ಬೇಲೂರಿಗೆ ಆಗಮಿಸಿದ ಕನ್ನಡ ರಥಕ್ಕೆ ಸ್ವಾಗತ

KannadaprabhaNewsNetwork |  
Published : Sep 21, 2024, 01:50 AM IST
20ಎಚ್ಎಸ್ಎನ್16 : ಬೇಲೂರು ಪಟ್ಟಣಕ್ಕೆ ಆಗಮಿಸಿದ ಕನ್ನಡ ರಥವನ್ನು ಶ್ರೀಚನ್ನಕೇಶವಸ್ವಾಮಿ ದೇಗುಲದ ಮುಂಭಾಗ ಪೂಜೆ ಸಲ್ಲಿಸಲಾಯಿತು. | Kannada Prabha

ಸಾರಾಂಶ

ಬೇಲೂರು: ಬೇಲೂರಿಗೆ ಶುಕ್ರವಾರ ಆಗಮಿಸಿದ ಕನ್ನಡ ರಥವನ್ನು ಪಟ್ಟಣದ ವಿಷ್ಣುಸಮುದ್ರ ಕೆರೆಯ ಬಳಿ ರಥವನ್ನು ಬರಮಾಡಿಕೊಂಡು ಶಾಲಾ ಮಕ್ಕಳು, ಧರ್ಮಸ್ಥಳ ಸ್ತ್ರೀ ಶಕ್ತಿ ಸಂಘದ ಮಹಿಳೆಯರ ಪೂರ್ಣಕುಂಭ ಹಾಗೂ ವಿವಿಧ ಕನ್ನಡಪರ ಸಂಘಟನೆ ಪ್ರಮುಖರೊಂದಿಗೆ ಶ್ರೀಚನ್ನಕೇಶವಸ್ವಾಮಿ ದೇಗುಲದ ಮುಂಭಾಗದಿಂದ ಬಸವೇಶ್ವರ ವೃತ್ತಕ್ಕೆ ಮೆರವಣಿಗೆ ಮೂಲಕ ತೆರಳಲಾಯಿತು.

ಬೇಲೂರು: ಬೇಲೂರಿಗೆ ಶುಕ್ರವಾರ ಆಗಮಿಸಿದ ಕನ್ನಡ ರಥವನ್ನು ಪಟ್ಟಣದ ವಿಷ್ಣುಸಮುದ್ರ ಕೆರೆಯ ಬಳಿ ರಥವನ್ನು ಬರಮಾಡಿಕೊಂಡು ಶಾಲಾ ಮಕ್ಕಳು, ಧರ್ಮಸ್ಥಳ ಸ್ತ್ರೀ ಶಕ್ತಿ ಸಂಘದ ಮಹಿಳೆಯರ ಪೂರ್ಣಕುಂಭ ಹಾಗೂ ವಿವಿಧ ಕನ್ನಡಪರ ಸಂಘಟನೆ ಪ್ರಮುಖರೊಂದಿಗೆ ಶ್ರೀಚನ್ನಕೇಶವಸ್ವಾಮಿ ದೇಗುಲದ ಮುಂಭಾಗದಿಂದ ಬಸವೇಶ್ವರ ವೃತ್ತಕ್ಕೆ ಮೆರವಣಿಗೆ ಮೂಲಕ ತೆರಳಲಾಯಿತು.

ಈ ಸಂದರ್ಭದಲ್ಲಿ ತಹಸೀಲ್ದಾರ್‌ ಎಂ.ಮಮತಾ ಮಾತನಾಡಿ, ವಿಶ್ವದಲ್ಲೇ ವಿಶಿಷ್ಟ ಸ್ಥಾನ ಪಡೆದುಕೊಂಡಿರುವ ಇಂದು ಆಗಮಿಸಿದ ಕನ್ನಡ ರಥವನ್ನು ಪಟ್ಟಣದಲ್ಲಿ ವಿಶೇಷವಾಗಿ ಸ್ವಾಗತಿಸಿ ಗೌರವಿಸಲಾಗಿದೆ. ಕನ್ನಡ ಭಾಷೆಯ ಪ್ರಥಮ ಶಿಲಾ ಶಾಸನ ದೊರೆತಿರುವ ಹಲ್ಮಿಡಿ ಗ್ರಾಮವನ್ನು ಹೊಂದಿರುವ ನಾವೇ ಧನ್ಯರು, ಒಂದು ದಿನ ಕನ್ನಡ ಸಂಭ್ರಮ ಪಡೆಯುವುದಕ್ಕಿಂತ ಪ್ರತಿ ದಿನ ಆಚರಿಸಬೇಕು. ಕನ್ನಡನಾಡಿಗೆ ಆಗಮಿಸುವ ಪರಭಾಷೀಕರಿಗೆ ಕನ್ನಡಿಗರು ಪ್ರೀತಿ ತೋರಿಸುತ್ತೇವೆ, ಕೈ ಹಿಡಿದು ಅನ್ಯ ಭಾಷೀಕರನ್ನು ಬರಮಾಡಿಕೊಳ್ಳುತ್ತೇವೆ ಹಾಗೆಯೇ ಕನ್ನಡ ಕಲಿಸುವ ಕೆಲಸ ಆಗಬೇಕಿದೆ ಎಂದರು.

ಪುರಸಭೆ ಅಧ್ಯಕ್ಷ ಎ.ಆರ್.ಅಶೋಕ್ ಮಾತನಾಡಿ, ೨೦೨೩ ನವೆಂಬರ್ ೨ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹಂಪಿಯಲ್ಲಿ ಚಾಲನೆ ನೀಡಿದ್ದರು. ನಾವು ಎಲ್ಲೇ ಇದ್ದರೂ ಕನ್ನಡಿಗರಾಗಿರಬೇಕು, ಮೈಸೂರು ರಾಜ್ಯವು ಕರ್ನಾಟಕವಾಗಿ ಮಾರ್ಪಾಡಾಗಿದ್ದು ಸರ್ವ ಭಾಷಿಗರು, ಧರ್ಮೀಯರು ಕನ್ನಡದ ಬಗ್ಗೆ ಗೌರವ ಕೊಡಬೇಕೆಂದರು.

ಕರವೇ ಅಧ್ಯಕ್ಷ ಚಂದ್ರಶೇಖರ್ ಮಾತನಾಡಿ, ಕನ್ನಡ ನೆಲದಲ್ಲಿದ್ದುಕೊಂಡವರು ಕನ್ನಡ ಭಾಷೆಗೆ ಗೌರವ ಕೊಡಬೇಕು, ಇಲ್ಲಿದ್ದುಕೊಂಡು ಕನ್ನಡ ವಿರೋಧಿಯಾಗಿ ಕೆಲಸ ಮಾಡಿದರೆ ಸಂಘಟನೆ ಸುಮ್ಮನಿರುವುದಿಲ್ಲ ಎಂದು ಎಚ್ಚರಿಸಿದರು.

ಕಸಾಪ ಮಾಜಿ ಅಧ್ಯಕ್ಷ ಎಚ್.ಎಂ. ದಯಾನಂದ್, ಕಸಾಪ ಅಧ್ಯಕ್ಷ ಮಾ.ನ .ಮಂಜೇಗೌಡ ರಥ ಸ್ವಾಗತಕ್ಕೆ ಶುಭಕೋರಿದರು. ಶ್ರೀಚನ್ನಕೇಶವಸ್ವಾಮಿ ದೇಗುಲದ ಮುಂಭಾಗ ದೇಗುಲದ ಪುರೋಹಿತರಾದ ಶ್ರೀನಿವಾಸಭಟ್ಟರ್ ತಂಡವರು ಭುವನೇಶ್ವರಿ ದೇವಿಗೆ ಪೂಜೆ ಸಲ್ಲಿಸಿದರು. ತಾ.ಪಂ.ಇಒ ವಸಂತ ಕುಮಾರ್, ಪುರಸಭೆ ಸದಸ್ಯ ಜಮಾಲುದ್ದೀನ್, ಪ್ರಭಾಕರ್, ಬಿಇಒ ರಾಜೇಗೌಡ, ಪುರಸಭೆ ಸಿಒ ಸುಜಯ ಕುಮಾರ್‌, ಕಸಾಪ ಅಧ್ಯಕ್ಷ ಮಂಜೇಗೌಡ, ಮ.ಶಿವಮೂರ್ತಿ, ಅನಂತರಾಜೇ ಅರಸು, ಕರವೇ ಅಧ್ಯಕ್ಷ ಚಂದ್ರಶೇಖರ್‌, ಕರವೇ ಪ್ರವೀಣ್ ಶೆಟ್ಟಿ ಬಣದ ಬೋಜೇಗೌಡ, ಧರ್ಮಸ್ಥಳ ಸ್ವಸಹಾಯ ಸಂಘದ ಮಹಿಳೆಯರು, ಶಾಲಾ ಶಿಕ್ಷಕರು, ವಿದ್ಯಾರ್ಥಿಗಳು, ಅಧಿಕಾರಿ ವರ್ಗದವರು ಇದ್ದರು.

PREV

Recommended Stories

ದಸರಾ ಉದ್ಘಾಟನೆಗೆ ಬಾನು : ಬಿಜೆಪಿ vs ಕಾಂಗ್ರೆಸ್ ಜಟಾಪಟಿ
ಧರ್ಮಸ್ಥಳ ಎಸ್‌ಐಟಿ ಅಧಿಕಾರಿ ಅನುಚೇತ್‌ ಅಮೆರಿಕ ಪ್ರವಾಸಕ್ಕೆ