ನಾವು ಹೊರಗಿನವರಲ್ಲ, ವಿದೇಶದಿಂದ ಬಂದಿಲ್ಲ

KannadaprabhaNewsNetwork |  
Published : Aug 01, 2025, 02:15 AM IST
ಜಜಜಜಜಜ | Kannada Prabha

ಸಾರಾಂಶ

ನಾವು ಹೊರಗಿನವರಲ್ಲ, ವಿದೇಶದಿಂದ ಬಂದಿಲ್ಲ. ಈ ಜಿಲ್ಲೆಯವರೇ ಆಗಿದ್ದೇವೆ. ಸಹಕಾರ ಸಂಘಗಳ ಹಿತಕ್ಕಾಗಿ ನಮ್ಮ ಬೆಂಬಲಿತ ಅಭ್ಯರ್ಥಿಗಳನ್ನು ಆಯ್ಕೆ ಮಾಡಬೇಕು ಎಂದು ಮಾಜಿ ಸಂಸದ ಅಣ್ಣಾಸಾಹೇಬ ಜೊಲ್ಲೆ ಹೇಳಿದರು.

ಕನ್ನಡಪ್ರಭ ವಾರ್ತೆ ಸಂಕೇಶ್ವರ

ನಾವು ಹೊರಗಿನವರಲ್ಲ, ವಿದೇಶದಿಂದ ಬಂದಿಲ್ಲ. ಈ ಜಿಲ್ಲೆಯವರೇ ಆಗಿದ್ದೇವೆ. ಸಹಕಾರ ಸಂಘಗಳ ಹಿತಕ್ಕಾಗಿ ನಮ್ಮ ಬೆಂಬಲಿತ ಅಭ್ಯರ್ಥಿಗಳನ್ನು ಆಯ್ಕೆ ಮಾಡಬೇಕು ಎಂದು ಮಾಜಿ ಸಂಸದ ಅಣ್ಣಾಸಾಹೇಬ ಜೊಲ್ಲೆ ಹೇಳಿದರು.

ಪಟ್ಟಣದಲ್ಲಿ ಜೊಲ್ಲೆ-ಜಾರಕಿಹೊಳಿ ಬಣ ಗುರುವಾರ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಸದಸ್ಯರು ನಮ್ಮ ಬಳಿ ನೋವು ಹಂಚಿಕೊಂಡಿದ್ದಾರೆ. ಅವರ ರಕ್ಷಣೆಗಾಗಿ ಚುನಾವಣೆ ನಡೆಸುತ್ತಿದ್ದೇವೆ ಎಂದರು.

ಶಾಸಕ ಬಾಲಚಂದ್ರ ಜಾರಕಿಹೊಳಿ ಮಾತನಾಡಿ, ೨೦೧೫ರಲ್ಲಿ ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಚುನಾವಣೆಯಲ್ಲಿ ರಮೇಶ ಕತ್ತಿಗೆ ಕೇವಲ ಒಬ್ಬ ಸಂಚಾಲಕರ ಬೆಂಬಲವಿತ್ತು. ಆಗ ನಾವು ಅವರನ್ನು ಅಧ್ಯಕ್ಷರನ್ನಾಗಿ ಮಾಡಿದೇವು. ಆದರೆ, ಈಗ ನಾವು ಅವರಿಗೆ ಹೊರಗಿನವರಾಗಿದ್ದೇವೆ. ಕಳೆದ ೩೦ ವರ್ಷಗಳಿಂದ ಸಹಕಾರ ಕ್ಷೇತ್ರದಲ್ಲಿ ಏಕಸಾಮರಾಜ್ಯ ನಡೆದಿದೆ. ಜನರಿಗೆ ತಕ್ಕ ಕೆಲಸವಾಗಿಲ್ಲ. ಈಗ ಜನಪರವಾಗಿ ಕೆಲಸ ಮಾಡಲು ನಿರ್ಧರಿಸಿದ್ದೇವೆ ಎಂದು ತಿಳಿಸಿದರು.ಸಂಗಮ ಶುಗರ್ಸ್ ಅಧ್ಯಕ್ಷ ರಾಜೇಂದ್ರ ಪಾಟೀಲ ಮಾತನಾಡಿ, ತಾಲೂಕಿನಲ್ಲಿ ಹಿರಿಯರು ಕಟ್ಟಿ ಬೆಳೆಸಿದ ಸಂಘ ಸಂಸ್ಥೆಗಳು ಜನರಿಗೆ ಅನುಕೂಲ ಒದಗಿಸಿವೆ. ಜನರು ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಮನೆ-ಮನೆಗೆ ತೆರಳಿ ಸಮಸ್ಯೆಗಳನ್ನು ಆಲಿಸುವ ಕಾರ್ಯ ಮಾಡುತ್ತೇವೆ ಎಂದರು.ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು.ಈ ಸಭೆಗೂ ನಮಗೂ ಸಂಬಂಧವಿಲ್ಲ

ಬುಧವಾರ ಸಂಜೆಯೇ ಸಂಕೇಶ್ವರದಲ್ಲಿ ಬಿಜೆಪಿ ಕಾರ್ಯಕರ್ತರ ಸಭೆ ಇರುವುದಾಗಿ ಜೊಲ್ಲೆ-ಜಾರಕಿಹೊಳಿ ಗುಂಪು ಕಾರ್ಯಕರ್ತರನ್ನು ಸಂಪರ್ಕಿಸಲು ಆರಂಭಿಸಿತು. ಆದರೆ, ಬಿಜೆಪಿ ಮಂಡಳಿಗಳ ಮುಖಂಡರು ಮತ್ತು ಶಾಸಕ ನಿಖಿಲ್ ಕತ್ತಿ ಈ ಸಭೆಗೂ ನಮಗೂ ಯಾವುದೇ ಸಂಬಂಧವಿಲ್ಲ. ಇದು ಪಕ್ಷದ ಅಧಿಕೃತ ಸಭೆಯಲ್ಲ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಸಂದೇಶ ಹರಿಬಿಟ್ಟರು. ಕತ್ತಿ ಬೆಂಬಲಿತ ಬಿಜೆಪಿ ಕಾರ್ಯಕರ್ತರು ಮತ್ತು ಪದಾಧಿಕಾರಿಗಳು ಸಭೆಗೆ ಗೈರಾಗಿ ಪ್ರತಿರೋಧ ವ್ಯಕ್ತಪಡಿಸಿದರು. ಅಲ್ಲದೇ ಬಿಜೆಪಿ ಸಭೆಯಲ್ಲಿ ಪಕ್ಷದ ಮುಖಂಡರು ಕಾಂಗ್ರೆಸ್ ನಾಯಕರ ಗುಣಗಾನ ಮಾಡಿರುವುದು ಕಾರ್ಯಕರ್ತರಲ್ಲಿ ಸಾಕಷ್ಟು ಗೊಂಲವನ್ನುಂಟು ಮಾಡಿತು. ಇದು ಪಕ್ಷದ ನಿಷ್ಠಾವಂತರಿಗೆ ಅಸಮಾಧಾನವನ್ನುಂಟು ಮಾಡಿತು. ಮುಂಬರುವ ಹುಕ್ಕೇರಿ ಗ್ರಾಮೀಣ ವಿದ್ಯುತ್ ಸಹಕಾರ ಸಂಘದ ಚುನಾವಣೆಗೆ ಸಹಕಾರ ಪೆನಲ್ ನಾಮಕರಣ ಮಾಡಿ, ಈಗಿನಿಂದಲೇ ಪ್ರಚಾರ ಆರಂಭಿಸಲಾಗುವುದು. ಸತೀಶ ಜಾರಕಿಹೊಳಿ, ಅಣ್ಣಾಸಾಹೇಬ ಜೊಲ್ಲೆ ನೇತೃತ್ವದಲ್ಲಿ ಚುನಾವಣೆ ನಡೆಯಲಿದೆ. ಚುನಾವಣೆ ಹೊಂದಾಣಿಕೆ ಅವಧಿ ಮುಗಿದಿದ್ದು, ಈಗಿರುವ ಅಭ್ಯರ್ಥಿಗಳನ್ನೇ ಕಣಕ್ಕಿಳಿಸಿ, ಗಾಡಿ, ಘೋಡಾ ವ್ಯವಸ್ಥೆ ಮಾಡಲಾಗುವುದು.

-ಬಾಲಚಂದ್ರ ಜಾರಕಿಹೊಳಿ,
ಶಾಸಕರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ