ಮೋದಿಯವರ ಜನಪರ ಸಾಧನೆ ಏನು?: ಕಿಮ್ಮನೆ ರತ್ನಾಕರ್‌

KannadaprabhaNewsNetwork |  
Published : Apr 03, 2024, 01:37 AM IST
ಫೋಟೋ 02: ಟಿಟಿಎಚ್ 01: ಬಿಜೆಪಿ ವಾಶಿಂಗ್ ಮಶಿನ್ ಇದ್ದಂತೆ. ಎಂಥಾ ಭ್ರಷ್ಟಾಚಾರಿಗಳೂ ಬಿಜೆಪಿ ಪಕ್ಷಕ್ಕೆ ಸೇರಿದರೆ ರಾಮನಂತಾಗುತ್ತಾರೆ ಎಂದು ಸುದ್ದಿಗೋಷ್ಠಿಯಲ್ಲಿ ವಾಶಿಂಗ್ ಮಶಿನ್ ತೋರಿಸಿ ಕಿಮ್ಮನೆ ಟೀಕಿಸಿದರು.ಫೋಟೋ 02: ಟಿಟಿಎಚ್ 01: ಬಿಜೆಪಿ ವಾಶಿಂಗ್ ಮಶಿನ್ ಇದ್ದಂತೆ. ಎಂಥಾ ಭ್ರಷ್ಟಾಚಾರಿಗಳೂ ಬಿಜೆಪಿ ಪಕ್ಷಕ್ಕೆ ಸೇರಿದರೆ ರಾಮನಂತಾಗುತ್ತಾರೆ ಎಂದು ಸುದ್ದಿಗೋಷ್ಠಿಯಲ್ಲಿ ವಾಶಿಂಗ್ ಮಶಿನ್ ತೋರಿಸಿ ಕಿಮ್ಮನೆ ಟೀಕಿಸಿದರು. | Kannada Prabha

ಸಾರಾಂಶ

ಬಿಜೆಪಿ ವಾಶಿಂಗ್ ಮಶಿನ್ ಇದ್ದಂತೆ. ಎಂಥಾ ಭ್ರಷ್ಟಾಚಾರಿಗಳೂ ಬಿಜೆಪಿ ಪಕ್ಷಕ್ಕೆ ಸೇರಿದರೆ ರಾಮನಂತಾಗುತ್ತಾರೆ ಎಂದು ನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ವಾಶಿಂಗ್ ಮಶಿನ್ ತೋರಿಸಿ ಮಾಜಿ ಸಚಿವ ಕಿಮ್ಮನೆ ರತ್ನಾಕರ್‌ ಟೀಕಿಸಿದರು.

ಕನ್ನಡಪ್ರಭ ವಾರ್ತೆ ತೀರ್ಥಹಳ್ಳಿ

ಬಿಜೆಪಿಯ ಜನವಿರೋಧಿ ಸಿದ್ಧಾಂತವನ್ನೇ ಅರಿಯದೇ ಬಹಳ ಮಂದಿ ತಮ್ಮ ಲಾಭಕ್ಕಾಗಿ ವಿದ್ಯೆ ಮತ್ತು ಜ್ಞಾನವನ್ನು ಮಾರಿಕೊಂಡು ಬಿಜೆಪಿ ಪಕ್ಷದಲ್ಲಿರುವುದು ವಿಷಾದನೀಯ ಸಂಗತಿಯಾಗಿದೆ. ನರೇಂದ್ರ ಮೋದಿಯವರ ಜನಪರವಾದ ಸಾಧನೆಯಾದರೂ ಏನು? ಎಂದು ಕಾಂಗ್ರೆಸ್ ವಕ್ತಾರರಾದ ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಪ್ರಶ್ನಿಸಿದರು.

ಹಸಿವಿಗೆ ಜಾತಿ ಧರ್ಮದ ವ್ಯತ್ಯಾಸವಿಲ್ಲ ಮತ್ತು ದೇಶ ಎಂದರೆ ಮಣ್ಣು, ಬಾವುಟ, ಧರ್ಮ ಅಲ್ಲ. ರಾಜ್ಯದ ಕಾಂಗ್ರೆಸ್ ಸರ್ಕಾರ ಗ್ಯಾರಂಟಿ ಯೋಜನೆಗಳ ಮೂಲಕ ಬಡವರ ಹಸಿವನ್ನು ನೀಗಿಸುವ ಯೋಜನೆಗಳನ್ನು ಜಾರಿಗೆ ತಂದಿದ್ದು ಶೇ.98 ಪಲಾನುಭವಿಗಳಿಗೆ ಇದರ ಲಾಭ ತಲುಪಿದೆ. ನರೇಗಾ ಯೋಜನೆಗೆ ಕಳೆದ ಎರಡು ವರ್ಷಗಳಿಂದ ಅನುದಾನವನ್ನೇ ಬಿಡುಗಡೆ ಮಾಡದ ಬಿಜೆಪಿ ಆಡಳಿತವನ್ನೇ ಕೊನೆಗಾಣಿಸಬೇಕಿದೆ ಎಂದು ಮಂಗಳವಾರ ಪಟ್ಟಣದಲ್ಲಿರುವ ಪಕ್ಷದ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಬಿಜೆಪಿ ಬಡವರ ಪರವಾದ ಗ್ಯಾರಂಟಿ ಯೋಜನೆಗಳಿಗೆ ವಿರೋಧವನ್ನು ವ್ಯಕ್ತಪಡಿಸುತ್ತಿದೆ. ಶ್ರೀಮಂತ ವರ್ಗದ ಹಿತವನ್ನು ಕಾಯುವ ಆ ಪಕ್ಷದ ಸರ್ಕಾರ ಆದಾಯ ತೆರಿಗೆಯನ್ನು ಶೆ.28 ನಿಂದ ಶೇ.20 ಇಳಿಸಿ ಸರ್ಕಾರದ ಬೊಕ್ಕಸಕ್ಕೆ ಲಕ್ಷಾಂತರ ಕೋಟಿ ನಷ್ಟ ಉಂಟು ಮಾಡಿದೆ. ಬಡವರ ಪರವಾಗಿ ಜಾರಿಗೆ ತಂದಿರುವ 52 ಸಾವಿರ ರು. ಗ್ಯಾರಂಟಿ ಯೋಜನೆಯನ್ನು ಟೀಕಿಸುತ್ತಿದೆ. ಗ್ಯಾರಂಟಿ ಯೋಜನೆಯಲ್ಲಿ ಶೇ.98 ಫಲಾನುಭವಿಗಳಿಗೆ ಯೋಜನೆಯ ಲಾಭ ದೊರಕಿದ್ದು, ಈ ಆಧಾರದಲ್ಲಿ ರಾಜ್ಯದ ಎಲ್ಲಾ 28 ಸ್ಥಾನಗಳನ್ನು ಗೆಲ್ಲುತ್ತೇವೆ ವಿಶ್ವಾಸ ವ್ಯಕ್ತಪಡಿಸಿದರು.

114 ಕೋಟಿ ಹಿಂದೂಗಳಿದ್ದು, ಶೇ. 80 ಜನ ತಮ್ಮ ಪರವಾಗಿ ಮತ ಚಲಾಯಿಸಿದರೆ ನಮ್ಮನ್ನು ಹಿಡಿಯುವವರೇ ಇಲ್ಲ ಎಂಬ ಮನೊಭಾವ ಬಿಜೆಪಿಗಿದೆ. 60 ದಶಕದಿಂದಲೇ ಮೀಸಲಾತಿಯನ್ನು ರದ್ದು ಮಾಡುವ ಉದ್ದೇಶವನ್ನು ಆ ಪಕ್ಷ ಹೊಂದಿದೆ. ಆರ್‌ಎಸ್‍ಎಸ್ ನ ಚಿಂತನಗಂಗಾದ ಆಶಯವನ್ನು ಪಾಲಿಸುವ ಅಜೆಂಡಾವನ್ನು ಬಿಜೆಪಿ ಹೊಂದಿದ್ದುಮ ಅದರಂತೆ ಸಿದ್ಧತೆಯೂ ನಡೆದಿದೆ ಎಂದು ಆರೋಪಿಸಿದರು.

ಬಿಜೆಪಿಯ ಧೋರಣೆಯನ್ನು ಖಂಡಿಸಿ ಈ ದಿನ ನಡೆಸಬೇಕಿದ್ದ ಒಂದು ದಿನದ ಉಪವಾಸ ಸತ್ಯಾಗ್ರಹವನ್ನು ಚುನಾವಣಾ ನೀತಿ ಸಂಹಿತೆಯ ಕಾರಣಕ್ಕೆ ಹಿಂತೆಗೆದು ಕೊಂಡಿದ್ದೇನೆ. ಏ.5ರಂದು ನಮ್ಮ ಅಭ್ಯರ್ಥಿ ಗಾಜನೂರಿನಿಂದ ಹಣಗೆರೆವರೆಗೆ ಪ್ರಚಾರ ಮಾಡಲಿದ್ದಾರೆ ಎಂದು ತಿಳಿಸಿದರು.

ಎಂಎಡಿಬಿ ಅಧ್ಯಕ್ಷ ಆರ್.ಎಂ.ಮಂಜುನಾಥಗೌಡ, ಕೆಸ್ತೂರು ಮಂಜುನಾಥ್, ಮುಡುಬಾ ರಾಘವೇಂದ್ರ, ಕ್ಷೇತ್ರದ ಚುನಾವಣಾ ವೀಕ್ಷಕ ರಮೇಶ್ ಶೆಟ್ಟಿ, ಜಿ.ಎಸ್. ನಾರಾಯಣರಾವ್, ಯುವ ಕಾಂಗ್ರೆಸ್ ಅಧ್ಯಕ್ಷ ಅಮರನಾಥ ಶೆಟ್ಟಿ, ಪಪಂ ಅಧ್ಯಕ್ಷೆ ಗೀತಾ ರಮೇಶ್, ಎಚ್.ಬಿ.ಪದ್ಮನಾಭ್, ಸುಶ್ಮಾ ಸಂಜಯ್, ಸುಮಾ ಸುಬ್ರಮಣ್ಯ ಇದ್ದರು.

PREV

Recommended Stories

180 ಸ್ಥಳೀಯ ಸಂಸ್ಥೆಗಳ ಚುನಾವಣೆ ಸದ್ಯಕ್ಕೆ ಕಷ್ಟ : ಕೋರ್ಟ್‌ಗೆ ಸರ್ಕಾರ
ಮಾಲೀಕನ ಶವ ಕಂಡು ಪ್ರಾಣ ಬಿಟ್ಟ ಶ್ವಾನ