ಕನ್ನಡಪ್ರಭ ವಾರ್ತೆ ಯಮಕನಮರಡಿ ದಿ.ಉಮೇಶ ಕತ್ತಿಯವರು ಈ ಭಾಗದಲ್ಲಿ ಶಾಸಕರಾಗಿ ಅಭಿವೃದ್ಧಿ ಕಾರ್ಯ ಕೈಗೊಳ್ಳುವ ಮೂಲಕ ದ್ವೇಷ ರಾಜಕಾರಣ ಮಾಡದೆ ವಿಕಾಸ ರಾಜಕಾರಣ ಮಾಡಿದ್ದಾರೆ ಎಂದು ಮಾಜಿ ಸಂಸದ ರಮೇಶ ಕತ್ತಿ ಹೇಳಿದರು.
ಕನ್ನಡಪ್ರಭ ವಾರ್ತೆ ಯಮಕನಮರಡಿ
ದಿ.ಉಮೇಶ ಕತ್ತಿಯವರು ಈ ಭಾಗದಲ್ಲಿ ಶಾಸಕರಾಗಿ ಅಭಿವೃದ್ಧಿ ಕಾರ್ಯ ಕೈಗೊಳ್ಳುವ ಮೂಲಕ ದ್ವೇಷ ರಾಜಕಾರಣ ಮಾಡದೆ ವಿಕಾಸ ರಾಜಕಾರಣ ಮಾಡಿದ್ದಾರೆ ಎಂದು ಮಾಜಿ ಸಂಸದ ರಮೇಶ ಕತ್ತಿ ಹೇಳಿದರು.ಯಮಕನಮರಡಿ ಕ್ಷೇತ್ರ ವ್ಯಾಪ್ತಿಯ ಬಗರನಾಳ ಗ್ರಾಮದಲ್ಲಿ ₹ 26.60 ಲಕ್ಷ ವೆಚ್ಚದಲ್ಲಿ ಬೀದಿ ದೀಪ ವಿಸ್ತರಣೆ ತೋಟದ ಮನೆಗಳಿಗೆ ನಿರಂತರ ಜ್ಯೋತಿ ವಿದ್ಯುತ್ ಪೂರೈಕೆಗೆ ಚಾಲನೆ ನೀಡಿ ಮಾತನಾಡಿದರು. 2008ರ ನಂತರ ಕ್ಷೇತ್ರ ವಿಂಗಡಣೆಯಾಗಿ ಯಮಕನಮರಡಿ ಎಸ್ಟಿ ಮೀಸಲು ಕ್ಷೇತ್ರವಾದ ನಂತರ ಅಭಿವೃದ್ಧಿ ನೆಪದಲ್ಲಿ ಪಿಎ ಗಿರಿಗಳ ರಾಜಕೀಯ ನಡೆಯುತ್ತಿರುವದು ಖೇದಕರ ಸಂಗತಿ. 2028ರ ವಿಧಾನಸಭೆ ಚುನಾವಣೆಯಲ್ಲಿ ಜನಮೆಚ್ಚುಗೆಗೆ ಮನೆಯ ಮಗನಾದ ಶಾಸಕನ್ನು ಆಯ್ಕೆ ಮಾಡುವುದು ಅವಶ್ಯವಾಗಿದೆ. ಈ ಕಾರ್ಯದಲ್ಲಿ ಎಲ್ಲರು ಸಹಕಾರ ನೀಡಬೇಕು. ರುಸ್ತುಂಪೂರ ಗ್ರಾಪಂಯಿಂದ ಹುಕ್ಕೇರಿ ಗ್ರಾಮೀಣ ವಿದ್ಯುತ್ ಸಂಘಕ್ಕೆ ₹26.50 ಲಕ್ಷ ಸಂದಾಯ ಮಾಡಿದ್ದು, ರುಸ್ತುಂಪೂರ, ಬಗರನಾಳ, ಬನ್ನಿಬಾಗಿ ಗ್ರಾಮಗಳಲ್ಲಿ ಬೀದಿ ದೀಪ ವಿಸ್ತರಣೆ ತೋಟದ ಮನೆಗಳಿಗೆ ನಿರಂತರ ಜ್ಯೋತಿ ವಿದ್ಯುತ್ ಸರಬರಾಜು ಆಗುವುದು. ಹುಕ್ಕೇರಿ ತಾಲೂಕಿನ ಗ್ರಾಮ ಪಂಚಾಯತಿಯವರು ಕೂಡ ಇಂತಹ ಯೋಜನೆ ಸದುಪಯೋಗ ಪಡೆದುಕೊಳ್ಳಬೇಕೆಂದು ಕತ್ತಿ ಹೇಳಿದರು.ಹುಕ್ಕೇರಿ ಗ್ರಾಮೀಣ ವಿದ್ಯುತ್ ಸಂಘದ ಅಧ್ಯಕ್ಷ ಮಹಾವೀರ ನಿಲಜಗಿ, ನಿರ್ದೇಶಕ ಕಲಗೌಡ ಪಾಟೀಲ, ರಾಜ್ಯ ಬಿಜೆಪಿ ಎಸ್ಟಿ ಮೋರ್ಚಾ ಪ್ರಧಾನ ಕಾರ್ಯದರ್ಶಿ ಬಸವರಾಜ ಹುಂದ್ರಿ, ಚಂದ್ರಶೇಖರ ಹುಡೇದ, ಬಿಜೆಪಿ ಉತ್ತರ ಮಂಡಲದ ಅಧ್ಯಕ್ಷ ಶ್ರೀಶೈಲ ಯಮಕನಮರಡಿ, ಕೆಂಪಣ್ಣ ಹುಡೇದ, ಬಾಳಗೌಡ ಹುಡೇದ, ಕೆಂಪಣ್ಣ ಸನದಿ, ಲಕ್ಕಪ್ಪ ಮನಿಕೇರಿ, ಲಗಮಪ್ಪ ಭರಮಣ್ಣಗೋಳ, ಮಲ್ಲಪ್ಪ ಹೊಳೆನ್ನವರ, ಸತ್ಯಪ್ಪ ತಮ್ಮನವರ, ಗಂಗಪ್ಪ ಪಾಟೀಲ, ಲಗಮಪ್ಪ ಸನಮನಿ, ರುದ್ರಪ್ಪ ಸನಮನಿ, ಭೀಮಪ್ಪ ಕೆಂಪನ್ನವರ, ನಿಂಗಪ್ಪಾ ಹುಡೇದ, ಭೀಮಪ್ಪ ಗಡಕರಿ, ರಮೇಶ ಹೊಳೆನ್ನವರ, ಶಾಖಾಧಿಕಾರಿ ವಿನೋದ ಚಂದಪ್ಪಗೋಳ, ರಸೂಲ ದೇಸಾಯಿ, ರುಸ್ತುಂಪೂರ ಗ್ರಾಪಂ ಪಿಡಿಒ ಅಸ್ಕರಅಲಿ ಜಮಖಂಡಿ ಇನ್ನಿತರರು ಇದ್ದರು
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.