ಶಿವಾನಂದ ಪಿ.ಮಹಾಬಲಶೆಟ್ಟಿ
ನೂತನವಾಗಿ ರಚನೆಯಾದ ತಾಲೂಕುಗಳಿಗೆ ತಲಾ ₹8.6 ಕೋಟಿ ವೆಚ್ಚದಲ್ಲಿ ಪ್ರಜಾಸೌಧ ನಿರ್ಮಾಣಕ್ಕೆ ಸಚಿವ ಎಚ್.ಕೆ.ಪಾಟೀಲ ಅನುಮೋದನೆ ನೀಡಿದ್ರೂ, ರಬಕವಿ-ಬನಹಟ್ಟಿ ತಾಲೂಕಿನ ಪ್ರಜಾಸೌಧ ಕಟ್ಟಡ ನಿರ್ಮಾಣಕ್ಕೆ ಅಗತ್ಯ ಜಾಗ ಗುರುತಿಸುವುದೇ ತಲೆನೋವಾಗಿದೆ.
2025, ಜೂ.9ರಂದು ರಬಕವಿ ಹೊಸ ಬಸ್‌ನಿಲ್ದಾಣದ ಪಕ್ಕದ ಜಿಎಲ್‌ಬಿಸಿ ಹಿಂಬದಿಯ ೩ ಎಕರೆ ೧೮ ಗುಂಟೆ ಜಾಗ ಪರಿಶೀಲಿಸಿದ ಅಧಿಕಾರಿಗಳು ಜಿಲ್ಲಾಧಿಕಾರಿಗೆ ಸಲ್ಲಿಸಿದ್ದರು. ತಾಲೂಕು ಕೆಡಿಪಿ ಸಭೆಯಲ್ಲಿ ತಹಸೀಲ್ದಾರ್ ಗಿರೀಶ ಸ್ವಾದಿಯವರು ತಮ್ಮ ಜೊತೆ ಚರ್ಚಿಸದೇ ವರದಿ ಸಲ್ಲಿಸಿದ್ದಕ್ಕೆ ಶಾಸಕ ಸಿದ್ದು ಸವದಿ ಅಸಮಾಧಾನ ವ್ಯಕ್ತಪಡಿಸಿದ್ದರು. ಬನಹಟ್ಟಿ ಜನತೆಯೂ ಪ್ರಜಾಸೌಧ ತಮಗೆ ಬೇಕೆಂದು ಬೇಡಿಕೆ ಇಟ್ಟಿದ್ದು, ಎರಡೂ ನಗರಗಳ ಧುರೀಣರು ಪರಸ್ಪರ ಒಪ್ಪಿ ಸಮ್ಮತಿ ನೀಡುವವರೆಗೆ ಕಾಯಲೇಬೇಕಿದೆ.ಜು.೨೨ರಂದು ಬಾಗಲಕೋಟೆ ಜಿಲ್ಲಾಧಿಕಾರಿ ಸಂಗಪ್ಪ ಅವರು ಖುದ್ದು ಸ್ಥಳ ಪರಿಶೀಲನೆಗೆ ಆಗಮಿಸಿ, ಈ ಮೊದಲು ಗುರುತಿಸಿದ್ದ ಗುರುದೇವ ಬ್ರಹ್ಮಾನಂದ ಆಶ್ರಮದ ಎದುರಿನ ಜಾಗ ಸೇರಿದಂತೆ ಬಸ್ ನಿಲ್ದಾಣದ ಪಕ್ಕದ ಜಾಗ ವೀಕ್ಷಿಸಿದರು. ಆದರೆ ಕೆಲವರ ಸ್ವಾರ್ಥದಿಂದಾಗಿ ಬಸ್ ನಿಲ್ದಾಣದ ಪಕ್ಕದ ಜಾಗ ಬಿಟ್ಟು ಮೊದಲಿದ್ದ ಜಾಗದಲ್ಲೇ ಪ್ರಜಾಸೌಧ ನಿರ್ಮಿಸಲು ಕೃಪಾಪೋಷಿತ ಮಂಡಳಿಯು ₹3 ಕೋಟಿ ಮೊತ್ತವನ್ನು ನಗರಾಭಿವೃದ್ಧಿ ಇಲಾಖೆಗೆ ಭರಣಾ ಮಾಡಬೇಕಿದೆ ಎಂದಿದೆ. ಇದು ಜಾಗ ನಿಖರತೆ ತೊಡಕಾಗಿದೆ. ಈ ಮೊದಲಿನ ಜಾಗವು ನ್ಯಾಯಾಲಯದಲ್ಲಿದ್ದು, ಅದನ್ನೇ ನೆಪವಾಗಿಟ್ಟುಕೊಂಡು ಜನಪ್ರತಿನಿಧಿಗಳು ವೃಥಾ ೭ ವರ್ಷಗಳಿಂದ ಕಾಲಹರಣ ಮಾಡುತ್ತಿರುವುದು ಜನತೆ ಆಕ್ರೋಶಕ್ಕೆ ಕಾರಣವಾಗಿದೆ.
ಬಸ್ ನಿಲ್ದಾಣ ಹತ್ತಿರವೇ ನಿರ್ಮಿಸಲು ಜನತೆ ಆಗ್ರಹ:
ಭೂಪ್ರದೇಶ ಗುರುತಿಸದೆ ಕಾಲಹರಣದಲ್ಲಿರುವ ತಾಲೂಕು ಆಡಳಿತ ಶೀಘ್ರ ಪ್ರಸ್ತಾವ ಸಲ್ಲಿಸಿದ್ದಲ್ಲಿ ಪ್ರಜಾಸೌಧ ಕಟ್ಟಡ ನಿರ್ಮಾಣವಾಗುವ ಸಾಧ್ಯತೆಯಿದೆ. ಇಲ್ಲವಾದಲ್ಲಿ ನ್ಯಾಯಾಲಯದ ಪ್ರಕರಣದ ನೆಪದಲ್ಲಿ ಮೀನಮೇಷ ಎಣಿಸಿದರೆ ಇನ್ನೂ ದಶಕಗಳೇ ಬೇಕಾಗುವ ಅನಿವಾರ್ಯತೆ ಇದೆ. ಜನಪ್ರತಿನಿಧಿಗಳು, ಶಾಸಕ ಸಿದ್ದು ಸವದಿ ಪ್ರಬಲ ಇಚ್ಛಾಶಕ್ತಿ ತೋರಿದರೆ ತಾಲೂಕಿನ ಹೃದಯ ಭಾಗವಾಗಿರುವ ರಬಕವಿ ಜಿಎಲ್‌ಬಿಸಿ ಜಾಗದಲ್ಲಿ ಪ್ರಜಾಸೌಧ ನಿರ್ಮಾಣ ಸುಲಭಸಾಧ್ಯ. ಬಸ್ ನಿಲ್ದಾಣದ ಪಕ್ಕದ ಜಾಗದಲ್ಲಿ ಪ್ರಜಾಸೌಧ ನಿರ್ಮಾಣವಾದರೆ ತುಂಬಾ ಅನುಕೂಲ ಎಂದು ನಾಗರಿಕರ ಅಭಿಪ್ರಾಯವಾಗಿದೆ.
ಸಂಗಪ್ಪ. ಜಿಲ್ಲಾಧಿಕಾರಿ ಬಾಗಲಕೋಟೆ
ಸಿದ್ದು ಸವದಿ, ಶಾಸಕ, ತೇರದಾಳ.
ಗಿರೀಶ ಸ್ವಾದಿ, ತಹಸೀಲ್ದಾರ್ ರಬಕವಿ-ಬನಹಟ್ಟಿ.
ಬಸವರಾಜ ಗುಡೋಡಗಿ, ನಗರಸಭೆ ಸದಸ್ಯರು, ಕಾಂಗ್ರೆಸ್ ಮುಖಂಡರು ರಬಕವಿ
ರಬಕವಿ ಬಸ್‌ನಿಲ್ದಾಣದ ಪಕ್ಕದ ಜಿಎಲ್‌ಬಿಸಿ ಜಾಗೆಯಲ್ಲಿ ಪ್ರಜಾಸೌಧ ನಿರ್ಮಾಣಗೊಂಡಲ್ಲಿ ತಾಲೂಕಿನ ಕೇಂದ್ರ ಸ್ಥಳವಾದ್ದರಿಂದ ಮತ್ತು ಬಸ್ ಇಳಿದ ತಕ್ಷಣ ಪಕ್ಕದ ವೃದ್ಧರು, ಅಂಗವಿಕಲರು, ಮಹಿಳೆಯರು ಪ್ರಜಾಸೌಧಕ್ಕೆ ಸರಾಗವಾಗಿ ತೆರಳಿ ತಮ್ಮ ಕೆಲಸ ಮಾಡಿಕೊಳ್ಳಲು ಅನುಕೂಲವಾಗಲಿದೆ. ಬೇರೆ ಪ್ರದೇಶವಾದರೆ ಸಂಚಾರಕ್ಕೆ ವೃಥಾ ಹಣ ವ್ಯಯವಾಗುವುದರಿಂದ ಬಸ್‌ನಿಲ್ದಾಣದ ಬಳಿ ಇರುವ ಜಾಗೆಯಲ್ಲೇ ತಾಲೂಕು ಕಚೇರಿ ಆರಂಭಿಸಬೇಕು.ನಾಗಪ್ಪ ಮಲೋಡಿ. ರೈತ ಸಂಘದ ಧುರೀಣರು, ರಬಕವಿ