ಜಲಪಾತೋತ್ಸವ: ಜಾನಪದ ಕಲಾ ಮೆರವಣಿಗೆಗೆ ಶಾಸಕ ನರೇಂದ್ರಸ್ವಾಮಿ ಚಾಲನೆ

KannadaprabhaNewsNetwork |  
Published : Sep 14, 2025, 01:04 AM IST
13ಕೆಎಂಎನ್ ಡಿ23 | Kannada Prabha

ಸಾರಾಂಶ

ಬಣ್ಣ ಬಣ್ಣದ ಕಿರಣಗಳ ಚಿತ್ತಾರ ನೋಡಲು ಮಂಡ್ಯ, ಮೈಸೂರು, ಕೊಳ್ಳೇಗಾಲ, ಚನ್ನಪಟ್ಟಣ ಸೇರಿದಂತೆ ವಿವಿಧ ಜಿಲ್ಲೆಗಳು, ಹೊರ ರಾಜ್ಯಗಳಿಂದ ಸಾವಿರಾರು ಪ್ರವಾಸಿಗರು ಆಗಮಿಸಿದ್ದರು. ಪ್ರಕೃತಿ ಸೊಬಗನ್ನು ಕಾಣ್ತುಂಬಿಕೊಂಡರು. ಜೊತೆಗೆ ಬೆಳಗ್ಗೆ 11 ರಿಂದ ರಾತ್ರಿ 11ಗಂಟೆವರೆಗೆ ನಡೆದ ಸಾಂಸ್ಕೃತಿಕ ಕಾರ್ಯಕ್ರಮ ಸವಿದರು.

ಕನ್ನಡಪ್ರಭ ವಾರ್ತೆ ಮಳವಳ್ಳಿ

ವಿಶ್ವವಿಖ್ಯಾತ ಗಗನಚುಕ್ಕಿ ಜಲಪಾತೋತ್ಸವ ಅಂಗವಾಗಿ ನಡೆದ ಜಾನಪದ ಕಲಾ ಮೆರವಣಿಗೆಗೆ ಶಾಸಕ ಪಿ.ಎಂ.ನರೇಂದ್ರಸ್ವಾಮಿ ಚಾಲನೆ ನೀಡಿದರು.

ಗಗನಚುಕ್ಕಿ ಜಲಪಾತದ ಮುಖ್ಯದ್ವಾರದಿಂದ ಮಹಿಳೆಯರ ಪೂರ್ಣಕುಂಭದೊಂದಿಗೆ ನಡೆದ ಮೆರವಣಿಗೆಯಲ್ಲಿ ತಮಟೆ, ಡೊಳ್ಳು, ಬೊಂಬೆ ಕುಣಿತ ಸೇರಿದಂತೆ ಹಲವು ಕಲಾತಂಡಗಳ ಪ್ರದರ್ಶನ ಗಮನ ಸೆಳೆಯಿತು.

ಶಾಸಕ ಪಿ.ಎಂ.ನರೇಂದ್ರಸ್ವಾಮಿ ಮಾತನಾಡಿ, ಜಲಸಿರಿಯ ವೈಭವದ ಜೊತೆಗೆ ಸಾಂಸ್ಕೃತಿಕ ಮನೋರಂಜನೆಯ ಸವಿಯನ್ನು ಸವಿಯಲು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕೆಂದು ತಿಳಿಸಿದರು.

ಈ ವೇಳೆ ಜಿಲ್ಲಾಧಿಕಾರಿ ಡಾ.ಕುಮಾರ, ಜಿಪಂ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಕೆ.ಆರ್.ನಂದಿನಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ಸೇರಿದಂತೆ ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

ಸಾವಿರಾರು ಪ್ರವಾಸಿಗರು ಭಾಗಿ:

ಗಗನಚುಕ್ಕಿ ಜಲಪಾತದ ವೈಭವವನ್ನು ವೀಕ್ಷಿಸಲು, ಕಾರ್ಯಕ್ರಮಕ್ಕೆ ಮತ್ತಷ್ಟು ಮೆರಗು ನೀಡಲು ಸಾವಿರಾರು ಪ್ರವಾಸಿಗರು ಆಗಮಿಸಿದ್ದರು.

ಬಣ್ಣ ಬಣ್ಣದ ಕಿರಣಗಳ ಚಿತ್ತಾರ ನೋಡಲು ಮಂಡ್ಯ, ಮೈಸೂರು, ಕೊಳ್ಳೇಗಾಲ, ಚನ್ನಪಟ್ಟಣ ಸೇರಿದಂತೆ ವಿವಿಧ ಜಿಲ್ಲೆಗಳು, ಹೊರ ರಾಜ್ಯಗಳಿಂದ ಸಾವಿರಾರು ಪ್ರವಾಸಿಗರು ಆಗಮಿಸಿದ್ದರು. ಪ್ರಕೃತಿ ಸೊಬಗನ್ನು ಕಾಣ್ತುಂಬಿಕೊಂಡರು. ಜೊತೆಗೆ ಬೆಳಗ್ಗೆ 11 ರಿಂದ ರಾತ್ರಿ 11ಗಂಟೆವರೆಗೆ ನಡೆದ ಸಾಂಸ್ಕೃತಿಕ ಕಾರ್ಯಕ್ರಮ ಸವಿದರು.

ಜಲಪಾತೋತ್ಸವಕ್ಕೆ ಬರುವ ಪ್ರವಾಸಿಗರಿಗೆ 40 ಊಟದ ಕೌಂಟರ್‌ಗಳನ್ನು ತೆರೆದು ಅಚ್ಚಕಟ್ಟಾಗಿ ಊಟ ಹಾಗೂ ನೀರಿನ ವ್ಯವಸ್ಥೆ ಕಲ್ಪಿಸಲಾಗಿತ್ತು. ಅಲ್ಲದೇ, ಸರ್ಕಾರದ ಕಾರ್ಯಕ್ರಮಗಳು, ಯೋಜನೆಗಳ ಮಾಹಿತಿ ನೀಡಲು ವಿವಿಧ ಇಲಾಖೆಗಳ ಹಾಗೂ ಸಂಘಗಳಿಂದ ಹಾಕಲಾಗಿದ್ದ 40ಕ್ಕೂ ಮಳಿಗೆಗಳಿಗೆ ಪ್ರವಾಸಿಗರು ಗುಂಪು ಗೂಡಿ ಸೇರಿದ್ದರು. ಹಲವು ಸ್ತ್ರೀ ಶಕ್ತಿ ಸಂಘಗಳಿಂದ ತಯಾರಿಸಲಾಗಿದ್ದ ತಿಂಡಿ ತಿನಿಸುಗಳ ಮಾರಾಟ ಮಳಿಗೆಗಳಲ್ಲಿ ಜನಸಂದನಿ ಕಂಡು ಬಂದಿತು.

ಜಲಪಾತೋತ್ಸವದ ಅಂಗವಾಗಿ ತಾಲೂಕಿನ ರೊಟ್ಟಿಕಟ್ಟೆಯಿಂದ ಜಲಪಾತದವರೆಗೆ ವಿವಿಧ ರೀತಿಯ ವರ್ಣರಂಚಿತ ವಿದ್ಯುತ್‌ ದೀಪಾಲಂಕಾರ ಅಳವಡಿಸಿ ಮಧುವಣಗಿತ್ತಿಯಂತೆ ಶೃಂಗರಿಸಿದ್ದು ಗಮನ ಸೆಳೆಯಿತು.

ನಾಳೆ ಪದವಿ ಪೂರ್ವ ಕಾಲೇಜುಗಳ ಕ್ರೀಡಾಕೂಟ

ಮಂಡ್ಯ: ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ), ಸರ್ಕಾರಿ ಪದವಿ ಪೂರ್ವ ಕಾಲೇಜು ಬಸರಾಳು ವತಿಯಿಂದ ಸೆ.15 ರಂದು ಬೆಳಗ್ಗೆ ನಗರದ ಸರ್.ಎಂ. ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ತಾಲೂಕು ಮಟ್ಟದ ಪದವಿ ಪೂರ್ವ ಕಾಲೇಜುಗಳ ಕ್ರೀಡಾಕೂಟವನ್ನು ಹಮ್ಮಿಕೊಳ್ಳಲಾಗಿದೆ.ಸೆ.17 ರಂದು ಜನ ಸಂಪರ್ಕ ಸಭೆ

ಮಂಡ್ಯ: ಮಂಡ್ಯ ವಿಭಾಗ ವ್ಯಾಪ್ತಿಯಲ್ಲಿ ಮಂಡ್ಯ ಉಪ ವಿಭಾಗ, ಕೊತ್ತತ್ತಿ ಉಪ ವಿಭಾಗ ಮತ್ತು ಕೆರಗೋಡು ಉಪ-ವಿಭಾಗದ ವ್ಯಾಪ್ತಿಯ ವಿದ್ಯುತ್ ಸಮಸ್ಯೆಗಳ ಕುರಿತು ಚರ್ಚಿಸಲು ಸೆ.17 ರಂದು ವಿದ್ಯುತ್ ಗ್ರಾಹಕರ ಕುಂದು ಕೊರತೆ ವಿಚಾರಣೆಯ ಜನ ಸಂಪರ್ಕ ಸಭೆಯನ್ನು ಮಂಡ್ಯ ವೃತ್ತದ ಎಂಜಿನಿಯರ್ ಅಧೀಕ್ಷಕರ ಅಧ್ಯಕ್ಷತೆಯಲ್ಲಿ ಬೆಳಗ್ಗೆ 11.00 ಗಂಟೆಗೆ ಮಂಡ್ಯ ವಿಭಾಗ ಕಚೇರಿ ಆವರಣದಲ್ಲಿ ಆಯೋಜಿಸಲಾಗಿದೆ. ತಾಲೂಕು ವ್ಯಾಪ್ತಿಯಲ್ಲಿ ಬರುವ ಗ್ರಾಹಕರು/ ಸಾರ್ವಜನಿಕರು ಈ ಸಭೆಯಲ್ಲಿ ಭಾಗವಹಿಸಲು ಚಾವಿಸನಿನಿ, ಕಾ ಮತ್ತು ಪಾ ವಿಭಾಗ ಕಾರ್ಯ ನಿರ್ವಾಹಕ ಅಭಿಯಂತರರು ಪ್ರಕಟಣೆಯಲ್ಲಿ ಕೋರಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನೀರಿನಲ್ಲಿ ಕಾಳು ಹಾಕಿ ಕಲಬೆರಿಕೆ ಪತ್ತೆ ಮಾಡಿ
ಭಾಷಣ ಮಾಡಿಕೊಂಡು ಹೋದವನಲ್ಲ, ಪಕ್ಷದ ಎಲ್ಲಾ ಕೆಲ್ಸ ಮಾಡಿದ್ದೇನೆ: ಡಿಕೆಶಿ