ಹೆಲ್ಮೆಟ್‌ ಧರಿಸಿ ಜೀವ ಉಳಿಸಿ ಜಾಗೃತಿ ಅಭಿಯಾನ

KannadaprabhaNewsNetwork |  
Published : Jul 27, 2024, 12:46 AM ISTUpdated : Jul 27, 2024, 12:47 AM IST
ಚಿತ್ರ 26ಬಿಡಿಆರ್3ಕಮಲಗರ ಪಟ್ಟಣದ ಅಲ್ಲಂಪ್ರಭು ವೃತ್ತದಲ್ಲಿ ಹೆಲ್ಮೆಟ್‌ ಧರಿಸಿ ಜೀವ ಉಳಿಸಿ ಅಭಿಯಾನದಲ್ಲಿ ಸಿಪಿಐ ಅಮರೆಪ್ಪ ಶಿವಬಲ ಮಾತನಾಡಿದರು. | Kannada Prabha

ಸಾರಾಂಶ

ಹೆಲ್ಮೆಟ್‌ ಧರಿಸದ ಕಾರಣ ಅನೇಕರ ಜೀವಕ್ಕೆ ಹಾನಿಯಾಗುತ್ತಿದೆ. ಹೆಲ್ಮೆಟ್‌ ಧರಿಸಿದ ಸಂದರ್ಭದಲ್ಲಿ ಅಪಘಾತ ಸಂಭವಿಸಿ ತಲೆಗೆ ಗಂಭೀರ ಗಾಯಗಳಾಗಿ ಆಸ್ಪತ್ರೆಯಲ್ಲಿ ನರಳಾಡುತ್ತಿದ್ದಾರೆ

ಕಮಲನಗರ:

ಇಲ್ಲಿನ ಪೊಲೀಸ್‌ ಠಾಣೆಯಿಂದ ‘ಹೆಲ್ಮೆಟ್‌ ಧರಿಸಿ ಜೀವ ಉಳಿಸಿ’ ಮತ್ತು ರಸ್ತೆ ಸಂಚಾರ ಕಾನೂನುಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ಜಾಗೃತಿ ಮೂಡಿಸುವ ಅಭಿಯಾನ ಶುಕ್ರವಾರ ಪಟ್ಟಣದಲ್ಲಿ ನಡೆಯಿತು.

ಸಿಪಿಐ ಅಮರೆಪ್ಪ ಶಿವಬಲ ನೇತೃತ್ವದಲ್ಲಿ ಅಭಿಯಾನ ನಡೆದು ಹೆಲ್ಮೆಟ್‌ ಧರಿಸದೆ ಸಂಚರಿಸುತ್ತಿರುವ ವಾಹನ ಸವಾರರನ್ನು ತಡೆದು ಹೆಲ್ಮೆಟ್‌ ಧರಿಸುವುದರಿಂದ ಆಗುವ ಲಾಭ ಹಾಗೂ ಜೀವ ಹಾನಿ ಕುರಿತು ತಿಳಿಸಿಕೊಡಲಾಯಿತು. ಅಲ್ಲದೇ ಕಡ್ಡಾಯವಾಗಿ ಹೆಲ್ಮೆಟ್‌ಧರಿಸುವುದು ಅನಿವಾರ್ಯ ಇಲ್ಲವಾದರೆ ದಂಡ ಪಾವತಿಸುವುದು ಕೂಡ ಅನಿವಾರ್ಯ ಎಂಬುದು ತಿಳಿದುಕೊಳ್ಳಬೇಕು. ಯಾವುದೇ ಕುಂಟು ನೆಪ ಹೇಳುವ ಅವಶ್ಯಕತೆ ಇಲ್ಲ ಎಂಬುವದನ್ನು ಮನವರಿಕೆ ಮಾಡಿಸಲಾಯಿತು. ಠಾಣೆ ಪಿಎಸ್‌ಐ ಚಂದ್ರಶೇಖರ ನಿರ್ಣೆ ಮಾತನಾಡಿ, ಹೆಲ್ಮೆಟ್‌ ಧರಿಸದ ಕಾರಣ ಅನೇಕರ ಜೀವಕ್ಕೆ ಹಾನಿಯಾಗುತ್ತಿದೆ. ಹೆಲ್ಮೆಟ್‌ ಧರಿಸಿದ ಸಂದರ್ಭದಲ್ಲಿ ಅಪಘಾತ ಸಂಭವಿಸಿ ತಲೆಗೆ ಗಂಭೀರ ಗಾಯಗಳಾಗಿ ಆಸ್ಪತ್ರೆಯಲ್ಲಿ ನರಳಾಡುತ್ತಿದ್ದಾರೆ. ಪೊಲೀಸರು ಸಾರ್ವಜನಿಕರ ಆರೋಗ್ಯ ಹಿತದೃಷ್ಟಿಯಿಂದ ಇಂತಹ ಅಭಿಯಾನ ಮಾಡಲಾಗುತ್ತಿದೆ ಎಂದು ತಿಳಿಸಿದರು.

ಈ ವೇಳೆ ಎಎಸ್‌ಐ ವೀರಶೆಟ್ಟಿ, ವಸಂತ್‌ ಮೇತ್ರೆ, ನಾನೊಬಾ ಕಾಂಬಳೆ, ರವಿ ಬಿರಾದಾರ್‌, ಜಾಕೀರ್‌ ಪಠಾಣ, ಮಾರುತಿ, ಆನಂದ ಸಂತೋಷ, ಗೋಪಾಲ್‌, ಬಾಬುರಾವ್‌ ಇನ್ನೂ ಹಲವು ಜನ ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಿಪಿಎಲ್‌ ಮಾನದಂಡ ಬದಲಿಗೆ ಮುಂದಾದ ರಾಜ್ಯ
ಸರ್ಕಾರಿ ಶಾಲೆಗೆ ಶೀಘ್ರ 11000 ಶಿಕ್ಷಕರ ನೇಮಕ : ಮಧು