ಸುಬ್ರಹ್ಮಣ್ಯ: ಕುಕ್ಕೆ ಸುಬ್ರಹ್ಮಣ್ಯದಲ್ಲಿ ನಡೆಯುವ ಮದುವೆ ಕಾರ್ಯಕ್ರಮಕ್ಕೆ ಆಗಮಿಸುತ್ತಿದ್ದ ಮದುವೆಯ ವಾಹನ ಬಿಸ್ಲೆ ಘಾಟ್ ರಸ್ತೆಯ ತಿರುವಿನಲ್ಲಿ ಪಲ್ಟಿಯಾಗಿ ಓರ್ವ ಮೃತಪಟ್ಟು, ವಾಹನದಲ್ಲಿದ್ದ 20ಕ್ಕೂ ಅಧಿಕ ಮಂದಿ ಗಾಯಗೊಂಡ ಘಟನೆ ಗುರುವಾರ ಬೆಳಗ್ಗೆ ಸಂಭವಿಸಿದೆ.
ಘಟನೆ ನಡೆದ ಕೂಡಲೇ ಘಟನಾ ಸ್ಥಳದಿಂದ ಗಾಯಾಳುಗಳನ್ನು ಸುಬ್ರಹ್ಮಣ್ಯ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆತಂದು ಪ್ರಾಥಮಿಕ ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆಗಾಗಿ ಆರು ಅಂಬ್ಯೂಲೆನ್ಸ್‌ಗಳಲ್ಲಿ ಪುತ್ತೂರು ಹಾಗೂ ಮಂಗಳೂರಿಗೆ ಕರೆದೊಯ್ಯಲಾಯಿತು. ಸ್ಥಳೀಯರು ಕಾರ್ಯಾಚರಣೆಗೆ ಸಹಕಾರ ನೀಡಿದ್ದಾರೆ.ಮಂಜುಳಾ (49), ವಿಜಯಮ್ಮ (69), ದೇವರಾಜ್ (56), ಗೌರಮ್ಮ (65), ಪ್ರಶಾಂತ್ (42), ಸರಿತಾ (36), ದಿವ್ಯಾ (50), ಧರ್ಮ ಗೌಡ (61), ಪ್ರವೀಣ್ (45), ನೀಲಮ್ಮ (50), ಪಕೀರಪ್ಪ (63), ಯಶೋಧಾ(50), ಮದನ್ (40), ಗಂಗಮ್ಮ (60), ವೆಂಕಟೇಶ್ (50), ಶಿವರಾಮ(55), ನಿರ್ಮಲಾ (48), ಲಿಂಗಮ್ಮ (65), ಗೀತಾ (50) ಮೊದಲಾದವರು ಗಾಯಗೊಂಡವರು. ಇದರಲ್ಲಿ ಮೃತ ಶಿವರಾಜ್ (50) ಅವರನ್ನು ಸೇರಿದಂತೆ 13 ಮಂದಿಯನ್ನು ಪುತ್ತೂರು ಆಸ್ಪತ್ರೆಗೆ ಹಾಗೂ 7 ಮಂದಿಯನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ಒಟ್ಟು 11 ಆಂಬ್ಯುಲೆನ್ಸ್ ಮೂಲಕ ಕರೆದೊಯ್ಯಲಾಯಿತು. ಸಕಲೇಶಪುರ ತಾಲೂಕಿನ ಯಲಸೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ