ಕನ್ನಡಪ್ರಭ ವಾರ್ತೆ ಬಾಗಲಕೋಟೆ
ಶನಿವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ಸರ್ಕಾರದ ರೈಲು, ಬ್ಯಾಂಕ್‌ಗಳು ಎಲ್ಲ ಕಡೆ ಹಿಂದಿ ಭಾಷಿಕರಿಗೆ ಶೇ.80ರಷ್ಟು ಉದ್ಯೋಗ ನೀಡಿ ಕನ್ನಡ ನಾಡಿನಲ್ಲಿ ಕನ್ನಡಿಗರಿಗೆ ಭಾರೀ ವಂಚನೆ ಮಾಡುತ್ತಿದ್ದರೂ ರಾಜ್ಯ ಸರ್ಕಾರ ಸಂಪೂರ್ಣ ನಿರ್ಲಕ್ಷ್ಯ ವಹಿಸಿದೆ. ಆದರೆ ನಿಜವಾಗಲೂ ಹೇರಿಕೆ ಕನ್ನಡಿಗರ ಮೇಲಾಗುತ್ತಿದೆ ಎಂದು ವಿಷಾದ ವ್ಯಕ್ತಪಡಿಸಿದರು.
ಕನ್ನಡಿಗರು ಪ್ರಬಲವಾಗಿ ಧಿಕ್ಕರಿಸಲು ಎಡ-ಬಲ ಪಂಥಗಳ ನಾಯಕರು, ಕಾರ್ಯಕರ್ತರು ಎಲ್ಲ ರಾಜಕೀಯ ನಾಯಕರು, ಕಾರ್ಯಕರ್ತರು, ರಾಷ್ಟ್ರೀಯವಾದಿಗಳು ಮುಂಚೂಣಿಯಲ್ಲಿರುವ ವಿದ್ಯಾರ್ಥಿ ಸಂಘಟನೆಗಳು ಪರೋಕ್ಷವಾಗಿ ಪ್ರಾದೇಶಿಕತೆಯನ್ನು ಬಲವಾಗಿ ವಿರೋಧಿಸುವರೇ ಆಗಿದ್ದಾರೆ. ಇದೇ ಕನ್ನಡ ಭಾಷೆಗೆ ದೊಡ್ಡ ಅಪಾಯವಾಗಿದೆ. ನಮ್ಮ ತಾಯಿ ಭಾಷೆ ಉಳಿಯಬೇಕಾದರೆ ಹಿಂದಿ ಹೇರಿಕೆ ಇತರೆ ಭಾಷೆಗಳ ಒತ್ತಾಯಪೂರ್ವಕ ಹೇರಿಕೆಯನ್ನು ಶತಾಯಗತಾಯ ಪ್ರಬಲವಾಗಿ ಪ್ರತಿಭಟಿಸುವುದಲ್ಲದೇ ತಡಗಟ್ಟಲೇ ಬೇಕು. ಆದ್ದರಿಂದ ಕನ್ನಡಿಗರಿಗೆ ಉದ್ಯೋಗ ದಕ್ಕಬೇಕಾದರೆ ಡಾ.ಸರೋಜಿನಿ ಮಹಿಷಿ ವರದಿ ಜಾರಿಗೆ ತರಬೇಕು ಎಂದು ಆಗ್ರಹಿಸಿದರು.ಈ ವೇಳೆ ದುಂಡಪ್ಪ ಯರಗಟ್ಟಿ, ಸಲ್ಮಾನ್, ಎಂ.ಪಿ.ಮುಳಗುಂದ, ಗವಿಸಿದ್ದಯ್ಯ, ಹಳ್ಳಿಕೇರಿ ಮಠ ಮತ್ತಿತರರು ಇದ್ದರು.