ಹಾರಂಗಿ ಜಲಾಶಯ ನೀರು ಬಿಡುಗಡೆ: ನಾಲ್ಕು ಕ್ರಸ್ಟ್ ಗೇಟ್ ಗಳ ಮೂಲಕ ನದಿಗೆ ನೀರು

KannadaprabhaNewsNetwork |  
Published : Jul 26, 2026, 03:00 AM IST
ಮುಖ್ಯ ಗೇಟ್ ಗಳ ಮೂಲಕ ನದಿಗೆ ನೀರು ಹರಿಸಿದ ದೃಶ್ಯ | Kannada Prabha

ಸಾರಾಂಶ

ಕುಶಾಲನಗರ ಸಮೀಪದ ಹಾರಂಗಿ ಜಲಾಶಯ ಭರ್ತಿಯಾಗಿ ಹೆಚ್ಚುವರಿ ನೀರನ್ನು ನಾಲ್ಕು ಕ್ರಸ್ಟ್ ಗೇಟ್ ಗಳ ಮೂಲಕ ನದಿಗೆ ಹರಿಸಲಾಯಿತು.

ಕುಶಾಲನಗರ: ಕುಶಾಲನಗರ ಸಮೀಪದ ಹಾರಂಗಿ ಜಲಾಶಯ ಭರ್ತಿಯಾಗಿ ಹೆಚ್ಚುವರಿ ನೀರನ್ನು ನಾಲ್ಕು ಕ್ರಸ್ಟ್ ಗೇಟ್ ಗಳ ಮೂಲಕ ನದಿಗೆ ಹರಿಸಲಾಯಿತು.ಜಲಾಶಯಕ್ಕೆ ಶನಿವಾರ ಸಂಜೆ ವೇಳೆಗೆ 4 ಸಾವಿರ ಕ್ಯೂಸೆಕ್‌ ಪ್ರಮಾಣದ ನೀರು ಒಳ ಹರಿವು ಹಿನ್ನೆಲೆಯಲ್ಲಿ ನಾಲ್ಕು ಗೇಟ್ ಗಳ ಮೂಲಕ ಒಟ್ಟು ನಾಲ್ಕು ಸಾವಿರ ಕ್ಯೂಸೆಕ್‌ ನೀರನ್ನು ನದಿಗೆ ಹರಿಸಲಾಗುತ್ತಿದೆ ಎಂದು ಹಾರಂಗಿ ಅಣೆಕಟ್ಟು ವಿಭಾಗದ ಸಹಾಯಕ ಕಾರ್ಯಪಾಲಕ ಅಭಿಯಂತರ ಬಿ ಜೆ ಪುಟ್ಟಸ್ವಾಮಿ ಮಾಹಿತಿ ಒದಗಿಸಿದರು. ಈ ಸಾಲಿನಲ್ಲಿ ಮಳೆಯ ಕೊರತೆ ಹಿನ್ನೆಲೆಯಲ್ಲಿ ಜಲಾಶಯ ತಡವಾಗಿ ತುಂಬಿದ್ದು ಜಲಾಶಯದ ಒಳಹರಿವಿನ ಪ್ರಮಾಣ ಹಾಗೂ ಅಣೆಕಟ್ಟಿನಲ್ಲಿ ನೀರಿನ ಮಟ್ಟ ಕಾಯ್ದುಕೊಂಡು ಹೆಚ್ಚುವರಿ ನೀರನ್ನು ನದಿಗೆ ಹರಿಸಲಾಗುತ್ತದೆ ಎಂದು ತಿಳಿಸಿದ್ದಾರೆ. ನದಿಗೆ ನೀರು ಬಿಡುವ ಮುನ್ನ ಅಣೆಕಟ್ಟಿನ ಮುಖ್ಯ ಗೇಟ್ ಗಳಿಗೆ ಪೂಜೆ ಸಲ್ಲಿಸಲಾಯಿತು. ಅಣೆಕಟ್ಟು ವಿಭಾಗದ ಸಹಾಯಕ ಇಂಜಿನಿಯರ್ ಕಿರಣ್, ತಾಲೂಕು ತಹಸಿಲ್ದಾರ್ ಕೃಷ್ಣಮೂರ್ತಿ ಮತ್ತು ಸ್ಥಳೀಯರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ವಿದ್ಯುದ್ದೀಪಾಲಂಕಾರದಿಂದ ಝಗಮಗಿಸುತ್ತಿರುವ ತಾಳಿಕೋಟೆ
ಕಾರ್ಯಕರ್ತರ ಅಭಿಪ್ರಾಯಕ್ಕೆ ಹೆಚ್ಚಿನ ಆದ್ಯತೆ