ಘೂಳನೂರ, ಬಡದಾಳ, ಬಂದರವಾಡ ಮಠಗಳ ಸಂಗಮದಿಂದ ಕಲ್ಯಾಣ: ಡಾ. ಸಾರಂಗಧರ

KannadaprabhaNewsNetwork |  
Published : Oct 17, 2026, 01:15 AM IST
ಚಿತ್ರ- ಘೂಳನೂರ್‌ಘೂಳನೂರ ಮಠದಲ್ಲಿ ಡಾ. ಸಾರಂಗಧರ ದೇಶಿಕೇಂದ್ರ ಮಹಾಸ್ವಾಮಿಗಳ 60ನೇ ವರ್ಧಂತಿ ಮಹೋತ್ಸವ ಜರುಗಿತು. | Kannada Prabha

ಸಾರಾಂಶ

ಘೂಳನೂರ, ಬಡದಾಳ ಮತ್ತು ಬಂದರವಾಡ ಮಠಗಳು ತ್ರಿವೇಣಿ ಸಂಗಮದಂತೆ ಒಂದಾಗಿರುವುದು ಲೋಕಕಲ್ಯಾಣಕ್ಕೆ ಪೂರಕವಾಗಿದೆ ಎಂದು ಶ್ರೀಶೈಲದ ಡಾ. ಸಾರಂಗಧರ ದೇಶಿಕೇಂದ್ರ ಮಹಾಸ್ವಾಮೀಜಿ ಹೇಳಿದರು.

ಕನ್ನಡಪ್ರಭ ವಾರ್ತೆ ಅಫಜಲಪುರ ಘೂಳನೂರ, ಬಡದಾಳ ಮತ್ತು ಬಂದರವಾಡ ಮಠಗಳು ತ್ರಿವೇಣಿ ಸಂಗಮದಂತೆ ಒಂದಾಗಿರುವುದು ಲೋಕಕಲ್ಯಾಣಕ್ಕೆ ಪೂರಕವಾಗಿದೆ ಎಂದು ಶ್ರೀಶೈಲದ ಡಾ. ಸಾರಂಗಧರ ದೇಶಿಕೇಂದ್ರ ಮಹಾಸ್ವಾಮೀಜಿ ಹೇಳಿದರು.

ಅಫಜಲಪುರ ತಾಲೂಕಿನ ಘೂಳನೂರ ಗ್ರಾಮದ ಶ್ರೀ ಗುರುಸಿದ್ಧರಾಮೇಶ್ವರ ಹಿರೇಮಠದಲ್ಲಿ ಶನಿವಾರ ನಡೆದ ತಮ್ಮ 60ನೇ ವರ್ಧಂತಿ ಮಹೋತ್ಸವದಲ್ಲಿ ಆಶೀರ್ವಚನ ನೀಡಿದ ಅವರು, ಸಮಾಜದಲ್ಲಿ ಶಾಂತಿ, ಸಾಮರಸ್ಯ ಮತ್ತು ಸಹಬಾಳ್ವೆ ನೆಲೆಸಲು ಪ್ರತಿಯೊಬ್ಬರೂ ಶ್ರಮಿಸಬೇಕು. ಜಾತಿ-ಮತಗಳ ಭೇದ ಮರೆತು ಪರಸ್ಪರ ಗೌರವದಿಂದ ಬದುಕಿದಾಗ ಸುಂದರ ಸಮಾಜ ನಿರ್ಮಾಣ ಸಾಧ್ಯ. ಬಡದಾಳದ ಡಾ. ಅಭಿನವ ಚನ್ನಮಲ್ಲ ಶಿವಾಚಾರ್ಯರು ಪ್ರತಿವರ್ಷ ಘೂಳನೂರ ಜಾತ್ರೆಗೆ ಆಗಮಿಸಬೇಕು ಎಂದು ಆಹ್ವಾನಿಸಿದರು.

ಬಡದಾಳದ ಡಾ. ಅಭಿನವ ಚನ್ನಮಲ್ಲ ಶಿವಾಚಾರ್ಯರು ಮಾತನಾಡಿ, ಸಾರಂಗಧರ ದೇಶಿಕೇಂದ್ರ ಮಹಾಸ್ವಾಮಿಗಳು ತಮ್ಮ ಹಿರಿಯ ಸಹೋದರರಾಗಿದ್ದು, ಮಧ್ಯದಲ್ಲಿ ಉಂಟಾಗಿದ್ದ ಅಂತರ ಇದೀಗ ದೈವವಾಣಿಯಿಂದ ನಿವಾರಣೆಯಾಗಿ ಮತ್ತೆ ಒಂದಾಗಿದ್ದೇವೆ. ಚಂದ್ರ-ಸೂರ್ಯ ಇರುವವರೆಗೂ ನಮ್ಮ ಬಾಂಧವ್ಯ ಹೀಗೆಯೇ ಮುಂದುವರಿಯಲಿದೆ ಎಂದು ಭಾವುಕರಾಗಿ ನುಡಿದರು.

ಸಾರಂಗಧರ ಶ್ರೀಗಳು ಮೃದು ಮನಸ್ಸಿನವರಾಗಿದ್ದು, ಭಕ್ತರ ಉದ್ಧಾರಕ್ಕೆ ಶ್ರಮಿಸುವ ಮಹನೀಯರಾಗಿದ್ದಾರೆ. ಭಕ್ತರ ಶ್ರೇಯೋಭಿವೃದ್ಧಿಯೇ ನಮ್ಮ ಮಠಗಳ ನಿಜವಾದ ಆಸ್ತಿ. ಘೂಳನೂರ ಮತ್ತು ಬಡದಾಳ ಮಠಗಳ ನಡುವಿನ ಬಾಂಧವ್ಯವು ಪ್ರೀತಿ, ವಿಶ್ವಾಸ ಹಾಗೂ ಧಾರ್ಮಿಕ ಪರಂಪರೆಯಿಂದ ಬೆಸೆದಿದ್ದು, ಈ ಆತ್ಮೀಯತೆ ಸದಾಕಾಲ ಉಳಿಯಲಿದೆ ಎಂದು ಡಾ. ಅಭಿನವ ಚನ್ನಮಲ್ಲ ಶಿವಾಚಾರ್ಯ ಹೇಳಿದರು.

ಬಂದರವಾಡ ಸುರಗಿ ಮಠದ ಶಾಂತವೀರ ಶಿವಾಚಾರ್ಯರು ಮಾತನಾಡಿ, ಬಂದರವಾಡ, ಬಡದಾಳ ಮತ್ತು ಘೂಳನೂರ ಮಠಗಳು ಬೇರೆ ಬೇರೆ ಊರುಗಳಲ್ಲಿದ್ದರೂ ಮನಸ್ಸುಗಳು ಒಂದೇ ಆಗಿವೆ. ಈ ತ್ರಿವಳಿ ಮಠಗಳ ಐಕ್ಯತೆಯಿಂದ ಲೋಕಕಲ್ಯಾಣವಾಗಲಿದೆ ಎಂದರು.

ಕಾರ್ಯಕ್ರಮದಲ್ಲಿ ಡಾ. ಶಿವಾನಂದ ಮಹಾಸ್ವಾಮಿಗಳು, ಶಾಂತವೀರ ಮಹಾಸ್ವಾಮಿಗಳು, ಶ್ರೀಮಠದ ಉತ್ತರಾಧಿಕಾರಿ ಶರಣಬಸವ ದೇವರು, ಶಿವಶರಣಗೌಡ ಪಾಟೀಲ, ಅಣ್ಣಾರಾಯಗೌಡ ಪಾಟೀಲ, ಮಡಿವಾಳಗೌಡ ಪಾಟೀಲ, ಯಲ್ಲಾಲಿಂಗ ತಳವಾರ, ಲಕ್ಷ್ಮಿಪುತ್ರ ಕರಜಗಿ, ಸಂತೋಷಗೌಡ ಪಾಟೀಲ, ಶಂಕರ ತಳಕೇರಿ, ಗೊಲಪ್ಪ ಮಾಂಗ, ಅಂಬಾರಾಯಗೌಡ ಪಾಟೀಲ, ಮಾಳಪ್ಪ ಪೂಜಾರಿ, ಬಸವರಾಜ ಕಿಣಗಿ, ರಾಮ ಮಾಂಗ, ಮಹಾಂತ ದೊಡ್ಡಮನಿ, ಅಣ್ಣಾರಾವ ಕುಲಕರ್ಣಿ, ವೀರಭದ್ರ ಸುತಾರ, ಸಿದ್ರಾಮಪ್ಪಗೌಡ ಮಾಲಿ ಪಾಟೀಲ, ಶಿವುಗೌಡ ಪಾಟೀಲ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಡ್ರಗ್ಸ್ ವಿರೋಧಿ ಜಾಗೃತಿ ರಾಯಭಾರಿಗಳಾಗಿ: ಡೀಸಿ ಡಾ.ಅನುರಾಧ
ಜಿ.ಪಂ ಮೀಸಲಾತಿ ಪಾರದರ್ಶಕತೆ ಪರಿಶೀಲಿಸಿ: ಇನಾಮ್ದಾರ್‌