ಅಸಹಿಷ್ಣುತೆ ಕಾಲಘಟ್ಟದಲ್ಲಿದ್ದೇವೆ: ದೊರೈರಾಜ್‌ ಬೇಸರ

KannadaprabhaNewsNetwork | Published : Nov 26, 2024 12:46 AM

ಸಾರಾಂಶ

ಶ್ರೇಣೀಕೃತ ವ್ಯವಸ್ಥೆಯಲ್ಲಿ ನಮ್ಮವರು ಎಂದರೆ ನಮ್ಮ ಜಾತಿಯವರು ಮಾತ್ರ ಇರಬೇಕು ಎಂಬ ಪರಿಸ್ಥಿತಿ ನಿರ್ಮಾಣವಾಗಿದೆ. ಕೂತಾಗ, ನಿಂತಾಗ, ಮಾತನಾಡುವಾಗ ಎದುರುಗಡೆ ಇರುವ ವ್ಯಕ್ತಿಯ ಜಾತಿ ಹುಡುಕುತ್ತೇವೆ. ನಮ್ಮ ಜಾತಿಯವರಾದರೆ ಮಾತ್ರ ಮಾತಿಗೆ ಇಳಿಯುತ್ತೇವೆ. ಇಂತಹ ಅಸಹಿಷ್ಣುತೆ ಕಾಲಘಟ್ಟದಲ್ಲಿ ನಾವಿದ್ದೇವೆ ಎಂದು ಚಿಂತಕ ಕೆ.ದೊರೈರಾಜ್‌ ವಿಷಾದಿಸಿದರು.

ಕನ್ನಡಪ್ರಭ ವಾರ್ತೆ ತುಮಕೂರುಶ್ರೇಣೀಕೃತ ವ್ಯವಸ್ಥೆಯಲ್ಲಿ ನಮ್ಮವರು ಎಂದರೆ ನಮ್ಮ ಜಾತಿಯವರು ಮಾತ್ರ ಇರಬೇಕು ಎಂಬ ಪರಿಸ್ಥಿತಿ ನಿರ್ಮಾಣವಾಗಿದೆ. ಕೂತಾಗ, ನಿಂತಾಗ, ಮಾತನಾಡುವಾಗ ಎದುರುಗಡೆ ಇರುವ ವ್ಯಕ್ತಿಯ ಜಾತಿ ಹುಡುಕುತ್ತೇವೆ. ನಮ್ಮ ಜಾತಿಯವರಾದರೆ ಮಾತ್ರ ಮಾತಿಗೆ ಇಳಿಯುತ್ತೇವೆ. ಇಂತಹ ಅಸಹಿಷ್ಣುತೆ ಕಾಲಘಟ್ಟದಲ್ಲಿ ನಾವಿದ್ದೇವೆ ಎಂದು ಚಿಂತಕ ಕೆ.ದೊರೈರಾಜ್‌ ವಿಷಾದಿಸಿದರು.ನಗರದಲ್ಲಿ ಕನ್ನಡಜನಮನ ವೇದಿಕೆ, ದಲಿತ ಸಂಘರ್ಷ ಸಮಿತಿಯಿಂದ (ಅಂಬೇಡ್ಕರ್ ವಾದ) ಹಮ್ಮಿಕೊಂಡಿದ್ದ ನಮ್ಮನ್ನು ನಾವು ಗೌರವಿಸಿಕೊಳ್ಳೋಣ ಸಮಾರಂಭದಲ್ಲಿ ಮಾತನಾಡಿದರು.

ಜಾತಿ ವ್ಯವಸ್ಥೆ ಇಂದಿಗೂ ನಮ್ಮನ್ನು ಕಾಡುತ್ತಿದ್ದು, ಕ್ರೌರ್ಯದ ಜಗತ್ತು ಮುಂದುವರಿದಿದೆ. ಜಾತಿ, ಧರ್ಮ ಮೀರಿ ಇಡೀ ವ್ಯವಸ್ಥೆಯನ್ನು ಮಾನವೀಕರಣ ಮಾಡಲು ಪ್ರಯತ್ನಿಸುತ್ತಿರುವ ಮನಸುಗಳನ್ನು ಗುರುತಿಸಬೇಕು ಸಲಹೆ ಮಾಡಿದರು. ಲೇಖಕರು, ಬರಹಗಾರರು, ಸಾಹಿತಿಗಳು ಪ್ರೀತಿ ಹಂಚುತ್ತಾ, ಸಮಾಜದ ಪರಿವರ್ತನೆಗೆ ದುಡಿಯುತ್ತಿದ್ದಾರೆ. ನಮ್ಮ ಸುತ್ತ ಕ್ರೌರ್ಯ ಇದ್ದರೂ ಪ್ರೀತಿ ಬಿತ್ತಿ, ಸಮಾನತೆ ಕಾಣುತ್ತಾರೆ ಎಂದರು.

ವಿಶ್ವವಿದ್ಯಾಲಯದ ಕುಲಸಚಿವೆ ನಾಹಿದಾ ಜಮ್‌ ಜಮ್, ಡಾ.ಬಿ.ಆರ್.ಅಂಬೇಡ್ಕರ್‌ ಎಲ್ಲರಿಗೂ ಅಸ್ತಿತ್ವ ಕೊಟ್ಟರು. ಅವಮಾನ ಸಹಿಸಿ ಬದುಕಿ ತೋರಿಸಿದರು. ತಮಗಾದ ಅವಮಾನ ಇತರರಿಗೆ ಆಗಬಾರದು ಎಂದು ಹೋರಾಟ ಮಾಡಿ ಸಂವಿಧಾನ ಬರೆದರು ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಡಾ. ಬಸವರಾಜು ಮಾತನಾಡಿ ಇಲ್ಲಿ ಸನ್ಮಾನಿತರಾದವರು ಸಮ ಸಮಾಜ ಹೊಂದಬೇಕೆಂಬ ತುಡಿತವುಳ್ಳವರು, ಇವರ ಶಕ್ತಿ ರಾಜ್ಯ-ರಾಷ್ಟ್ರವನ್ನುಅಲುಗಾಡಿಸುವ ಸಾಮರ್ಥವಿದೆ, ಪ್ರಶಸ್ತಿಗಳು ಮನುಷ್ಯ ಮನುಷ್ಯನನ್ನಾಗಿ ರೂಪಿಸಿದೆ, ಇಲ್ಲಿ ಪ್ರಶಸ್ತಿಗೆ ಭಾಜನರಾಗಿರುವವರು ಶ್ರೇಷ್ಠವಾದ ಕೆಲಸ ಮಾಡುತ್ತಿರುವವರು, ಇವರು ಪದ್ಮಶ್ರೀ, ಪದ್ಮಭೂಷಣಕ್ಕಿಂತ ಹೆಚ್ಚು ಅರ್ಹರಾಗಿರುವುದರಿಂದ ಅವರನ್ನು ಸನ್ಮಾನಿಸಲಾಯಿತು ಎಂದು ಹೇಳಿದರು. ಸಾಹಿತಿ ಅಗ್ರಹಾರ ಕೃಷ್ಣಮೂರ್ತಿ, ಲೇಖಕಿಯರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷೆ ಮಲ್ಲಿಕಾ ಬಸವರಾಜು, ವಡ್ಡಗೆರೆ ಕದರಮ್ಮ, ವಿರೂಪಾಕ್ಷ ಡ್ಯಾಗೇರಹಳ್ಳಿ, ತುಂಬಾಡಿರಾಮಣ್ಣ, ಎಸ್.ವಿಷ್ಣುಕುಮಾರ್. ಪ್ರಭು ಹರಸೂರು, ಎಲ್.ಮುಕುಂದ, ಎಂ.ಸಿ.ನರಸಿಂಹಮೂರ್ತಿ, ವಾಣಿ ಸತೀಶ್, ಸಿದ್ದಗಂಗಯ್ಯ ಹೊಲತಾಳು, ಎಚ್.ವಿ.ವೆಂಕಟಾಚಲ, ಸಣ್ಣರಂಗಮ್ಮ ಪಾವಗಡಕೆ.ಎಂ.ರವೀಶ್, ಯಶವಂತ್‌ ಕಲ್ಮನೆ ಅವರನ್ನು ಸನ್ಮಾನಿಸಲಾಯಿತು.ನಿವೃತ್ತ ಎಂಜಿನಿಯರ್ ಶಿವಕುಮಾರ್, ಪತ್ರಕರ್ತಎಸ್. ನಾಗಣ್ಯ ಉಪಸ್ಥಿತರಿದ್ದರು, ಲಕ್ಷ್ಮಿರಂಗಯ್ಯ ನಿರೂಪಿಸಿ, ಕುಂದೂರು ಮುರುಳಿ ಸ್ವಾಗತಿಸಿ, ಶಿವಣ್ಣ ತಿಮ್ಲಾಪುರ ಪ್ರಾಸ್ತಾವಿಕವಾಗಿ ಮಾತನಾಡಿದರು.

Share this article