ಹಂಪಿಯ ರಸ್ತೆಗಳಿಗೆ ನೀರು ಸಿಂಪರಣೆ!

KannadaprabhaNewsNetwork | Published : Oct 29, 2023 1:00 AM

ಸಾರಾಂಶ

ವಿಶ್ವವಿಖ್ಯಾತ ಹಂಪಿಯ ರಸ್ತೆಗಳಲ್ಲಿ ಹಂಪಿ ಅಭಿವೃದ್ಧಿ ಪ್ರಾಧಿಕಾರ ಟ್ಯಾಂಕರ್‌ ಬಳಸಿ ನೀರು ಸಿಂಪರಣೆ ಮಾಡುತ್ತಿದೆ. ಹಂಪಿ ರಸ್ತೆಗಳಲ್ಲಿ ಧೂಳು ಏಳುತ್ತಿರುವ ಹಿನ್ನೆಲೆಯಲ್ಲಿ ಪ್ರವಾಸಿಗರ ಅನುಕೂಲಕ್ಕಾಗಿ ಈ ಕಾರ್ಯ ಮಾಡಲಾಗುತ್ತಿದೆ. ಹಂಪಿ ರಸ್ತೆಗಳಲ್ಲಿ ಧೂಳು ಏಳುತ್ತಿರುವ ಹಿನ್ನೆಲೆಯಲ್ಲಿ ದೇಶ-ವಿದೇಶಿ ಪ್ರವಾಸಿಗರಿಗೆ ತಿರುಗಾಡಲು ತೊಂದರೆಯಾಗುತ್ತಿದ್ದು, ಇದನ್ನರಿತು ಈಗ ಪ್ರಾಧಿಕಾರ ನೀರು ಸಿಂಪರಣೆ ಮೊರೆ ಹೋಗಿದೆ.

ಹೊಸಪೇಟೆ: ವಿಶ್ವವಿಖ್ಯಾತ ಹಂಪಿಯ ರಸ್ತೆಗಳಲ್ಲಿ ಹಂಪಿ ಅಭಿವೃದ್ಧಿ ಪ್ರಾಧಿಕಾರ ಟ್ಯಾಂಕರ್‌ ಬಳಸಿ ನೀರು ಸಿಂಪರಣೆ ಮಾಡುತ್ತಿದೆ. ಹಂಪಿ ರಸ್ತೆಗಳಲ್ಲಿ ಧೂಳು ಏಳುತ್ತಿರುವ ಹಿನ್ನೆಲೆಯಲ್ಲಿ ಪ್ರವಾಸಿಗರ ಅನುಕೂಲಕ್ಕಾಗಿ ಈ ಕಾರ್ಯ ಮಾಡಲಾಗುತ್ತಿದೆ.

ಹಂಪಿ ರಸ್ತೆಗಳಲ್ಲಿ ಧೂಳು ಏಳುತ್ತಿರುವ ಬಗ್ಗೆ ಕನ್ನಡಪ್ರಭ ಅ. 23ರಂದು "ಹಂಪಿಯಲ್ಲಿ ಧೂಳಿನ ಸಿಂಚನ! " ಎಂಬ ಶೀರ್ಷಿಕೆಯಡಿ ವಿಶೇಷ ವರದಿ ಪ್ರಕಟಿಸಿತ್ತು. ಈ ವರದಿಗೆ ಸ್ಪಂದಿಸಿದ ಹಂಪಿ ಅಭಿವೃದ್ಧಿ ಪ್ರಾಧಿಕಾರ ಈಗ ಹಂಪಿ ರಸ್ತೆಯಲ್ಲಿ ಟ್ಯಾಂಕರ್‌ ಬಳಸಿ ನೀರು ಸಿಂಪರಣೆ ಮಾಡುತ್ತಿದೆ. ಹಂಪಿ ರಸ್ತೆಗಳಲ್ಲಿ ಧೂಳು ಏಳುತ್ತಿರುವ ಹಿನ್ನೆಲೆಯಲ್ಲಿ ದೇಶ-ವಿದೇಶಿ ಪ್ರವಾಸಿಗರಿಗೆ ತಿರುಗಾಡಲು ತೊಂದರೆಯಾಗುತ್ತಿದ್ದು, ಇದನ್ನರಿತು ಈಗ ಪ್ರಾಧಿಕಾರ ನೀರು ಸಿಂಪರಣೆ ಮೊರೆ ಹೋಗಿದೆ.

Share this article