ಗಣಿತವಿಲ್ಲದೆ ಯಾವುದು ಸಾಧ್ಯವಿಲ್ಲ: ಡಾ.ಎಂ.ಎಸ್.ಮಹದೇವ್ ನಾಯಕ್

KannadaprabhaNewsNetwork |  
Published : Feb 28, 2025, 12:47 AM IST
27ಕೆಎಂಎನ್ ಡಿ23 | Kannada Prabha

ಸಾರಾಂಶ

ಖ್ಯಾತ ಗಣಿತಜ್ಞರು ಹಿಂದಿನಿಂದ ನೀಡಿರುವಕೊಡುಗೆಗಳಿಂದ ಪ್ರಸ್ತುತ ತಂತ್ರಜ್ಞಾನವನ್ನು ಸಮರ್ಪಕವಾಗಿ ಬಳಸುತ್ತಿದ್ದೇವೆ. ಗಣಿತ ವಿಷಯದ ಆಸಕ್ತಿ ಹಾಗೂ ಸಂಶೋಧನೆ ಸಮಾಜಕ್ಕೆ ಅವಶ್ಯವಿರುವುದರಿಂದ ವಿದ್ಯಾರ್ಥಿಗಳು ವಿಷಯದಲ್ಲಿ ಆಸಕ್ತಿ ವಹಿಸಿ ಮುಂದಿನ ತಂತ್ರಜ್ಞಾನದ ಆವಿಷ್ಕಾರಕ್ಕೆ ನಾಂದಿಯಾಡಬೇಕು.

ಕನ್ನಡಪ್ರಭ ವಾರ್ತೆ ಮಂಡ್ಯ

ಅನ್ಯಗ್ರಹಗಳ ಅನ್ವೇಷಣೆಗೆ ಉಪಗ್ರಹ ಉಡಾವಣೆಯವರೆಗೆ ಗಣಿತವಿಲ್ಲದೆ ಯಾವುದು ಸಾಧ್ಯವಿಲ್ಲ. ಪ್ರಕೃತಿಯಲ್ಲಿಯೂ ಗಣಿತವಿದೆ ಎಂದು‌ ಬೆಂಗಳೂರು ವಿಶ್ವವಿದ್ಯಾಲಯದ ವಿಶ್ರಾಂತ ಪ್ರಾಧ್ಯಾಪಕರಾದ ಡಾ.ಎಂ.ಎಸ್ ಮಹದೇವ್ ನಾಯಕ್ ತಿಳಿಸಿದರು.

ನಗರದ ಮಹಿಳಾ ಸರ್ಕಾರಿ ಕಾಲೇಜು ಮತ್ತು ರೂಸ 2.0 ಕಾರ್ಯಕ್ರಮದ ಅಡಿಯಲ್ಲಿ ಗಣಿತಶಾಸ್ತ್ರ ವಿಭಾಗದಿಂದ ಆಯೋಜಿಸಿದ್ದ ಎಕ್ಸ್ ಪ್ಲೋರಿಂಗ್‌ದ ಪವರ್ ಆಫ್ ಮ್ಯಾಥಮೆಟಿಕ್ಸ್:ಅಪ್ಲಿಕೇಶನ್ ಅಕ್ರಾಸ್ ಡಿಸಿಪ್ಲಿನ್ ಎಂಬ ವಿಷಯದ ಒಂದು ದಿನದ ರಾಜ್ಯ ಮಟ್ಟದ ವಿಚಾರ ಸಂಕಿರಣ ಮಾತನಾಡಿದರು.

ಖ್ಯಾತ ಗಣಿತಜ್ಞರು ಹಿಂದಿನಿಂದ ನೀಡಿರುವಕೊಡುಗೆಗಳಿಂದ ಪ್ರಸ್ತುತ ತಂತ್ರಜ್ಞಾನವನ್ನು ಸಮರ್ಪಕವಾಗಿ ಬಳಸುತ್ತಿದ್ದೇವೆ. ಗಣಿತ ವಿಷಯದ ಆಸಕ್ತಿ ಹಾಗೂ ಸಂಶೋಧನೆ ಸಮಾಜಕ್ಕೆ ಅವಶ್ಯವಿರುವುದರಿಂದ ವಿದ್ಯಾರ್ಥಿಗಳು ವಿಷಯದಲ್ಲಿ ಆಸಕ್ತಿ ವಹಿಸಿ ಮುಂದಿನ ತಂತ್ರಜ್ಞಾನದ ಆವಿಷ್ಕಾರಕ್ಕೆ ನಾಂದಿಯಾಡಬೇಕು ಎಂದು ಕರೆ ನೀಡಿದರು.

ಬೆಂಗಳೂರಿನ ಕೆ.ಆರ್.ಪುರಂ ನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹ ಪ್ರಾಧ್ಯಾಪಕ ಡಾ.ಎಂ.ಸಿ.ಮಹೇಶ್ ಕುಮಾರ್, ಹಾಗೂ ಜ್ಞಾನಭಾರತಿ ಕ್ಯಾಂಪಸ್ ನ ಬೆಂಗಳೂರು ವಿವಿ ಸಹಾಯಕ ಪ್ರಾಧ್ಯಾಪಕ ಡಾ.ಎಸ್.ಕುಂಬಿನರಸಯ್ಯ, ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿ ವಿಚಾರ ಮಂಡನೆಗಳಲ್ಲಿ ಮೂಲ ಶಿಕ್ಷಣದಲ್ಲಿ ಗಣಿತದ ಮಹತ್ವ, ದೈನಂದಿನ ಚಟುವಟಿಕೆಗಳಲ್ಲಿ ಗಣಿತ ಬೆರೆತಿರುವ ಬಗ್ಗೆ ತಿಳಿಸಿದರು.

ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಚನ್ನಪಟ್ಟಣ, ಗುಂಡ್ಲುಪೇಟೆ, ಮಂಡ್ಯ ವಿಶ್ವವಿದ್ಯಾಲಯ ಮಂಡ್ಯ ಹಾಗೂ ಇನ್ನಿತರೆ ಜಿಲ್ಲೆಗಳಿಂದ ಪ್ರಾಧ್ಯಾಪಕರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಆಯೋಜಕರಾಗಿ ಕಾಲೇಜಿನ ಪ್ರಾಂಶುಪಾಲರಾದ ಡಾ. ಗುರುರಾಜ್ ಪ್ರಭು, ಗೆಜೆಟೆಡ್ ಮ್ಯಾನೇಜರ್ ರವಿಕಿರಣ್ , ರೂಸ ಸಂಚಾಲಕರಾದ ಡಾ. ಮಂಗಳಮ್ಮ, ಗಣಿತಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಜ್ಯೋತಿ, ಹಾಗೂ ಪ್ರವೀಣ್ ಕುಮಾರ್, ಬಿಂದು ಭಾಗವಸಿದ್ದರು.

ಇಂದು ಜನಪದ ಗೀತೆಗಳ ತರಬೇತಿ ಕಾರ್ಯಾಗಾರ

ಮಂಡ್ಯ:

ನಗರದ ಮಹಿಳಾ ಸರ್ಕಾರಿ ಕಾಲೇಜಿನ ಮೌಲ್ಯ ಮಾಪನ ಕೊಠಡಿಯಲ್ಲಿ ಫೆ.28 ರಂದು ಜನಪದ ಗೀತೆಗಳ ತರಬೇತಿ ಕಾರ್ಯಾಗಾರವನ್ನು ಆಯೋಜಿಸಲಾಗಿದೆ. ಮಹಿಳಾ ಸರ್ಕಾರಿ ಕಾಲೇಜು ಕನ್ನಡ ವಿಭಾಗ, ಕಲರವ ಸಾಂಸ್ಕೃತಿಕ ಮತ್ತು ಸಾಮಾಜಿಕ ಟ್ರಸ್ಟ್ ಸಹಯೋಗದಲ್ಲಿ ನಡೆಯುವ ಕಾರ್ಯಾಗಾರವನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕ ಡಾ.ಬಿ.ವಿ.ನಂದೀಶ್ ಉದ್ಘಾಟಿಸುವರು. ಕಾಲೇಜು ಪ್ರಾಂಶುಪಾಲ ಡಾ.ಗುರುರಾಜ್ ಪ್ರಭು ಕೆ ಅಧ್ಯಕ್ಷತೆ ವಹಿಸುವರು. ಜನಪದ ಅಕಾಶವಾಣಿ ಕಲಾವಿದರಾದ ಡಾ.ಪಿ.ಸೋಮಶೇಖರ್ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸುವರು.

ಅತಿಥಿಗಳಾಗಿ ಕನ್ನಡ ವಿಭಾಗದ ಮುಖ್ಯಸ್ಥ ಡಾ.ಕೆ.ಚಂದ್ರಕಾಂತ್, ಜಾನಪದ ಅಕಾಡೆಮಿ ಸದಸ್ಯ ಸಿ.ಎಸ್.ಮಂಜೇಶ್ ಚನ್ನಾಪುರ, ರಂಗಭೂಮಿ ಕಲಾವಿ ಮುರುಗೇಶ್, ಸಹ ಪ್ರಾಧ್ಯಾಪಕರಾದ ಎಸ್.ಬಿ.ಡಾ.ಜ್ಯೋತಿ, ಡಾ.ಶಿವಕೀರ್ತಿ, ಡಾ.ನಿಂಗರಾಜು ಎಚ್.ಎಸ್, ಸಿ.ಅಶೋಕ್ , ರಘು, ಕಲರವ ಟ್ರಸ್ಟ್ ಅಧ್ಯಕ್ಷ ಎಂ.ಪಿ.ಸುಮಂತ, ಪ್ರಧಾನ ಕಾರ್ಯದರ್ಶಿ ಕೆ.ವಿ.ಪ್ರತಾಪ್ ಭಾಗವಹಿಸುವರು.

PREV

Recommended Stories

ಲಕ್ಷ್ಮಿ ಹಬ್ಬದ ಸಂದರ್ಭದಲ್ಲಿ ಗೃಹಲಕ್ಷ್ಮೀ ಯರಿಗೆ ಇಲ್ಲಿದೆ ಸಿಹಿ ಸುದ್ದಿ
''ಪ್ರಜ್ವಲ್‌ ಬಚಾವ್‌ಗೆ ಆತನ ಪೋಷಕರು ತಂತ್ರ ಮಾಡಿದ್ರು ''