ಸುತ್ತೂರು ಜಾತ್ರೆಯ ತೇರಿಗೆ ಬೇಗೂರಲ್ಲಿ ಸ್ವಾಗತ

KannadaprabhaNewsNetwork |  
Published : Jan 25, 2024, 02:00 AM IST
ಸುತ್ತೂರು ಜಾತ್ರಾ ಮಹೋತ್ಸವ ರಥಕ್ಕೆ ಬೇಗೂರಲ್ಲಿ ಸ್ವಾಗತ  | Kannada Prabha

ಸಾರಾಂಶ

ಗುಂಡ್ಲುಪೇಟೆ: ಸುತ್ತೂರು ಜಾತ್ರಾ ಮಹೋತ್ಸವದ ರಥ ತಾಲೂಕಿನ ಬೇಗೂರು ಗ್ರಾಮಕ್ಕೆ ಆಗಮಿಸಿದಾಗ ಅಖಿಲ ಭಾರತ ವೀರಶೈವ ಲಿಂಗಾಯಿತ ಮಹಾಸಭಾದ ತಾಲೂಕು ಅಧ್ಯಕ್ಷ ಹಾಗೂ ಕಾಡಾ ಮಾಜಿ ಅಧ್ಯಕ್ಷ ಎಚ್.ಎಸ್.ನಂಜಪ್ಪ ನೇತೃತ್ವದಲ್ಲಿ ಮುಖಂಡರು ಸ್ವಾಗತಿಸಿ ಬರ ಮಾಡಿಕೊಂಡರು. ಎಚ್.ಡಿ.ಕೋಟೆಯಿಂದ ಹೆಡಿಯಾಲ ಮಾರ್ಗ ಗುಂಡ್ಲುಪೇಟೆ ತಾಲೂಕಿಗೆ ಸುತ್ತೂರು ಜಾತ್ರಾ ಮಹೋತ್ಸವದ ರಥ ಆಗಮಿಸಿದಾಗ ಸ್ವಾಗತಿಸಿ ವೀರಶೈವ ಮುಖಂಡರು ರಥಕ್ಕೆ ಪೂಜೆ ಸಲ್ಲಿಸಿದರು.

ಫೆ.೬ ರಿಂದ ೧೧ ರವರೆಗೆ ಸುತ್ತೂರು ಜಾತ್ರೆ ಸಂಭ್ರಮ

ಗುಂಡ್ಲುಪೇಟೆ: ಸುತ್ತೂರು ಜಾತ್ರಾ ಮಹೋತ್ಸವದ ರಥ ತಾಲೂಕಿನ ಬೇಗೂರು ಗ್ರಾಮಕ್ಕೆ ಆಗಮಿಸಿದಾಗ ಅಖಿಲ ಭಾರತ ವೀರಶೈವ ಲಿಂಗಾಯಿತ ಮಹಾಸಭಾದ ತಾಲೂಕು ಅಧ್ಯಕ್ಷ ಹಾಗೂ ಕಾಡಾ ಮಾಜಿ ಅಧ್ಯಕ್ಷ ಎಚ್.ಎಸ್.ನಂಜಪ್ಪ ನೇತೃತ್ವದಲ್ಲಿ ಮುಖಂಡರು ಸ್ವಾಗತಿಸಿ ಬರ ಮಾಡಿಕೊಂಡರು. ಎಚ್.ಡಿ.ಕೋಟೆಯಿಂದ ಹೆಡಿಯಾಲ ಮಾರ್ಗ ಗುಂಡ್ಲುಪೇಟೆ ತಾಲೂಕಿಗೆ ಸುತ್ತೂರು ಜಾತ್ರಾ ಮಹೋತ್ಸವದ ರಥ ಆಗಮಿಸಿದಾಗ ಸ್ವಾಗತಿಸಿ ವೀರಶೈವ ಮುಖಂಡರು ರಥಕ್ಕೆ ಪೂಜೆ ಸಲ್ಲಿಸಿದರು.

ಕಾಡಾ ಮಾಜಿ ಅಧ್ಯಕ್ಷ ಎಚ್.ಎಸ್.ನಂಜಪ್ಪ ಮಾತನಾಡಿ, ಫೆ.೬ ರಿಂದ ೧೧ ರವರೆಗೆ ಸುತ್ತೂರು ಜಾತ್ರೆ ನಡೆಯಲಿದ್ದು, ತಾಲೂಕಿನ ಜನರು ಜಾತ್ರೆಗೆ ಹೆಚ್ಚಿನ ಸಂಖ್ಯೆಯಲ್ಲಿ ತೆರಳಬೇಕು ಎಂದು ಮನವಿ ಮಾಡಿದರು. ಫೆ.೬ ರಂದು ವೀರಭದ್ರೇಶ್ವರ ಕೊಂಡೋತ್ಸವ, ಫೆ.೭ ರಂದು ಹಾಲರವಿ ಉತ್ಸವ ಹಾಗೂ ಸಾಮೂಹಿಕ ವಿವಾಹ, ಫೆ.೮ ರಂದು ರಥೋತ್ಸವ, ಫೆ.೯ ರಂದು ಮಹದೇಶ್ವರ ಕೊಂಡೋತ್ಸವ, ಲಕ್ಷ ದೀಪೋತ್ಸವ, ಫೆ.೧೦ ರಂದು ತೆಪ್ಪೋತ್ಸವ, ಫೆ.೧೧ ರಂದು ಅನ್ನಬ್ರಹ್ಮೋತ್ಸವ ಇರುವ ಕಾರಣ ಸುತ್ತೂರು ಮಠದ ಭಕ್ತರು ಹಾಗೂ ಜನರು ಹೋಗಿ ಜಾತ್ರೆಯಲ್ಲಿ ಪಾಲ್ಗೊಳ್ಳಿ ಎಂದರು.

ಜಿಲ್ಲಾ ವೀರಶೈವ ಲಿಂಗಾಯಿತ ಮಹಾಸಭಾದ ಕಾರ್ಯದರ್ಶಿ ಕೆ.ಆರ್.ಲೋಕೇಶ್‌, ಎಪಿಎಂಸಿ ಸದಸ್ಯ ಆರ್.ಎಸ್.ನಾಗರಾಜು, ತಾಪಂ ಮಾಜಿ ಸದಸ್ಯ ಜಯರಾಂ, ಪಿಎಸಿಸಿ ಬ್ಯಾಂಕ್‌ ಮಾಜಿ ಅಧ್ಯಕ್ಷ ಬಿ.ಸಿ.ಮಹದೇವಸ್ವಾಮಿ, ಮುಖಂಡರಾದ ಕೊಡಗಾಪುರ ಚೇರ್ಮನ್‌ ಮಹದೇವಪ್ಪ, ಬಿ.ಎಸ್.ಪಂಚಾಕ್ಷರಿ, ಬಿ.ಪಿ.ರಾಜಶೇಖರಪ್ಪ,ದೊಡ್ಡಹುಂಡಿ ಸತೀಶ್‌, ಕಮರಹಳ್ಳಿ ಗುರುಸ್ವಾಮಿ, ಎಲಚಟ್ಟಿ ಬಸಪ್ಪ, ಬೆಟ್ಟದಮಾದಹಳ್ಳಿ ಮಲ್ಲು,ನಿಜಗುಣ, ಮಂಜು, ಅಗ್ನಿ ಪ್ರಸಾದ್‌, ಚನ್ನವಡೆಯನಪುರ ರೇವಣ್ಣ, ದಲಿತ ಮುಖಂಡ ಸೋಮಹಳ್ಳಿ ವಿಷಕಂಠಮೂರ್ತಿ ಸೇರಿದಂತೆ ಹಲವರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!