ನಮ್ಮ ನಿಷ್ಟೆ ಎದೆ ಬಗೆದು ತೋರಿಸಲು ಆಗೋದಿಲ್ಲ: ಸಿ.ಟಿ. ರವಿ

KannadaprabhaNewsNetwork |  
Published : Feb 25, 2024, 01:49 AM IST
ಸಿ.ಟಿ. ರವಿ | Kannada Prabha

ಸಾರಾಂಶ

ಇಲ್ಲಿ ಯಾವುದೂ ಬಣ ಇಲ್ಲ, ಬಿಜೆಪಿ ಮಾತ್ರ ಇರೋದು, ಹಿಂದೆಯೂ ಬಿಜೆಪಿಯಲ್ಲಿ ಕೆಲಸ ಮಾಡಿದ್ದೇವೆ. ಮುಂದೆಯೂ ಮಾಡುತ್ತೇವೆ. ನಮ್ಮ ನಿಷ್ಟೆಯನ್ನು ಎದೆ ಬಗೆದು ತೋರಿಸಲು ಆಗುವುದಿಲ್ಲ ಎಂದು ಮಾಜಿ ಸಚಿವ ಸಿ.ಟಿ. ರವಿ ಹೇಳಿದ್ದಾರೆ.

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುಇಲ್ಲಿ ಯಾವುದೂ ಬಣ ಇಲ್ಲ, ಬಿಜೆಪಿ ಮಾತ್ರ ಇರೋದು, ಹಿಂದೆಯೂ ಬಿಜೆಪಿಯಲ್ಲಿ ಕೆಲಸ ಮಾಡಿದ್ದೇವೆ. ಮುಂದೆಯೂ ಮಾಡುತ್ತೇವೆ. ನಮ್ಮ ನಿಷ್ಟೆಯನ್ನು ಎದೆ ಬಗೆದು ತೋರಿಸಲು ಆಗುವುದಿಲ್ಲ ಎಂದು ಮಾಜಿ ಸಚಿವ ಸಿ.ಟಿ. ರವಿ ಹೇಳಿದ್ದಾರೆ. ಸಂಸದೆ ಶೋಭಾ ಕರಂದ್ಲಾಜೆ ವಿರುದ್ಧ ನಡೆಯುತ್ತಿರುವ ಗೋ ಬ್ಯಾಕ್ ಶೋಭಾ ಅಭಿಯಾನದ ಹಿಂದೆ ತಮ್ಮ ಕೈವಾಡ ಇದೆ ಎಂಬ ಆರೋಪಕ್ಕೆ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡುವಾಗ ತೀಕ್ಷ್ಣವಾಗಿ ಅವರು ಪ್ರತಿಕ್ರಿಯೆ ನೀಡಿದರು. ನಾನು, ಒಂದು ಚುನಾವಣೆಗೆ ಒಂದು, ಇನ್ನೊಂದು ಚುನಾವಣೆ ಇನ್ನೊಂದು ರೀತಿ ಅಲ್ಲ. ಹುಟ್ಟಿದ್ದು ಬಿಜೆಪಿಯಲ್ಲೇ ಸಾಯೋದು ಬಿಜೆಪಿಯಲ್ಲೇ ಎಂದು ಹೇಳಿದರು.

ನಮ್ಮ ಪಕ್ಷ ನಿಷ್ಟೆಯನ್ನು ಪ್ರಶ್ನೆ ಮಾಡುವ ಧೈರ್ಯ ಯಾರಿಗೂ ಇಲ್ಲ. ನಮ್ಮ ನಿಯತ್ತು ಏನೆಂದು ಗೊತ್ತಿಗೆ ಯಾರೂ ಪ್ರಶ್ನೆ ಮಾಡಲು ಅವಕಾಶ ಕೊಟ್ಟಿಲ್ಲ ಎಂದರು. ನಾನು ಹಲವಾರು ರಾಜ್ಯಗಳಲ್ಲಿ ಚುನಾವಣೆಯಲ್ಲಿ ಕೆಲಸ ಮಾಡಿದ್ದೇನೆ. ಟಿಕೆಟ್ ಕೊಡುವ ಪದ್ಧತಿ ನೋಡಿದ್ದೇನೆ. ಈ ರೀತಿ ಪ್ರಕ್ರಿಯೆಯಿಂದ ಯಾರಿಗೂ ಟಿಕೆಟ್ ಸಿಗೋದಿಲ್ಲ. ನಾನಂತು ಕೇಳಿ ಪಡೆದುಕೊಂಡಿಲ್ಲ, ಇಂತದ್ದು ಕೊಡಿ ಎಂದು ಕೇಳದೆ ಪಕ್ಷದಲ್ಲಿ ಬೆಳೆದಿದ್ದೇನೆ ಎಂದು ಹೇಳಿದರು. ಪಾರ್ಲಿಮೆಂಟರಿ ಬೋರ್ಡ್‌ ಮಿಟಿಂಗ್ ಆಗಿಲ್ಲ. ಟಿಕೆಟ್ ಫೈನಲ್ ಆಗಿರೋದು ಮೋದಿ ಒಬ್ಬರಿಗೆ ಮಾತ್ರ. ಮೋದಿ ಮತ್ತೊಮ್ಮೆ ಪ್ರಧಾನಿಯಾಗಬೇಕು. ಬಿಜೆಪಿ ಕೇಂದ್ರದಲ್ಲಿ ಗೆಲ್ಲಬೇಕು ಎಂದು ಹೇಳಿದರು. ನಮ್ಮ ಅತಿರೇಕದ ಚಟುವಟಿಕೆ ಇನ್ನೊಬ್ಬರಿಗೆ ಆಹಾರವಾಗಬಾರದು. ಹಾಗಾಗಿ ಈ ರೀತಿ ಚಟುವಟಿಕೆ ಮಾಡಬಾರದು. ಪಕ್ಷದಲ್ಲಿ ಟಿಕೆಟ್ ಕೊಡುವ ಮಾನದಂಡ ಬೇರೆಯೇ ಇದೆ. ಅದರ ಅಧಾರದಲ್ಲಿ ಟಿಕೆಟ್ ನೀಡುತ್ತಾರೆ ಎಂದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕಮಲಾಕರ ಭಟ್‌ಗೆ ಸುಚಿತ್ರಾಳಿಂದ ಹನಿಟ್ರ್ಯಾಪ್‌! - ಖಾಸಗಿ ಕ್ಷಣಗಳ ವಿಡಿಯೋ ಮಾಡಿ ಬ್ಲ್ಯಾಕ್‌ ಮೇಲ್‌
ರಾಜಧಾನಿಯಲ್ಲಿ ಡ್ರಗ್ಸ್ ಬೇಟೆ : ಸಾವಿರ ವ್ಯಸನಿಗಳ ಸೆರೆ