ನಾವು ವಿಶ್ವಮಾನ್ಯ ಸಂಸ್ಕೃತಿಯ ವಾರಸುದಾರರು ಎಂಬುದೇ ಹೆಮ್ಮೆ: ಡಾ.ರವೀಶ್‌ ಪಡುಮಲೆ

KannadaprabhaNewsNetwork |  
Published : Oct 14, 2024, 01:29 AM IST
*ಭಾರತದ ವಿವಿಧತೆಯಲ್ಲಿ ಸಾಮಾಜಿಕ ಸಾಮರಸ್ಯವೇ ಲೋಕಮಾನ್ಯ ಡಾ.ರವೀಶ್ ಪಡುಮಲೆ* | Kannada Prabha

ಸಾರಾಂಶ

ಉಪ್ಪಿನಂಗಡಿಯ ರಾಮನಗರದಲ್ಲಿನ 30 ನೇ ವರ್ಷದ ಸಾರ್ವಜನಿಕ ಶ್ರೀ ಶಾರದೋತ್ಸವದ ಧಾರ್ಮಿಕ ಸಭಾ ಕಾರ್ಯಕ್ರಮ ನಡೆಯಿತು.

ಕನ್ನಡಪ್ರಭ ವಾರ್ತೆ ಉಪ್ಪಿನಂಗಡಿ

ನಮ್ಮಲ್ಲಿರುವ ವಿವಿಧ ಸಂಸ್ಕೃತಿ ವಿವಿಧ ಆಚಾರ ವಿಚಾರಗಳಲ್ಲಿನ ಸಾಮರಸ್ಯದ ಬದುಕು ಇಡೀ ವಿಶ್ವವೇ ಗೌರವಿಸುತ್ತಿದ್ದು, ವಿಶ್ವಮಾನ್ಯ ಸಂಸ್ಕೃತಿಯ ವಾರಸುದಾರರು ನಾವೆಂಬ ಅಭಿಮಾನ ನಮ್ಮಲ್ಲಿರಬೇಕೆಂದು ಚಿಂತಕ ಡಾ. ರವೀಶ್ ಪಡುಮಲೆ ತಿಳಿಸಿದರು.

ಅವರು ಉಪ್ಪಿನಂಗಡಿಯ ರಾಮನಗರದಲ್ಲಿನ 30 ನೇ ವರ್ಷದ ಸಾರ್ವಜನಿಕ ಶ್ರೀ ಶಾರದೋತ್ಸವದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದರು.

ಸಮಾಜದಲ್ಲಿ ವಯೋಮಾನಕ್ಕನುಗುಣವಾದ ಕರ್ತವ್ಯಗಳನ್ನು ನಾವು ನಿರ್ವಹಿಸಬೇಕಾಗಿದೆ. ಮಕ್ಕಳಾಗಿ ನಮ್ಮ ಕರ್ತವ್ಯ , ತಂದೆ ತಾಯಿಗಳಾಗಿ ನಮ್ಮ ಕರ್ತವ್ಯ, ಹಿರಿಯರಾಗಿ ನಮ್ಮ ಕರ್ತವ್ಯ ಸಮಾಜದಲ್ಲಿ ಒಬ್ಬ ಉತ್ತಮ ಪ್ರಜೆಯಾಗಿ ನಮ್ಮ ಕರ್ತವ್ಯಗಳ ಬಗ್ಗೆ ಜವಾಬ್ದಾರಿ ವಹಿಸಿ ಸಾಮಾಜಿಕ ಸಾಮರಸ್ಯಕ್ಕೆ ಒತ್ತು ನೀಡಿ, ಇಡೀ ಹಿಂದೂ ಸಮಾಜ ಒಂದು ಅನ್ನುವ ಭಾವನೆ ನಮ್ಮಲ್ಲಿರಬೇಕು ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಯುವ ಉದ್ಯಮಿ ಪ್ರಸನ್ನ ಕುಮಾರ್ ದರ್ಬೆ ಮಾತನಾಡಿ, ಸಂಕುಚಿತತೆಯನ್ನು ತೊರೆದು ಧರ್ಮದ ರಕ್ಷಣೆಯ ಬಗ್ಗೆ ಚಿಂತಿಸೋಣ. ಸಂಘಟಿತರಾಗಿ ಎಲ್ಲರೂ ಜೊತೆಯಾಗಿ ಧರ್ಮವನ್ನು ಉಳಿಸುವಲ್ಲಿ ಪ್ರಮಾಣಿಕವಾಗಿ ಪ್ರಯತ್ನಶೀಲರಾಗಬೇಕು ಎಂದು ಹೇಳಿದರು. ಶಾರದೋತ್ಸವ ಸಮಿತಿ ಅಧ್ಯಕ್ಷರಾದ ಚಂದ್ರಶೇಖರ ಮಡಿವಾಳ ಅಧ್ಯಕ್ಷತೆ ವಹಿಸಿದ್ದರು. ಡಾ. ನಿರಂಜನ್ ರೈ ಮತ್ತು ಸಮಿತಿ ಗೌರವಾಧ್ಯಕ್ಷ ಎನ್ ಉಮೇಶ್ ಶೆಣೈ , ಕಾರ್ಯಾಧ್ಯಕ್ಷ ರಾಮಚಂದ್ರ ಮಣಿಯಾಣಿ ಉಪಸ್ಥಿತರಿದ್ದರು.ಕಾರ್ಯಕ್ರಮದಲ್ಲಿ ದೀಪಕ್ ಪೈ ಯು, ಕಂಗ್ವೆ ವಿಶ್ವನಾಥ ಶೆಟ್ಟಿ, ವಿದ್ಯಾಧರ ಜೈನ್, ಗಣೇಶ್ ಭಂಡಾರಿ, ಶ್ಯಾಮಲಾ ಶೆಣೈ, ಜಯಂತ ಪೊರೋಳಿ, ಗಣೇಶ್ ಶೆಣೈ, ರಘುರಾಮ್, ಸಚಿನ್ ಕೋಟೆ, ಧನಂಜಯ ನಟ್ಟಿಬೈಲ್, ಅಭಿಲಾಶ್, ಯತೀಶ್ ಶೆಟ್ಟಿ, ನೈತಿಕ್ ಶೆಟ್ಟಿ, ಸವಿತಾ ಮಹಾಬಲ ಶೆಟ್ಟಿ, ಉಷಾ ಕಿರಣ , ಕೃಷ್ಣಪ್ಪ ಹರಿನಗರ, ಹರಿರಾಮಚಂದ್ರ ಮೊದಲಾದವರು ಭಾಗವಹಿಸಿದ್ದರು.

PREV

Recommended Stories

ರಾಜ್ಯದಲ್ಲಿ 3 ದಿನ ಮಳೆ : 5 ಜಿಲ್ಲೆ ಯೆಲ್ಲೋ ಅಲರ್ಟ್‌
180 ಸ್ಥಳೀಯ ಸಂಸ್ಥೆಗಳ ಚುನಾವಣೆ ಸದ್ಯಕ್ಕೆ ಕಷ್ಟ : ಕೋರ್ಟ್‌ಗೆ ಸರ್ಕಾರ