ಉತ್ತಮ ನಾಳೆಗಳನ್ನು ಸೃಷ್ಟಿಸಬೇಕು

KannadaprabhaNewsNetwork |  
Published : Oct 16, 2025, 02:00 AM IST
ಸುದ್ದಿ ಚಿತ್ರ 1ಡಾ ಎಸ್.ಆರ್.ಚಂದ್ರಶೇಖರ್ ಇನ್ಸ್ಟಿಟ್ಯೂಟ್ ಆಫ್ ಸ್ಪೀಚ್ ಅಂಡ್ ಹಿಯರಿಂಗ್ ಟ್ರಸ್ಟ್ಗೆ ಸಿಎಸ್ಆರ್ ಸರ್ಕಲ್ ಆಫ್ ಹಾನರ್ ಪುರಸ್ಕಾರ ನೀಡಿ ಗೌರವಿಸಲಾಯಿತು. ಟ್ರಸ್ಟ್ನ ಅಧ್ಯಕ್ಷರಾದ ಲಯನ್ ವಿವಿ ಕೃಷ್ಣಾ ರೆಡ್ಡಿ, ಟ್ರಸ್ಟಿಗಳಾದ ವಿಎಸ್ ಶಾಂತವರ್ಧನ್, ಡಿ.ಎಲ್.ಸುರೇಶ್ ಬಾಬು ಅವರು ಸದ್ಗುರು ಶ್ರೀ ಮಧುಸೂದನ ಸಾಯಿ ಅವರಿಂದ ಪ್ರಶಸ್ತಿ ಸ್ವೀಕರಿಸಿದರು. | Kannada Prabha

ಸಾರಾಂಶ

ಈ ಜಗತ್ತು ಎಂದಿಗೂ ಶಾಂತಿಯುತ ಸ್ಥಳವಲ್ಲ, 21ನೇ ಶತಮಾನದಲ್ಲಿಯೂ ಏನಾದರೂ ಒಂದು ರೀತಿಯ ಘಟನೆಗಳು ನಡೆಯುತ್ತಲೇ ಇರುತ್ತವೆ. ನಮ್ಮ ಹೋರಾಟ, ಯುದ್ಧ, ಘರ್ಷಣೆಗಳು ಮತ್ತು ಅವ್ಯವಸ್ಥೆಗಳು ಇನ್ನೂ ಮುಗಿದಿಲ್ಲ. ತಪ್ಪುಗಳನ್ನು ಪುನರಾವರ್ತಿಸುತ್ತಲೇ ಇರುತ್ತೇವೆ. ಆದರೆ ಈ ಸಂದರ್ಭದಲ್ಲಿ ಪರಸ್ಪರ ಸಂವಾದ ನಡೆಸಿ, ಬಿರುಕುಗಳನ್ನು ತುಂಬಬಹುದು

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ಲಿಥುವೇನಿಯಾ ದೇಶದಲ್ಲಿ ಬಳಸುವ ಪದಗಳು ಮತ್ತು ಸಂಸ್ಕೃತದ ಕೆಲವು ಪದಗಳಲ್ಲಿ ಹೋಲಿಕೆ ಇವೆ. ಎರಡೂ ದೇಶಗಳೂ ಸಾವಿರಾರುವರ್ಷಗಳ ಹಿಂದೆಯೇ ಪರಸ್ಪರ ನಾಗರಿಕ ಸಂಪರ್ಕ ಹೊಂದಿದ್ದೆವು ಎಂಬುದನ್ನು ಇದು ಸಾಕ್ಷೀಕರಿಸುತ್ತದೆ ಎಂದು ಸದ್ಗುರು ಶ್ರೀ ಮಧುಸೂದನ ಸಾಯಿ ಹೇಳಿದರು.ಮುದ್ದೇನಹಳ್ಳಿಯ ಸತ್ಯ ಸಾಯಿ ಗ್ರಾಮದಲ್ಲಿ ನಡೆಯುತ್ತಿರುವ ''''ಒಂದು ಜಗತ್ತು ಒಂದು ಕುಟುಂಬ ಜಾಗತಿಕ ಸಾಂಸ್ಕೃತಿಕ ಉತ್ಸವ''''ದ 60ನೇ ದಿನವಾದ ಮಂಗಳವಾರ ಆಶೀರ್ವಚನ ನೀಡಿದ ಸದ್ಗುರು, ಸಾವಿರಾರು ವರ್ಷಗಳ ಹಿಂದಿನ ಸಂಪರ್ಕ ಅಥವಾ ಸಹೋದರತ್ವವನ್ನು ಒಂದು ಜಗತ್ತು ಒಂದು ಕುಟುಂಬದ ಮಿಷನ್ ಮೂಲಕ ಈಗಲೂ ಮುಂದುವರಿಸಲು ಪ್ರಯತ್ನ ನಡೆಯುತ್ತಿದೆ ಎಂದರು.ಉತ್ತಮ ನಾಳೆಗಳನ್ನು ಸೃಷ್ಟಿಸಿ

ಈ ಜಗತ್ತು ಎಂದಿಗೂ ಶಾಂತಿಯುತ ಸ್ಥಳವಲ್ಲ, 21ನೇ ಶತಮಾನದಲ್ಲಿಯೂ ಏನಾದರೂ ಒಂದು ರೀತಿಯ ಘಟನೆಗಳು ನಡೆಯುತ್ತಲೇ ಇರುತ್ತವೆ. ನಮ್ಮ ಹೋರಾಟ, ಯುದ್ಧ, ಘರ್ಷಣೆಗಳು ಮತ್ತು ಅವ್ಯವಸ್ಥೆಗಳು ಇನ್ನೂ ಮುಗಿದಿಲ್ಲ. ತಪ್ಪುಗಳನ್ನು ಪುನರಾವರ್ತಿಸುತ್ತಲೇ ಇರುತ್ತೇವೆ. ಆದರೆ ಈ ಸಂದರ್ಭದಲ್ಲಿ ಪರಸ್ಪರ ಸಂವಾದ ನಡೆಸಿ, ಬಿರುಕುಗಳನ್ನು ತುಂಬಬಹುದು, ಆಗಿರುವ ಗಾಯಗಳನ್ನು ಗುಣಪಡಿಸಬಹುದು, ಉತ್ತಮ ನಾಳೆಯನ್ನು ಸೃಷ್ಟಿಸಬಹುದು, ಒಂದು ಜಗತ್ತು ಒಂದು ಕುಟುಂಬದ ಧ್ಯೇಯವು ಇದೇ ಆಗಿದೆ ಎಂದು ವಿವರಿಸಿದರು.ಜಾಗತಿಕ ನಾಯಕತ್ವ ಪ್ರಶಸ್ತಿ

''''ಬೈನ್ ಕ್ಯಾಪಿಟಲ್ ಇಂಡಿಯಾ'''' ಕಂಪನಿಯ ಅಧ್ಯಕ್ಷರು ಮತ್ತು ವ್ಯವಸ್ಥಾಪಕ ನಿರ್ದೇಶಕರಾದ ಅಮಿತ್ ಚಂದ್ರ ಅವರಿಗೆ ''''''''ಒಂದು ಜಗತ್ತು ಒಂದು ಕುಟುಂಬ ಜಾಗತಿಕ ನಾಯಕತ್ವ'''''''' ಪುರಸ್ಕಾರ ನೀಡಿ ಗೌರವಿಸಲಾಯಿತು. ಆರೋಗ್ಯ ಕ್ಷೇತ್ರಕ್ಕೆ ಬೆಂಬಲ ನೀಡುತ್ತಿರುವ ''''''''ಡಾ ಎಸ್ ಆರ್ ಚಂದ್ರಶೇಖರ್ ಇನ್ಸ್ಟಿಟ್ಯೂಟ್ ಆಫ್ ಸ್ಪೀಚ್ ಅಂಡ್ ಹಿಯರಿಂಗ್ ಟ್ರಸ್ಟ್‌ಗೆ ಸಿಎಸ್ಆರ್ ಸರ್ಕಲ್ ಆಫ್ ಹಾನರ್ ಪುರಸ್ಕಾರ ನೀಡಿ ಗೌರವಿಸಲಾಯಿತು.

ಟ್ರಸ್ಟ್ನ ಅಧ್ಯಕ್ಷರಾದ ಲಯನ್ ವಿವಿ ಕೃಷ್ಣಾ ರೆಡ್ಡಿ, ಟ್ರಸ್ಟಿಗಳಾದ ವಿಎಸ್ ಶಾಂತವರ್ಧನ್, ಡಿಎಲ್ ಸುರೇಶ್ ಬಾಬು ಪ್ರಶಸ್ತಿ ಸ್ವೀಕರಿಸಿದರು. ಲಿಥುವೇನಿಯಾ ದೇಶದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣಕ್ಕಾಗಿ ಶ್ರಮಿಸುತ್ತಿರುವ ಲೆವಾ ಕ್ರಿವಿಕೈಟ್ ಅವರಿಗೆ ಒಂದು ಜಗತ್ತು ಒಂದು ಕುಟುಂಬ ಮಾನವೀಯ ಪುರಸ್ಕಾರ ನೀಡಿ ಗೌರವಿಸಲಾಯಿತು. ಲಿಥುವೇನಿಯಾದ ಪ್ರತಿನಿಧಿಗಳಾದ ಐಸ್ಟೆ ಕೈರೈಟೀನ್, ರಿಕಾರ್ಡಸ್ ಕೈರೈಟೀಸ್, ಲಾಟ್ವಿಯಾ ದೇಶದ ಪ್ರತಿನಿಧಿ ಎಲಿನಾ ಲೆಡಿನಾ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು.

PREV

Recommended Stories

ಆರೆಸ್ಸೆಸ್‌ ವಿಚಾರಕ್ಕೆ ಪ್ರಿಯಾಂಕ್‌ಗೆ ಬೆದರಿಕೆ ಕರೆ ಮಾಡಿದ್ದವನ ಬಂಧನ
2,350 ಕೋಟಿ ವೆಚ್ಚದಲ್ಲಿ ಕ್ರಿಕೆಟ್‌ ಸ್ಟೇಡಿಯಂ ನಿರ್ಮಾಣಕ್ಕೆ ಒಪ್ಪಿಗೆ