ಮುಂದಿನ ಪೀಳಿಗೆಗಾಗಿ ಪರಿಸರವನ್ನು ಸಂರಕ್ಷಿಸಬೇಕಿದೆ

KannadaprabhaNewsNetwork |  
Published : Jul 22, 2025, 01:15 AM IST
21ಎಚ್ಎಸ್ಎನ್8 :  | Kannada Prabha

ಸಾರಾಂಶ

ಮುಂದಿನ ಪೀಳಿಗೆ ಆರೋಗ್ಯವಾಗಿರಲು ಪರಿಸರ ಅತ್ಯವಶ್ಯಕವಾಗಿದ್ದು, ಪರಿಸರವನ್ನು ರಕ್ಷಣೆ ಮಾಡುವುದರ ಜೊತೆಗೆ ಪ್ರತಿಯೊಬ್ಬರು ಪರಿಸರವನ್ನು ಉಳಿಸಿ ಬೆಳೆಸಬೇಕಾಗಿದೆ ಎಂದು ರೋಟರಿ ಜಿಲ್ಲಾ ಗವರ್ನರ್ ಕೆ. ಪಾಲಾಕ್ಷ ಹೇಳಿದರು. ಟೈಮ್ಸ್ ಗಂಗಾಧರ್ ಅವರು ಪ್ರತಿ ವರ್ಷ ೧೦ ಸಾವಿರ ಸಸಿಗಳನ್ನು ತಮ್ಮ ಶಾಲಾ ವಿದ್ಯಾರ್ಥಿಗಳಿಗೆ ಉಚಿತವಾಗಿ ನೀಡುತ್ತಿದ್ದಾರೆ, ಮಕ್ಕಳು ಹಾಗೂ ಪೋಷಕರು ಅವರ ಕಾಳಜಿಯನ್ನು ಅರ್ಥ ಮಾಡಿಕೊಂಡು ಸಸಿ ಪಡೆದು ಅವುಗಳನ್ನು ಸಂರಕ್ಷಿಸಿ ಮಕ್ಕಳನ್ನು ಹೇಗೆ ಜೋಪಾನವಾಗಿ ಬೆಳೆಸುತ್ತಾರೋ ಹಾಗೆ ಸಸಿಗಳನ್ನು ಬೆಳೆಸಬೇಕಾಗಿದೆ ಎಂದು ಹೇಳಿದರು.

ಕನ್ನಡಪ್ರಭ ವಾರ್ತೆ ಹಾಸನ

ಮುಂದಿನ ಪೀಳಿಗೆ ಆರೋಗ್ಯವಾಗಿರಲು ಪರಿಸರ ಅತ್ಯವಶ್ಯಕವಾಗಿದ್ದು, ಪರಿಸರವನ್ನು ರಕ್ಷಣೆ ಮಾಡುವುದರ ಜೊತೆಗೆ ಪ್ರತಿಯೊಬ್ಬರು ಪರಿಸರವನ್ನು ಉಳಿಸಿ ಬೆಳೆಸಬೇಕಾಗಿದೆ ಎಂದು ರೋಟರಿ ಜಿಲ್ಲಾ ಗವರ್ನರ್ ಕೆ. ಪಾಲಾಕ್ಷ ಹೇಳಿದರು.ನಗರದ ವಿಜಯನಗರದಲ್ಲಿರುವ ಟೈಮ್ಸ್ ಅಂತಾರಾಷ್ಟ್ರೀಯ ಶಾಲೆಯಲ್ಲಿ ರೋಟರಿ ಕ್ಲಬ್ ಆಫ್ ಹಾಸನ ರಾಯಲ್, ಬಟ್ಟೆ ಅಂಗಡಿ, ಅಕ್ಷರ ಅಕಾಡೆಮಿ, ಅಕ್ಷರ ಬುಕ್ ಹೌಸ್ ವತಿಯಿಂದ ಹಮ್ಮಿಕೊಂಡಿದ್ದ ೨೦೨೫-೨೬ನೇ ಸಾಲಿನ ಹತ್ತು ಸಾವಿರ ಸಸಿ ವಿತರಣೆ ಮಾಡುವ ಟೈಮ್ಸ್ ಹಸಿರ ಸಿರಿ ಸಸ್ಯೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಭೂ ಮಂಡಲದೊಳಗೆ ಜೀವಿಸುವ ಪ್ರತಿಯೊಂದು ಜೀವಿಗೂ ಪರಿಸರದ ಅವಶ್ಯಕತೆ ಇದ್ದು, ಪರಿಸರವನ್ನು ಅತ್ಯಂತ ಕಾಳಜಿಯಿಂದ ನೋಡಿಕೊಳ್ಳಬೇಕಿದೆ. ವಿವಿಧ ಉದ್ದೇಶಕ್ಕಾಗಿ ನಾವು ಇಂದು ಪರಿಸರದ ವ್ಯಾಪ್ತಿಯನ್ನು ಕಡಿಮೆ ಮಾಡುತ್ತಿದ್ದೇವೆ, ಆದರೆ ಪರಿಸರ ಒಮ್ಮೆ ಮುನಿಸಿಕೊಂಡರೆ ನಾವುಗಳು ಇಲ್ಲವಾಗುತ್ತೇವೆ. ಹಾಗಾಗಿ ನಮ್ಮ ಉತ್ತಮ ಆರೋಗ್ಯಕ್ಕಾಗಿ ಹಾಗೂ ನಮ್ಮ ಮುಂದಿನ ಪೀಳಿಗೆಗಾಗಿ ಪರಿಸರವನ್ನು ಸಂರಕ್ಷಿಸಿ ಉಳಿಸಬೇಕಾಗಿದೆ. ಪ್ರತಿಯೊಂದು ಮಗುವು ತಮ್ಮ ಹಿರಿಯರ ಹೆಸರಿನಲ್ಲಿ ಒಂದೊಂದು ಸಸಿಗಳನ್ನು ನೆಟ್ಟು ಮರವಾಗುವಂತೆ ನೋಡಿಕೊಳ್ಳಬೇಕು. ಗಿಡಗಳನ್ನು ಕಡಿಯುವ ಮನುಷ್ಯರು ಅವುಗಳನ್ನು ಪುನಃ ಬೆಳೆಸುವ ಕಾರ್ಯವನ್ನು ಮಾತ್ರ ಮಾಡುತ್ತಿಲ್ಲ. ಹಾಗಾಗಿ ಚಿಕ್ಕ ಮಕ್ಕಳಿಗೆ ಆರಂಭದಿಂದಲೇ ಪರಿಸರದ ಬಗ್ಗೆ, ಗಿಡ ಮರಗಳನ್ನು ಬೆಳೆಸುವುದರ ಬಗೆಗೆ ಅರಿವು ಮೂಡಿಸುವ ಕಾರ್ಯ ಮಾಡಿದರೆ ಮುಂದಿನ ದಿನಗಳಲ್ಲಿ ಪರಿಸರವನ್ನು ಉಳಿಸುವ ಕೆಲಸ ಮಾಡಬಹುದು. ಟೈಮ್ಸ್ ಗಂಗಾಧರ್ ಅವರು ಪ್ರತಿ ವರ್ಷ ೧೦ ಸಾವಿರ ಸಸಿಗಳನ್ನು ತಮ್ಮ ಶಾಲಾ ವಿದ್ಯಾರ್ಥಿಗಳಿಗೆ ಉಚಿತವಾಗಿ ನೀಡುತ್ತಿದ್ದಾರೆ, ಮಕ್ಕಳು ಹಾಗೂ ಪೋಷಕರು ಅವರ ಕಾಳಜಿಯನ್ನು ಅರ್ಥ ಮಾಡಿಕೊಂಡು ಸಸಿ ಪಡೆದು ಅವುಗಳನ್ನು ಸಂರಕ್ಷಿಸಿ ಮಕ್ಕಳನ್ನು ಹೇಗೆ ಜೋಪಾನವಾಗಿ ಬೆಳೆಸುತ್ತಾರೋ ಹಾಗೆ ಸಸಿಗಳನ್ನು ಬೆಳೆಸಬೇಕಾಗಿದೆ ಎಂದು ಹೇಳಿದರು. ಟೈಮ್ಸ್ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಟೈಮ್ಸ್ ಗಂಗಾಧರ್ ಬಿ.ಕೆ. ಮಾತನಾಡಿ, ಸಸಿ ನೆಡುವುದು ಹಾಗೂ ಪೋಷಿಸುವುದು ಕೇವಲ ಸರ್ಕಾರ ಹಾಗೂ ಅರಣ್ಯ ಇಲಾಖೆಯ ಕೆಲಸ ಎಂದು ಭಾವಿಸದೆ ಜನಸಾಮಾನ್ಯರು ಪರಿಸರವನ್ನು ಉಳಿಸಿ ಬೆಳೆಸುವ ಕೆಲಸದಲ್ಲಿ ತೊಡಗಬೇಕು. ನಾವು ಮಕ್ಕಳಿಗೆ ಚಿಕ್ಕ ವಯಸ್ಸಿನಿಂದಲೇ ಸಸಿ ಬೆಳೆಸುವುದರ ಜೊತೆಗೆ ಪರಿಸರದ ಪ್ರಾಮುಖ್ಯತೆಯ ಬಗ್ಗೆ ತಿಳಿಸಿಕೊಡಬೇಕಾಗಿದೆ. ಪೋಷಕರು ತಮ್ಮ ಮಕ್ಕಳಿಗೆ ಆಸ್ತಿ ಮಾಡಿಡುವುದರ ಜೊತೆ ಜೊತೆಗೆ ಭೂಮಿ ತಾಯಿ ಪೋಷಣೆಗಾಗಿ ಒಂದೆರೆಡು ಸಸಿಗಳನ್ನು ಹಾಕುವ ಮೂಲಕ ಮಕ್ಕಳಿಗೆ ಒಂದೊಳ್ಳೆಯ ಪರಿಸರವನ್ನು ನೀಡಬೇಕು. ಪ್ರತಿ ವರ್ಷದಂತೆ ಈ ವರ್ಷವೂ ೧೦,೦೦೦ ಸಸಿಗಳನ್ನು ಮಕ್ಕಳಿಗೆ ವಿತರಣೆ ಮಾಡುವ ಕೆಲಸವನ್ನು ಮಾಡಲಾಗುತ್ತಿದೆ. ಈ ವರ್ಷದಿಂದ ನಾವು ನೀಡಿದ ಸಸಿಗಳನ್ನು ಎಷ್ಟರ ಮಟ್ಟಿಗೆ ಪೋಷಣೆ ಮಾಡಲಾಗುತ್ತಿದೆ ಎಂದು ಶಾಲಾ ಹಂತದಲ್ಲಿ ಶಿಕ್ಷಕರು ಅದನ್ನು ಪರಿಶೀಲಿಸಿ ಮಕ್ಕಳನ್ನು ಗುರುತಿಸಿ ಅಭಿನಂದಿಸುವ ಕೆಲಸ ಮಾಡಲಾಗುವುದು ಎಂದರು. ಕಾರ್ಯಕ್ರಮದ ನಂತರ ಶಾಲೆಯ ವಿದ್ಯಾರ್ಥಿಗಳಿಗೆ ಹಾಗೂ ಪೋಷಕರಿಗೆ ಸಸಿಗಳನ್ನು ವಿತರಣೆ ಮಾಡಲಾಯಿತು.

ರೋಟರಿ ಜೋನ್ ೯ರ ಸಹಾಯಕ ಗೌವರ್ನರ್ ಮಂಜುನಾಥ್, ರೋಟರಿ ಜೋನ್ ೯ರ ವಲಯ ಸೇನಾನಿ ಮಮತಾ ಪಾಟೀಲ್, ರೋಟರಿ ಕ್ಲಬ್ ಆಫ್ ಹಾಸನ ರಾಯಲ್‌ನ ಕಾರ್ಯದರ್ಶಿ ರವಿ ಕುಮಾರ್ ಪಿ., ಖಜಾಂಚಿ ದಿಲೀಪ್ ಕುಮಾರ್ ಎಚ್.ಕೆ., ಮಾಜಿ ಅಧ್ಯಕ್ಷ ಸಚ್ಚಿನ್, ಮಾಜಿ ಕಾರ್ಯದರ್ಶಿ ಪುನೀತ್, ಸದಸ್ಯರಾದ ಯೋಗೇಶ್ ಎಸ್., ಡಾ. ವಿಕ್ರಂ ಬಿ., ಡಾ. ಎಂ.ಡಿ. ನಿತ್ಯಾನಂದ, ಪ್ರಸಾದ್, ಗಿರೀಶ್, ಅನೀಲ್ ರೈ, ನವೀನ್, ಚಂದನ್, ಶ್ರೀನಂದ, ಮಹೇಶ್, ಕಿರಣ್ ರಾಗ್, ಸುಧಾಕರ್, ಟೈಮ್ಸ್ ಶಾಲೆಯ ಮುಖ್ಯ ಶಿಕ್ಷಕಿ ಬ್ಲೆಸ್ಸಿ ಶ್ಯಾಮ್, ಅರ್ಜುನ್, ಸುಮನ್ ಹಾಗೂ ಇತರರು ಹಾಜರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಿಪಿಎಲ್‌ ಮಾನದಂಡ ಬದಲಿಗೆ ಮುಂದಾದ ರಾಜ್ಯ
ಸರ್ಕಾರಿ ಶಾಲೆಗೆ ಶೀಘ್ರ 11000 ಶಿಕ್ಷಕರ ನೇಮಕ : ಮಧು