ನಾಡಿನ ಗಡಿ ಭಾಗಗಳಲ್ಲಿ, ಬೆಂಗಳೂರಿನಂತಹ ದೊಡ್ಡದೊಡ್ಡ ನಗರಗಳಲ್ಲಿ ಕನ್ನಡ ಭಾಷೆಗೆ ಸಾಕಷ್ಟು ಪೆಟ್ಟುಬೀಳುತ್ತಿವೆ. ಅನ್ಯಭಾಷಿಗರ ಹಾವಳಿ ಹೆಚ್ಚಾಗಿದೆ. ಅನ್ಯಭಾಷಿಕರು ಕನ್ನಡ ಭಾಷೆ ಮಾತನಾಡುವ ಹಾಗೆ ನಾವೆಲ್ಲರು ಮಾಡಬೇಕಿದೆ.
ಕನ್ನಡಪ್ರಭ ವಾರ್ತೆ ಪಾಂಡವಪುರ
ನಗರ ಪ್ರದೇಶದಲ್ಲಿ ಕಣ್ಮರೆಯಾಗುತ್ತಿರುವ ಕನ್ನಡಭಾಷೆ, ನೆಲೆ-ಜಲವನ್ನು ಉಳಿಸಿ ಬೆಳೆಸುವ ಕೆಲಸ ಮಾಡಬೇಕು ಎಂದು ಜಿಲ್ಲಾ ಮಲೇರಿಯಾ ನಿಯಂತ್ರಣಾಧಿಕಾರಿ ಡಾ.ಸಿ.ಎ.ಅರವಿಂದ್ ಹೇಳಿದರು.
ತಾಲೂಕಿನ ಹಾಗನಹಳ್ಳಿಯಲ್ಲಿರುವ ಅಮ್ಮನ ಆಸರೆ ಚಾರಿಟಬಲ್ ಸೇವಾ ಟ್ರಸ್ಟ್ ಉಚಿತ ವೃದ್ಧಾಶ್ರಮದಲ್ಲಿ ನಡೆದ 3ನೇ ವರ್ಷದ ವಾರ್ಷಿಕೋತ್ಸವ ಮತ್ತು ಕನ್ನಡ ರಾಜ್ಯೋತ್ಸವದಲ್ಲಿ ಧ್ವಜಾರೋಹಣ ನೇರವೇರಿಸಿ ಮಾತನಾಡಿದರು.
ನಾಡಿನ ಗಡಿ ಭಾಗಗಳಲ್ಲಿ, ಬೆಂಗಳೂರಿನಂತಹ ದೊಡ್ಡದೊಡ್ಡ ನಗರಗಳಲ್ಲಿ ಕನ್ನಡ ಭಾಷೆಗೆ ಸಾಕಷ್ಟು ಪೆಟ್ಟುಬೀಳುತ್ತಿವೆ. ಅನ್ಯಭಾಷಿಗರ ಹಾವಳಿ ಹೆಚ್ಚಾಗಿದೆ. ಅನ್ಯಭಾಷಿಕರು ಕನ್ನಡ ಭಾಷೆ ಮಾತನಾಡುವ ಹಾಗೆ ನಾವೆಲ್ಲರು ಮಾಡಬೇಕಿದೆ ಎಂದರು.
ವ್ಯವಹಾರಿಕವಾಗಿ ಬೇರೆಭಾಷೆ ಬಳಕೆ ಮಾಡಲಿ. ಆದರೆ, ಇಲ್ಲಿ ವಾಸಿಸುವ ಪ್ರತಿಯೊಬ್ಬರು ನಮ್ಮ ಮಾತ್ರ ಭಾಷೆ ಕನ್ನಡ ಮಾತನಾಡುವುದನ್ನು ಕಲಿತುಕೊಳ್ಳಬೇಕು. ಆ ನಿಟ್ಟಿನಲ್ಲಿ ನಾವೆಲ್ಲರು ಜಾಗೃತಿ ಮೂಡಿಸಬೇಕು ಎಂದರು.
ಕನ್ನಡ ಪರ ಸಂಘಟಗಳು ಹೆಚ್ಚಾಗಿ ಕನ್ನಡ ಭಾಷೆ, ನೆಲೆ-ಜಲ ರಕ್ಷಣೆಗಾಗಿ ಸಾಕಷ್ಟು ಹೋರಾಟ ನಡೆಸುತ್ತಿವೆ. ನಾಡಿನಲ್ಲಿ ಎಲ್ಲೇ ಕನ್ನಡಕ್ಕೆ ಅವಮಾನ, ಅನ್ಯಾಯವಾದಾಗ ಮೊದಲು ಧ್ವನಿ ಎತ್ತುವವರೆ ಕನ್ನಡಪರ ಸಂಘಟೆಗಳು. ಹಾಗಾಗಿ ಕನ್ನಡ ನಾಡಿನಲ್ಲಿ ಇರುವ ಎಲ್ಲಾ ಕನ್ನಡಪರ ಸಂಘಟನೆಗಳಿಗೆ ಧನ್ಯವಾದ ಅರ್ಪಿಸುತ್ತೇನೆ ಎಂದರು.
ಉದ್ಯೋಗದಾತ ಫೌಂಡೇಷನ್ ಜಿಲ್ಲಾಧ್ಯಕ್ಷ ರುಕ್ಮಾಂಗದಗೌಡ ಮಾತನಾಡಿ, ಅಮ್ಮನ ಆಸರೆ ಟ್ರಸ್ಟ್‌ನ ಪ್ರಭುಸ್ವಾಮಿ ಅವರು ಸಮಾಜದಲ್ಲಿ ನಿರ್ಲಕ್ಷ್ಯಕ್ಕೆ ಒಳಗಾದ ವೃದ್ಧರನ್ನು ಕರೆತಂದು ಆಶ್ರಯ ನೀಡುವ ಮೂಲಕ ದಾರಿದೀಪವಾಗಿದ್ದಾರೆ ಎಂದರು.
ಜೊತೆ ವಿವಿಧ ಕ್ಷೇತ್ರದ ಸಾಧಕರನ್ನು ಗುರುತಿಸಿ ಅಭಿನಂಧಿಸುತ್ತಿರುವುದು ಶ್ಲಾಘನೀಯ ಎಂದು ಬಣ್ಣಿಸಿದರು.
ಇದೇ ವೇಳೆ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಎಸ್.ರವಿಶಂಕರ್, ಕೋ.ಪು.ಗುಣಶೇಖರ್, ಲಕ್ಷ್ಮಮ್ಮ, ನಂಜುಂಡೇಸ್ವಾಮಿ, ರಜಿನಿಕಾಂತ್, ಶಂಕರಯ್ಯ, ನಾಗಣ್ಣ, ಚಂದ್ರು, ಕುಮಾರ್, ಯೋಗೇಶ್ ಅವರನ್ನು ಅಭಿನಂಧಿಸಲಾಯಿತು.
ಕಾರ್ಯಕ್ರಮದಲ್ಲಿ ರೈತಸಂಘದ ಜಿಲ್ಲಾಧ್ಯಕ್ಷ ಎ.ಎಲ್.ಕೆಂಪೂಗೌಡ, ತಾಲೂಕು ಅಧ್ಯಕ್ಷ ಮಂಜುನಾಥ್, ಪಿಡಿಒ ಕುಮಾರ್, ಅಮ್ಮನ ಆಸರೆ ಟ್ರಸ್ಟ್‌ನ ಸಂಸ್ಥಾಪಕರಾದ ಪ್ರಭುಸ್ವಾಮಿ, ಕಾರ್ಯದರ್ಶಿ ಪುಷ್ಪಉಮೇಶ್, ಕುಮಾರಿ ಪ್ರಭುಸ್ವಾಮಿ, ಡಾ.ಸಿಂಚನಾ, ರೂಪಾನಿತಿನ್, ಚಲುವರಾಜು, ಅಮಿತ್‌ಕೃಷ್ಣ, ಲೋಕೇಶ್, ಜಗದೀಶ್, ಮೈಕ್ ಮಹದೇವು ಸೇರಿದಂತೆ ಹಲವರು ಹಾಜರಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.