ನೇಕಾರ ಸಂಘದ ಪತ್ರದ ದುರುಪಯೋಗ ಆಗಿಲ್ಲ: ಮಹಾದೇವ ನುಚ್ಚಿ

KannadaprabhaNewsNetwork |  
Published : Oct 08, 2025, 01:01 AM IST
/ ಬನಹಟ್ಟಿಯಲ್ಲಿ ರಾಷ್ಟ್ರೀಯ ನೇಕಾರ ಸೇವಾ ಸಂಘದ ಮುಖಂಡರಾದ ಮಹಾದೇವ ನುಚ್ಚಿ ಮಾತನಾಡಿದರು. | Kannada Prabha

ಸಾರಾಂಶ

ರಾಷ್ಟ್ರೀಯ ನೇಕಾರ ಸೇವಾ ಸಂಘದಲ್ಲಿ ಗುರ್ತಿಸಿಕೊಂಡು ಪ್ರಾಮಾಣಿಕ ಹಾಗೂ ಪಾರದರ್ಶಕ ಸೇವೆಯೊಂದಿಗೆ ಕಟ್ಟಕಡೆಯ ನೇಕಾರನ ಬೇಡಿಕೆಯ ಹೋರಾಟ ನಮ್ಮದಾಗಿದೆ. ವಿನಾಕಾರಣ ಸಂಘದ ಪತ್ರ ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆಂದು ಶಿವಲಿಂಗ ಟಿರಕಿ ಹೇಳುತ್ತಿರುವುದು ಸಮಂಜಸವಲ್ಲವೆಂದು ನೇಕಾರ ಮುಖಂಡ ಮಹಾದೇವ ನುಚ್ಚಿ ತಿಳಿಸಿದರು.

ಕನ್ನಡಪ್ರಭ ವಾರ್ತೆ ರಬಕವಿ-ಬನಹಟ್ಟಿ

ರಾಷ್ಟ್ರೀಯ ನೇಕಾರ ಸೇವಾ ಸಂಘದಲ್ಲಿ ಗುರ್ತಿಸಿಕೊಂಡು ಪ್ರಾಮಾಣಿಕ ಹಾಗೂ ಪಾರದರ್ಶಕ ಸೇವೆಯೊಂದಿಗೆ ಕಟ್ಟಕಡೆಯ ನೇಕಾರನ ಬೇಡಿಕೆಯ ಹೋರಾಟ ನಮ್ಮದಾಗಿದೆ. ವಿನಾಕಾರಣ ಸಂಘದ ಪತ್ರ ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆಂದು ಶಿವಲಿಂಗ ಟಿರಕಿ ಹೇಳುತ್ತಿರುವುದು ಸಮಂಜಸವಲ್ಲವೆಂದು ನೇಕಾರ ಮುಖಂಡ ಮಹಾದೇವ ನುಚ್ಚಿ ತಿಳಿಸಿದರು.

ಬನಹಟ್ಟಿಯಲ್ಲಿ ನೇಕಾರ ಮುಖಂಡರ ನೇತೃತ್ವದ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಕರ್ನಾಟಕ ನೇಕಾರ ಸೇವಾ ಸಂಘದ ರಾಜ್ಯಾಧ್ಯಕ್ಷರೆಂದು ನಕಲಿ ಹುದ್ದೆ ಸೃಷ್ಟಿಸಿ ಇದೀಗ ರಾಷ್ಟ್ರೀಯ ನೇಕಾರ ಸೇವಾ ಸಂಘದ ಮೇಲೆ ಗೂಬೆ ಕೂಡ್ರಿಸುವ ಹುನ್ನಾರ ನಡೆಯದು. ಈ ಮೊದಲು ರಾಜ್ಯದ ಎಲ್ಲ ನೇಕಾರ ವರ್ಗದ ಸುಮಾರು ₹೨೦ ಕೋಟಿ ವಿದ್ಯುತ್ ಬಾಕಿ ಹಣವನ್ನು ಸರ್ಕಾರವೇ ಭರಿಸಬೇಕೆಂಬ ಹೋರಾಟದಲ್ಲಿ ತಾರತಮ್ಯ ಎಸಗಿ ನೇಕಾರರೇ ತುಂಬಲಿ ಎಂದು ಟಿರಕಿಯವರು ದ್ವಂದ್ವ ನಿಲುವು ತೋರಿದರು. ಕೆಲ ಬೆಂಬಲಿಗರನ್ನು ಛೂ ಬಿಟ್ಟು, ಕಾರ್ಮಿಕರಲ್ಲದವರಿಗೂ ಕಾರ್ಮಿಕ ಕಾರ್ಡ್ ಒದಗಿಸಿ, ಅವರಿಗೆ ನೇಕಾರ ಸಮ್ಮಾನ ಯೋಜನೆ, ನೇಕಾರ ಕಾರ್ಡ್ ಹಾಗೂ ಕಾರ್ಮಿಕ ಕಾರ್ಡ್ ಗಳಿಗಾಗಿ ಪ್ರತಿಯೊಬ್ಬರಿಂದ ಹಣ ಪೀಕಿಸಿದ್ದು, ಇದರಲ್ಲಿ ಅಮಾಯಕ ಕಟ್ಟಕಡೆಯ ನೇಕಾರರೂ ಇದ್ದಾರೆಂದು ಆರೋಪಿಸಿದರು.

ಮತ್ತೋರ್ವ ನೇಕಾರ ಮುಖಂಡ ಆನಂದ ಜಗದಾಳ ಮಾತನಾಡಿ, ಅಸಂಘಟಿತ ವಲಯವಾಗಿರುವ ನೇಕಾರರನ್ನೇ ಬಂಡವಾಳವನ್ನಾಗಿಸಿಕೊಂಡು ದುಡ್ಡು ಪಡೆದು ಹಗಲು ದರೋಡೆ ನಡೆಸುತ್ತಿರುವ ಶಿವಲಿಂಗ ಟಿರಕಿ ವಿರುದ್ಧ ಮೊದಲು ಸಂಪೂರ್ಣ ತನಿಖೆಯಾಗಬೇಕೆಂದರು. ಸರ್ಕಾರದ ಸಾಕಷ್ಟು ಯೋಜನೆಗಳನ್ನು ತರುವ ನೆಪದಲ್ಲಿ ನೇಕಾರರಿಂದ ಹಣ ಪಡೆದು ವಂಚಿಸುತ್ತ ಇದೀಗ ಅನಧಿಕೃತ ಸಹಿ ಮಾಡಿ ಪತ್ರ ದುರ್ಬಳಕೆಯಾಗಿದೆ ಎನ್ನುತ್ತಿರುವುದು ಸರಿಯಲ್ಲವೆಂದರು. ಶ್ರೀಧರ ದಭಾಡಿ, ಶಿವಾನಂದ ತೆಗ್ಗಿ, ಲಕ್ಕಪ್ಪ ಗಸ್ತಿ, ಶಿವಾನಂದ ಗೋಡ್ಯಾಳ, ಸುರೇಶ ಮುಗತಿ, ಪ್ರಕಾಶ ಸಿದ್ಧಾಪೂರ ಇತರರು ಇದ್ದರು.

PREV

Recommended Stories

ರಾಜ್ಯದಲ್ಲಿ 18500 ಶಿಕ್ಷಕರ ನೇಮಕ : ಮಧು ಬಂಗಾರಪ್ಪ
ವಾಯವ್ಯ ಸಾರಿಗೆಗೆ ಶೀಘ್ರ 700 ಹೊಸ ಬಸ್‌ : ಕಾಗೆ