ಚನ್ನರಾಯಪಟ್ಟಣದಲ್ಲಿ ಕನ್ನಡ ಜ್ಯೋತಿ ರಥಯಾತ್ರೆಗೆ ಸ್ವಾಗತ

KannadaprabhaNewsNetwork | Published : Nov 16, 2024 12:34 AM

ಸಾರಾಂಶ

ಹೊಳೆನರಸೀಪುರದಿಂದ ಆಗಮಿಸಿದ ೮೭ನೇ ಕನ್ನಡ ಸಾಹಿತ್ಯ ಸಮ್ಮೇಳನದ ಕನ್ನಡ ಜ್ಯೋತಿ ರಥಯಾತ್ರೆಯನ್ನು ತಹಸೀಲ್ದಾರ್‌ ನವೀನ್‌ ಕುಮಾರ್‌ ತಾಲೂಕಿನ ಗನ್ನಿಕಡ ಗ್ರಾಮದ ಬಳಿ ಸ್ವಾಗತಿಸಿದರು. ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಹಡೇನಹಳ್ಳಿ ಲೋಕೇಶ್ ಮಾತನಾಡಿ, ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಈ ಬಾರಿ ನಡೆಯಲಿರುವ ಸಾಹಿತ್ಯ ಸಮ್ಮೇಳನಕ್ಕೆ ರಥಯಾತ್ರೆ ನಮ್ಮ ತಾಲೂಕಿಗೆ ಬಂದಿರುವುದು ಸ್ವಾಗತಾರ್ಹ. ಕನ್ನಡದ ಭಾಷಾ ಪ್ರೇಮ ಇನ್ನಷ್ಟು ಪಸರಿಸಿ ಕನ್ನಡದ ಗಟ್ಟಿತನಕ್ಕೆ ಕನ್ನಡಿಗರಾದ ನಮ್ಮ ಕರ್ತವ್ಯವಾಗಿದೆ. ಮಂಡ್ಯದಲ್ಲಿ ಸಮ್ಮೇಳನದ ನಡೆಯುತ್ತಿರುವುದು ಸ್ವಾಗತಾರ್ಹ ಎಂದರು.

ಕನ್ನಡಪ್ರಭ ವಾರ್ತೆ ಚನ್ನರಾಯಪಟ್ಟಣ

ಹೊಳೆನರಸೀಪುರದಿಂದ ಆಗಮಿಸಿದ ೮೭ನೇ ಕನ್ನಡ ಸಾಹಿತ್ಯ ಸಮ್ಮೇಳನದ ಕನ್ನಡ ಜ್ಯೋತಿ ರಥಯಾತ್ರೆಯನ್ನು ತಹಸೀಲ್ದಾರ್‌ ನವೀನ್‌ ಕುಮಾರ್‌ ತಾಲೂಕಿನ ಗನ್ನಿಕಡ ಗ್ರಾಮದ ಬಳಿ ಸ್ವಾಗತಿಸಿದರು.

ನಂತರ ಮಾತನಾಡಿ, ಕನ್ನಡ ನಾಡು, ನುಡಿ, ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಸರ್ಕಾರ ಕನ್ನಡದ ಸಮ್ಮೇಳನವನ್ನು ಮಾಡುತ್ತಿದ್ದು, ಇದೇ ಡಿ.೨೦,೨೧,೨೨ ರಂದು ಮೂರು ದಿನಗಳ ಕಾಲ ಸಕ್ಕರೆ ನಾಡು ಮಂಡ್ಯದಲ್ಲಿ ೮೭ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯುತ್ತಿದೆ. ನಮ್ಮ ತಾಲೂಕಿನಿಂದ ಕನ್ನಡದ ಮನಸ್ಸುಗಳು, ಸಂಘಟನೆಗಳು ಹಾಗೂ ಮುಖಂಡರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಸಮ್ಮೇಳನವ್ನನು ಯಶಸ್ವಿಗೊಳಿಸಲು ಸಹಕರಿಬೇಕೆಂದರು.ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಹಡೇನಹಳ್ಳಿ ಲೋಕೇಶ್ ಮಾತನಾಡಿ, ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಈ ಬಾರಿ ನಡೆಯಲಿರುವ ಸಾಹಿತ್ಯ ಸಮ್ಮೇಳನಕ್ಕೆ ರಥಯಾತ್ರೆ ನಮ್ಮ ತಾಲೂಕಿಗೆ ಬಂದಿರುವುದು ಸ್ವಾಗತಾರ್ಹ. ಕನ್ನಡದ ಭಾಷಾ ಪ್ರೇಮ ಇನ್ನಷ್ಟು ಪಸರಿಸಿ ಕನ್ನಡದ ಗಟ್ಟಿತನಕ್ಕೆ ಕನ್ನಡಿಗರಾದ ನಮ್ಮ ಕರ್ತವ್ಯವಾಗಿದೆ. ಮಂಡ್ಯದಲ್ಲಿ ಸಮ್ಮೇಳನದ ನಡೆಯುತ್ತಿರುವುದು ಸ್ವಾಗತಾರ್ಹ. ನಾಲ್ವಡಿ ಕೃಷ್ಣರಾಜ ಒಡೆಯರ್‌ ಸ್ಥಾಪಿಸಿದ ಪರಿಷತ್ ಇಂದು ಹೆಮ್ಮರವಾಗಿ ಬೆಳೆದಿದ್ದು, ಕನ್ನಡದ ತೇರನ್ನು ಎಳೆಯಲು ಮೂರುದಿನಗಳ ಕಾಲ ಎಲ್ಲರೂ ಸಮ್ಮೇಳನದಲ್ಲಿ ಭಾಗವಹಿಸೋಣ ಎಂದರು.ಇದೇ ಸಂದರ್ಭದಲ್ಲಿ ಇಒ ಸುನಿಲ್‌ ಕುಮಾರ್‌, ಮುಖ್ಯಾಧಿಕಾರಿ ಹೇಮಂತ್‌ ಕುಮಾರ್‌, ಕ್ಷೇತ್ರ ಶಿಕ್ಷಣಾಧಿಕಾರಿ ದೀಪ, ಪುರಸಭಾ ಅಧ್ಯಕ್ಷೆ ಬಸನಶಂಕರಿ ರಘು, ಕಸಾಪ ಮಾಧ್ಯಮ ಕಾರ್ಯದರ್ಶಿ ನಂದನ್‌ ಪುಟ್ಟಣ್ಣ, ಗೌರವ ಕಾರ್ಯದರ್ಶಿಗಳಾದ ಶಿವನಗೌಡ ಪಾಟೀಲ್, ದಿಂಡಗೂರು ಗೋವಿಂದರಾಜ್, ಮಲ್ಲೇಗೌಡ ಸಂಘಟನಾ ಕಾರ್ಯದರ್ಶಿ ಜಬೀಉಲ್ಲಾಬೇಗ್, ಮಹೇಶ್‌ ಕಬ್ಬಾಳು, ಭೂಮಿ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ರಮೇಶ್‌ಗೂರನಹಳ್ಳಿ, ಮಾಜಿ ಅಧ್ಯಕ್ಷ ರಾಜ್‌ಕುಮಾರ್‌, ಸಮರ ಸೇನೆ ಜಿಲ್ಲಾಧ್ಯಕ್ಷ ಭರತ್‌ ಗೌಡ, ಮಹಿಳಾ ಘಟಕದ ಸದಸ್ಯರಾದ ಯಶೋಧ ಜೈನ್, ರೂಪ ಮತ್ತಿತರಿದ್ದರು.

ವಿವೇಕಾನಂದ ವಿದ್ಯಾ ಶಾಲೆ, ಬಿಜಿಎಸ್ ವಿದ್ಯಾರ್ಥಿಗಳು ಸೇರಿದಂತೆ ನವೋದಯ ವಿದ್ಯಾ ಶಾಲೆಯ ವಿದ್ಯಾರ್ಥಿಗಳು ಪಟ್ಟಣಕ್ಕೆ ಆಗಮಿಸಿದ ಪರಿಷತ್ ರಥಕ್ಕೆ ಪುಷ್ಪನಮನ ಸಲ್ಲಿಸಿ ಬೀಳ್ಕೊಟ್ಟರು.

Share this article