ಕಮ್ಮಿಯಾಗಿತ್ತು. ಹೆಬ್ರಿ ತಾಲೂಕಿನ ಜೀವನದಿಯಾದ ಸೀತಾನದಿಯಲ್ಲಿ ನೀರಿನ ಮಟ್ಟ ಕುಸಿತವಾಗಿದೆ.ಕಬ್ಬಿನಾಲೆ, ಜರುವತ್ತು ನದಿಗಳಲ್ಲಿ ನೀರಿನ ಹರಿವು ನಿಂತಿದ್ದು, ಭತ್ತದ ಕೃಷಿಕರಿಗೆ ಸಮಸ್ಯೆಯಾಗಿದೆ. ಕಾರ್ಕಳ ತಾಲೂಕಿನ ಸ್ವರ್ಣನದಿಯಲ್ಲಿ ಈಗಾಗಲೇ 6 ಕಡೆಗಳಲ್ಲಿ ಅಣೆಕಟ್ಟುಗಳಿಗೆ ಗೇಟ್‌ಗಳನ್ನು ಅಳವಡಿಸಿದ್ದು, ನೀರನ್ನು ಹಿಡಿದಿಟ್ಟುಕೊಂಡು ಕೃಷಿಗೆ ಹಾಗೂ ಕುಡಿಯಲು ಅಗತ್ಯಕ್ಕೆ ತಕ್ಕಂತೆ ಬಿಡುಗಡೆ ಮಾಡಲಾಗುತ್ತಿದೆ.
ಕೃಷಿಯಲ್ಲಿ ಕುಸಿತ: ಕಳೆದ ಮುಂಗಾರಿನಲ್ಲಿ 36000 ಹೆಕ್ಟರ್ ಬಿತ್ತನೆ ಮಾಡುವ ಬಗ್ಗೆ ನಿರೀಕ್ಷಿಸಲಾಗಿತ್ತಾದರೂ ಬಿತ್ತನೆ ಮಾಡಿದ್ದು ಕೇವಲ 30 ಸಾವಿರ ಹೆಕ್ಟರ್ ಪ್ರದೇಶದಲ್ಲಿ ಮಾತ್ರ.ಬಾವಿಗಳೇ ಆಧಾರ: ರೈತರು ನೀರಿನ ಪ್ರಮುಖ ಮೂಲಗಳಾದ ತೋಡು, ನದಿ, ಹಳ್ಳಗಳಲ್ಲಿ ನೀರು ಕ್ರಮೇಣವಾಗಿ ಕಡಿಮೆಯಾಗುತ್ತಿರುವುದರಿಂದ ಬಾವಿಗಳಿಂದ ಪಂಪ್‌ಸೆಟ್ ಬಳಸಿ ಗದ್ದೆಗೆ ನೀರು ಹಾಯಿಸಲಾಗುತ್ತಿದೆ. ಆದರೆ ಲೋಡ್ ಶೆಡ್ಡಿಂಗ್ ಶುರುವಾದರೆ ಕೃಷಿಕರ ಬವಣೆ ಹೇಳತೀರದು.ಭತ್ತಕ್ಕೆ ನೀರೆ ಮೂಲಾಧಾರ: ಭತ್ತ ಕೃಷಿಗೆ ಪೈರು ಕಟ್ಟುವ ವೇಳೆ ನೀರಿನ ಕೊರತೆ ಉಂಟಾದರೆ ಶೇ.25 ರೈತರಿಗೆ ಫಸಲು ದೊರಕುವುದಿಲ್ಲ. ಇಲ್ಲದಿದ್ದರೆ ಜಂಗು ತುಂಬಿಕೊಂಡು ಪೈರು ಹಾಳಾಗುತ್ತದೆ. ಹಾಲು ಕಟ್ಟಿದ ಮೇಲೆ ಸುಮಾರು 25 ದಿನ ಕನಿಷ್ಠ ನೀರಿನ ಲಭ್ಯತೆ ಇರಬೇಕು. ಇಲ್ಲದಿದ್ದಲ್ಲಿ ಫಸಲು ಕಡಿತವಾಗುತ್ತದೆ ಎಂದು ವಿಜ್ಞಾನಿಗಳು ಅಭಿಪ್ರಾಯಪಟ್ಟಿದ್ದಾರೆ.------
ಜಿಲ್ಲೆಯಲ್ಲಿ ಶೇ.22ರಷ್ಟು ವಾಡಿಕೆಗಿಂತ ಮಳೆ ಕಡಿಮೆ ಇದೆ. ಜೂನ್, ಅಗಸ್ಟ್ ಹಾಗೂ ಅಕ್ಟೋಬರ್‌ಗಳಲ್ಲಿ ಅತ್ಯಂತ ಕಡಿಮೆ ಪ್ರಮಾಣದ ಮಳೆಯಾಗಿರುವುದು ನೀರಿನ ಕೊರತೆಗೆ ಕಾರಣವಾಗಿದೆ. ಮಳೆ ಇಲ್ಲದೆ ಬಹುತೇಕ ರೈತರು ಹಿಂಗಾರು ಬೆಳೆ ಬೆಳೆಯಲು ಹಿಂಡೇಟು ಹಾಕಿದ್ದಾರೆ. ಶೇ.22 ಹೆಕ್ಟೇರ್ ಪ್ರದೇಶದಲ್ಲಿ ನಾಟಿ ಮಾಡಿಲ್ಲ.। ಸತೀಶ್, ಸಹಾಯಕ ಕೃಷಿ ನಿರ್ದೇಶಕರು, ಉಡುಪಿ ಜಿಲ್ಲೆ