ಪ್ರಜ್ವಲ್ , ಪ್ರೀತಂ ಭೇಟಿಗೆ ನನ್ನ ಮಧ್ಯಸ್ಥಿಕೆ ಅಗತ್ಯ ಏನಿದೆ?

KannadaprabhaNewsNetwork |  
Published : Apr 08, 2024, 01:01 AM IST
34 | Kannada Prabha

ಸಾರಾಂಶ

ಹಾಸನದಲ್ಲಿ ಮೈತ್ರಿಯಲ್ಲಿ ಯಾವುದೇ ಸಮಸ್ಯೆ ಇಲ್ಲ. ನಿನ್ನೆಯು ಹಾಸನಕ್ಕೆ ಹೋಗಿದ್ದೆ. ಅಲ್ಲಿ ಯಾವುದೇ ಸಮಸ್ಯೆ ಕಾಣಲಿಲ್ಲ. ಎಲ್ಲರೂ ಉತ್ತಮವಾಗಿ ಕೆಲಸ ಮಾಡುತ್ತಿದ್ದಾರೆ. ಜೆಡಿಎಸ್ ನವರಿಗಿಂತಲೂ ಬಿಜೆಪಿ ಕಾರ್ಯಕರ್ತರು ಉತ್ತಮ ಕೆಲಸ ಮಾಡುತ್ತಿದ್ದಾರೆ

ಕನ್ನಡಪ್ರಭ ವಾರ್ತೆ ಮೈಸೂರು

ಪ್ರಜ್ವಲ್ ರೇವಣ್ಣ, ಪ್ರೀತಂಗೌಡ ನಡುವೆ ಉತ್ತಮ ಸಂಬಂಧವಿದೆ. ಇಬ್ಬರ ಭೇಟಿಗೆ ನನ್ನ ಮಧ್ಯಸ್ಥಿಕೆ ಅಗತ್ಯ ಏನಿದೆ ಎಂದು ಬಿಜೆಪಿ ರಾಜ್ಯ ಚುನಾವಣಾ ಉಸ್ತುವಾರಿ ರಾಧಾಮೋಹನ್ ದಾಸ್ ಅಗರವಾಲ್ ಪ್ರಶ್ನಿಸಿದರು.

ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜನ ಏನಾದರೂ ಮಾತನಾಡಿಕೊಳ್ಳಲಿ. ಇಬ್ಬರ ನಡುವೆ ಯಾವುದೇ ಭಿನ್ನಾಭಿಪ್ರಾಯ ಇಲ್ಲ. ನಿನ್ನೆ ನಾನೂ ಹಾಸನದಲ್ಲಿದ್ದೆ. ಸುಮಾರು 2 ಗಂಟೆ ಪ್ರಜ್ವಲ್ ರೇವಣ್ಣ ಜೊತೆ ಮಾತನಾಡಿದೆ. ನನ್ನೊಂದಿಗೆ ಯಾವುದೇ ದೂರು ಹೇಳಲಿಲ್ಲ. ನನ್ನ ಉಪಸ್ಥಿತಿಯಲ್ಲೇ ಸುದ್ದಿಗೋಷ್ಠಿ ಕೂಡ ಮಾಡಿದ್ರು. ಇಬ್ಬರ ನಡುವೆ ಗೊಂದಲ ಇದೆ ಅಂತ ನನಗೆ ಅನ್ನಿಸುತ್ತಿಲ್ಲ. ಯಾಕೆ ಏನೋ ಆಗಿದೆ ಅನ್ನುವ ರೀತಿ ಭಾವಿಸುತ್ತೀರಿ ಎಂದರು.

ಹಾಸನದಲ್ಲಿ ಪ್ರೀತಂಗೌಡ ಸೋತಿದ್ದರೂ ಪವರ್‌ ಫುಲ್ ಲೀಡರ್. ಅವರಿಗೆ ಹಾಸನ ಒಗ್ಗೂಡಿಸಲು ಒಂದು ದಿನ ಸಾಕು. ಈಗಾಗಲೇ ಆ ಕೆಲಸವನ್ನು ಮಾಡುತ್ತಿದ್ದಾರೆ ಎಂದು ಅವರು ಹೇಳಿದರು.

ಹಾಸನದಲ್ಲಿ ಮೈತ್ರಿ ಸಮಸ್ಯೆ ಇಲ್ಲ

ಹಾಸನದಲ್ಲಿ ಮೈತ್ರಿಯಲ್ಲಿ ಯಾವುದೇ ಸಮಸ್ಯೆ ಇಲ್ಲ. ನಿನ್ನೆಯು ಹಾಸನಕ್ಕೆ ಹೋಗಿದ್ದೆ. ಅಲ್ಲಿ ಯಾವುದೇ ಸಮಸ್ಯೆ ಕಾಣಲಿಲ್ಲ. ಎಲ್ಲರೂ ಉತ್ತಮವಾಗಿ ಕೆಲಸ ಮಾಡುತ್ತಿದ್ದಾರೆ. ಜೆಡಿಎಸ್ ನವರಿಗಿಂತಲೂ ಬಿಜೆಪಿ ಕಾರ್ಯಕರ್ತರು ಉತ್ತಮ ಕೆಲಸ ಮಾಡುತ್ತಿದ್ದಾರೆ ಎಂದರು.

ಪ್ರೀತಮ್ ಗೌಡ ಅವರ ಬೆಂಬಲಿಗರು ಕೆಲಸ ಮಾಡುತ್ತಿದ್ದಾರೆ. ಅವಶ್ಯಕತೆ ಬಿದ್ದರೆ ಅವರು ಹಾಸನಕ್ಕೆ ಹೋಗುತ್ತಾರೆ. ನಾನು ಉತ್ತರಪ್ರದೇಶದವನು. ಅಲ್ಲಿಯೂ ಚುನಾವಣೆ ನಡೆಯುತ್ತಿದೆ. ಆದರೆ, ನಾನು ಕರ್ನಾಟಕ ಉಸ್ತುವಾರಿ ಆಗಿದ್ದೇನೆ. ಅದೇ ರೀತಿ ಪ್ರೀತಮ್‌ ಮೈಸೂರು, ಚಾಮರಾಜನಗರ ಉಸ್ತುವಾರಿ ಆಗಿದ್ದಾರೆ. ಯಾವಾಗಲು ಅಲ್ಲಿಗೆ ಹೋಗಲು ಸಾಧ್ಯವಿಲ್ಲ ಎಂದು ಅವರು ತಿಳಿಸಿದರು.

ಪ್ರಜ್ವಲ್ ರೇವಣ್ಣ ನಿನ್ನೆ ಎರಡು ಗಂಟೆ ಜೊತೆಗಿದ್ದರು. ಅವರು ಪ್ರೀತಮ್ ಬಗ್ಗೆ ಕಾರ್ಯಕರ್ತರ ಬಗ್ಗೆ ಏನನ್ನು ಹೇಳಿಲ್ಲ. ಪ್ರೀತಮ್ ಪ್ರಜ್ವಲ್ ಮೀಟಿಂಗ್ ಬಗ್ಗೆ ಮಾಹಿತಿ ಇಲ್ಲ, ಯಾವ ಸಭೆಯು ಇಲ್ಲ. ಯಾವುದೇ ಸಮಸ್ಯೆ ಇಲ್ಲ. ಪ್ರೀತಮ್ ಗೌಡ ಹಾಸನದಲ್ಲಿ ಸೋತಿರಬಹುದು. ಆದರೆ, ಜೆಡಿಎಸ್ ಎಂಎಲ್ಎ ಗಿಂತ ಪಾಪ್ಯುಲರ್ ವ್ಯಕ್ತಿ. ಜನರು ಏನಾದ್ರು ಮಾತನಾಡಲಿ, ಹಾಸನದಲ್ಲಿ ಯಾವುದೇ ಸಮಸ್ಯೆ ಇಲ್ಲ ಎಂದರು.

PREV

Recommended Stories

ಸಾಂಬ್ರಾ ವಿಮಾನ ನಿಲ್ದಾಣದವರೆಗೆ ಚತುಷ್ಪಥ ರಸ್ತೆ
ಮುಷ್ಕರಕ್ಕೆ ನೌಕರರಿಂದ ಮಿಶ್ರ ಪ್ರತಿಕ್ರಿಯೆ