ಸಮಾಜದಲ್ಲಿ ಮಹಿಳೆಗೆ ಬೇಕಿರೋದು ಅವಕಾಶ: ಪದ್ಮಾವತಿ

KannadaprabhaNewsNetwork |  
Published : Mar 09, 2026, 02:30 AM IST
ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಲಾಯಿತು. | Kannada Prabha

ಸಾರಾಂಶ

ಸಮಾಜದಲ್ಲಿ ಮಹಿಳೆಗೆ ಬೇಕಿರೋದು ಅವಕಾಶವೇ ಹೊರತು ಅನುಕಂಪವಲ್ಲ.

ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ

ಕನ್ನಡಪ್ರಭ ವಾರ್ತೆ ದಾಂಡೇಲಿ

ಇಂದು‌ ಮಹಿಳೆ ಪ್ರತಿಯೊಂದು ಕ್ಷೇತ್ರದಲ್ಲಿ ಪುರುಷರಿಗೆ ಸಮಾನವಾದ ಕೆಲಸ ಮಾಡುತ್ತಿದ್ದಾಳೆ. ಆದರೂ ಕೆಲವೊಂದು ಸಂದರ್ಭಗಳಲ್ಲಿ, ಪ್ರದೇಶಗಳಲ್ಲಿ‌ ಮಹಿಳೆಯರ ಮೇಲೆ ದೌರ್ಜನ್ಯ, ಶೋಷಣೆ ನಡೆಯುತ್ತಿರುವುದನ್ನ ಕಾಣುತ್ತೇವೆ. ಇದು ಸಂಪೂರ್ಣವಾಗಿ ಕೊನೆಯಾಗಬೇಕು. ಸಮಾಜದಲ್ಲಿ ಮಹಿಳೆಗೆ ಬೇಕಿರೋದು ಅವಕಾಶವೇ ಹೊರತು ಅನುಕಂಪವಲ್ಲ ಎಂದು ಸಿವಿಲ್ ನ್ಯಾಯಾಧೀಶೆಯಾಗಿ ಆಯ್ಕೆಯಾದ ಪದ್ಮಾವತಿ ಮಾದಿಗ ನುಡಿದರು.ಅವರು ದಾಂಡೇಲಿಯ ಈಶ್ವರ ಫೌಂಡೇಶನ್, ಕಾರವಾರದ ಜನ ಶಿಕ್ಷಣ ಸಂಸ್ಥಾನ ಹಾಗೂ ದಾಂಡೇಲಿ ಕನ್ನಡ ಸಾಹಿತ್ಯ ಪರಿಷತ್ ಇವರ ಸಹಯೋಗದಲ್ಲಿ ಸಾಹಿತ್ಯ ಭವನದಲ್ಲಿ ಹಮ್ಮಿಕೊಂಡಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತಿದ್ದರು. ಮುಖ್ಯ ಅತಿಥಿಯಾಗಿದ್ದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಬಿ. ಎನ್. ವಾಸರೆ ಮಾತನಾಡಿ ಮಹಿಳೆಯರ ಮೇಲಿನ ಶೋಷಷೆ, ದೌರ್ಜನ್ಯ ಅನ್ನುವುದನ್ನು ಪುರಾಣ ಕಾಲದಿಂದಲೂ ನೋಡುತ್ತ ಬಂದಿದ್ದೇವೆ. ಪುರಾಣಗಳ ಮಹಿಳಾ ಪಾತ್ರಗಳಲ್ಲಿಯೂ ದೌರ್ಜನ್ಯ ಎಸಗಲಾಗಿದೆ. ಈಗಲೂ ಅದು ಮುಂದುವರೆದಿರುವುದು ವಿರ್ಯಾಸ. ಮಹಿಳೆ ತನ್ನ ಸಾಂವಿದಾನಿಕ ಹಕ್ಕು ಮತ್ತು ಕರ್ತವ್ಯಗಳನ್ನು ಬಳಸಿಕೊಳ್ಳಬೇಕು. ಶೋಷಣೆ, ದೌರ್ಜನ್ಯ ವನ್ನು ಪ್ರತಿಭಟಿಸಬೇಕು ಎಂದರು. ಪ್ರಸ್ತುತ ಸಮಾಜ ಮತ್ತು‌ಮಹಿಳೆ ಎಂಬ ವಿಷಯದ ಮೇಲೆ ಉನ್ಯಾಸ ನೀಡಿದ ಲೇಖಕಿ ಅಶ್ವಿನಿ ಶೆಟ್ಟಿ, ಮಹಿಳೆಯನ್ನು ದೇವತೆಯ ಸ್ಥಾನದಲ್ಲಿರಿಸಿ ದಿಗ್ಬಂದನ‌ ಹಾಕಲಾಗಿದೆ. ಆದರೆ ಸಿಗಬೇಕಾದ ಸ್ವಾತಂತ್ರ್ಯ ಹಾಗೂ ಗೌರವ ನೀಡುತ್ತಿಲ್ಲ. ಎಲ್ಲ ಸ್ಥರದಲ್ಲಿಯೂ ಮಹಿಳೆಗೆ ಎಲ್ಲ ರೀತಿಯ ಅವಕಾಶ ಸಿಗುವಂತಾಗಬೇಕು ಎಂದರು.ಅತಿಥಿಯಾಗಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮೋಹನ್ ಹಲವಾಯಿ, ಕಸಾಪ ತಾಲ್ಲೂಕು ಘಟಕದ ಅಧ್ಯಕ್ಷ ನಾರಾಯಣ ನಾಯ್ಕ, ಜಿಲ್ಲಾ ಗೌರವ ಕೋಶಾಧ್ಯಕ್ಷ ಮುರ್ತುಜಾ ಹುಸೇನ ಆನೆಹೂಸೂರು ಸಾಂದರ್ಭಿಕವಾಗಿ ಮಾತನಾಡಿದರು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಈಶ್ವರ ಫೌಂಡೇಶನ್ ಸಂಸ್ಥೆಯ ಅಧ್ಯಕ್ಷೆ ಕಲ್ಪನಾ ಪಾಟೀಲ ಮಾತನಾಡಿದರು. ಮಹಿಳಾ ದಿನಾಚರಣೆಯ ಅಂಗವಾಗಿ ನ್ಯಾಯಾದೀಶೆಯಾಗಿ ಆಯ್ಕೆಯಾದ‌ ಪದ್ಮಾವತಿ ಮಾದಿಗ, ಲೇಖಕಿ ಅಶ್ವಿನಿ ಶೆಟ್ಡಿ, ನ್ಯಾಯವಾದಿ ಸುಮಿತ್ರಾ ಹುರೆಕುಂಡಿ, ಶ್ರಮ ಸಾಧಕಿ ನವಮಣಿಯವರನ್ನು ಸನ್ಮಾನಿಸಿ ಗೌರವಿಸಿದರು. ವೆಂಕಮ್ಮ ಗಾಂವಕರ ಪ್ರಾಸ್ತಾವಿಕವಾಗಿ ಮಾತನಾಡಿದರು.‌ ಪದ್ಮಶ್ರೀ ಜೈನ್ ಸ್ವಾಗತಿಸಿದರು. ಜಲಜಾ ಬಿ. ವಾಸರೆ ನಿರೂಪಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬೇಸಿಗೆ ಬಂತು ಕುಡಿವ ನೀರಿನ ದಾಹ ಹೆಚ್ಚಾಯ್ತು
ಆತ್ಮವಿಶ್ವಾಸದಿಂದ ಪರೀಕ್ಷೆ ಬರೆಯಿರಿ: ಅಂದಾನಯ್ಯ ವಿರಕ್ತಮಠ