ಬೀದಿಗಳಲ್ಲಿ ಕಸ ಹಾಕಿ ನಾವೇ ಅನಾರೋಗ್ಯಕ್ಕೆ ತುತ್ತಾಗುತ್ತಿದ್ದೇವೆ: ಮಂಜುನಾಥ್ ಬೇಸರ

KannadaprabhaNewsNetwork |  
Published : Nov 03, 2026, 01:45 AM IST
2ಕೆಎಂಎನ್ ಡಿ11 | Kannada Prabha

ಸಾರಾಂಶ

ಬೀದಿಗಳಲ್ಲಿ ಕಸ ಹಾಕುವ ಮೂಲಕ ಭೂಮಿಯ ಸ್ವಚ್ಛತೆ ಹಾಳು ಮಾಡಿ ಮನುಷ್ಯರಾದ ನಾವೇ ಅನಾರೋಗ್ಯಕ್ಕೆ ತುತ್ತಾಗುತ್ತಿದ್ದೇವೆ. ನಾವೇ ಹಾಳು ಮಾಡಿರುವ ಪರಿಸರವನ್ನು ಸ್ವಚ್ಛಗೊಳಿಸಿ ಮುಂದಿನ ಪೀಳಿಗೆಗೆ ಉತ್ತಮ ಪರಿಸರ ನೀಡಬೇಕಿದೆ.

ಕನ್ನಡಪ್ರಭ ವಾರ್ತೆ ಕೆ.ಎಂ.ದೊಡ್ಡಿ

ಬೀದಿಗಳಲ್ಲಿ ಕಸ ಹಾಕುವ ಮೂಲಕ ಭೂಮಿಯ ಸ್ವಚ್ಛತೆ ಹಾಳು ಮಾಡಿ ಮನುಷ್ಯರಾದ ನಾವೇ ಅನಾರೋಗ್ಯಕ್ಕೆ ತುತ್ತಾಗುತ್ತಿದ್ದೇವೆ ಎಂದು ಬೆಂಗಳೂರು ಮಹಾತ್ಮ ಗಾಂಧಿ ಇಂಧನ ಮತ್ತು ಸಂಶೋಧನಾ ಸಂಸ್ಥೆ ಬೋಧಕ ಮಂಜುನಾಥ್ ಬೇಸರ ವ್ಯಕ್ತಪಡಿಸಿದರು.

ಭಾರತಿನಗರ, ಅಣ್ಣೂರು, ಡಿ.ಎ.ಕೆರೆ, ಮತ್ತು ಮಾದರಹಳ್ಳಿ ಗ್ರಾಪಂ ಮಹಿಳಾ ಒಕ್ಕೂಟದ ಸದಸ್ಯರಿಗೆ ಮಹಾತ್ಮ ಗಾಂಧಿ ಇಂಧನ ಮತ್ತು ಸಂಶೋಧನಾ ಸಂಸ್ಥೆ ಬೆಂಗಳೂರು ಹಾಗೂ ಧರಣಿ ಚಾರಿಟಬಲ್ ಟ್ರಸ್ಟ್ ನಾಗಮಂಗಲ ವತಿಯಿಂದ ಆಯೋಜಿಸಿದ್ದ ಘನ ತ್ಯಾಜ್ಯ ವಿಲೇವಾರಿ, ಮಳೆ ನೀರು ಕೊಯ್ಲು ಮತ್ತು ಇಂಧನ ಅಭಿವೃದ್ಧಿ ಕುರಿತು ನಡೆದ ಒಂದು ದಿನದ ಕಾರ್ಯಾಗಾರದಲ್ಲಿ ಮಾತನಾಡಿ, ನಾವೇ ಹಾಳು ಮಾಡಿರುವ ಪರಿಸರವನ್ನು ಸ್ವಚ್ಛಗೊಳಿಸಿ ಮುಂದಿನ ಪೀಳಿಗೆಗೆ ಉತ್ತಮ ಪರಿಸರ ನೀಡಬೇಕಿದೆ ಎಂದರು.

ಸಂಪನ್ಮೂಲ ವ್ಯಕ್ತಿ ಹುರುಗಲವಾಡಿ ರಾಮಯ್ಯ ಮಾತನಾಡಿ, ಮಳೆ ನೀರು ಭೂಮಿಯಲ್ಲಿ ಹಿಂಗಿಸುವ ಮೂಲಕ ಅಂತರ್ಜಲ ಹೆಚ್ಚಿಸಬೇಕು. ಮನೆ ಚಾವಣಿಗಳು, ಸರ್ಕಾರಿ ಕಟ್ಟಡಗಳು, ಜಮೀನುಗಳಲ್ಲಿ ಮತ್ತು ಕಾಂಕ್ರೀಟ್ ಮಯವಾಗಿರುವ ನಗರಗಳಲ್ಲಿ ಮಳೆ ನೀರು ಕೊಯ್ಲು ಮಾಡುವ ಮೂಲಕ ಶುದ್ಧ ನೀರನ್ನು ಪಡೆಯಬೇಕು. ಮಿತ ಬಳಕೆಯಿಂದ ಮಾತ್ರ ಊರುಕೇರಿ ಜನಮನ ಸ್ವಚ್ಛವಾಗಿ ಆರೋಗ್ಯವಂತ ಸಮಾಜ ಸಾಧ್ಯವಾಗಲಿದೆ ಎಂದರು.

ಧರಣಿ ಸಂಸ್ಥೆ ಅಧ್ಯಕ್ಷ ಶ್ರೀನಿವಾಸ್ ಮಾತನಾಡಿ, ಸಬೂಬುಗಳನ್ನು ಬಿಟ್ಟು ಜವಾಬ್ದಾರಿತವಾಗಿ ನಡೆದುಕೊಂಡು ಸ್ವಚ್ಛ ಪರಿಸರ ನಿರ್ಮಾಣ ಮಾಡುವಲ್ಲಿ ನಾವೆಲ್ಲರೂ ಗಮನ ಹರಿಸಬೇಕು ಎಂದರು.

ಕಾರ್ಯಾಗಾರವನ್ನು ಮಾದರಹಳ್ಳಿ ಗ್ರಾಪಂ ಪಿಡಿಒ ಓದುಲಿಂಗು, ಮಹಿಳಾ ಒಕ್ಕೂಟದ ಅಧ್ಯಕ್ಷರಾದ ಎಸ್.ಎಸ್.ಮಂಗಳ ಗೌರಿ ಭಾರತಿನಗರ, ದೇವಿರಮ್ಮ ಮಾದರಹಳ್ಳಿ, ಅಂಬಿಕಾ ಅಣ್ಣೂರು ಉದ್ಘಾಟಿಸಿದರು. ತರಬೇತಿ ಸಂಘಟಕ ಗೋವಿಂದಸ್ವಾಮಿ, ಸಂಪನ್ಮೂಲ ವ್ಯಕ್ತಿಗಳಾದ ದೀಪಿಕಾ, ಮಂಜುನಾಥ್, ಭಾಗ್ಯ ಮಹಿಳೆಯರಿಗೆ ತರಬೇತಿ ನೀಡಿದರು. ಎನ್ ಆರ್ ಎಲ್ ಎಂ ಸಂಯೋಜಕ ಅಂಬರಹಳ್ಳಿ ಸ್ವಾಮಿ, ಆರ್ಥಿಕ ಸಾಕ್ಷರತೆ ಸಲಹೆಗಾರ ರಮೇಶ್ ಶಿವಾರ, ವ್ಯವಸ್ಥಾಪಕ ಗುರುಲಿಂಗ ಸ್ವಾಮಿ ಇತರರು ಹಾಜರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಭುಗಿಲೆದ್ದ ಸರ್ಕಾರ ವರ್ಸಸ್‌ ಕುಮಾರಸ್ವಾಮಿ ಸ್ಟಿಂಗ್‌ ಫೈಟ್‌ - ಈಗ ಎಚ್‌ಡಿಕೆ ಚಾರ್ಜ್‌ಶೀಟ್‌
ಅರಬ್ಬಿ ಸಮುದ್ರದಲ್ಲಿ ಚಂಡಮಾರುತ - ಇನ್ನೂ 3 ದಿನ ರಾಜ್ಯದೆಲ್ಲೆಡೆ ಮಳೆ