ಸಂಸ್ಕಾರದ ಕೊರತೆ ಉಂಟಾದಾಗ ಬೆಳೆಸುವ ಸತ್ಕಾರ್ಯವಾಗಲಿ: ಎಂ. ವೆಂಕಟೇಶಕುಮಾರ

KannadaprabhaNewsNetwork |  
Published : Mar 09, 2026, 02:15 AM IST
8ಡಿಡಬ್ಲೂಡಿ5ಶಿವರತ್ನ ಕಂಫರ್ಟ್ಸ್ ಹಾಲ್‌ನಲ್ಲಿ ಜರುಗಿದ ಸಮಾರಂಭದಲ್ಲಿ ಲೇಖಕ ಸುರೇಶ ಗುದಗನವರ ಅವರ ಸಂಗೀತ ಯಾನ ಮತ್ತು ಹೆಜ್ಜೆ ಗುರುತು ಕೃತಿಗಳನ್ನು ಲೋಕಾರ್ಪಣೆ.  | Kannada Prabha

ಸಾರಾಂಶ

ಯುವಕರಲ್ಲಿ ಸಂಸ್ಕಾರದ ಕೊರತೆ ಉಂಟಾದಾಗ ಅದನ್ನು ಬೆಳೆಸುವ ಸತ್ಕಾರ್ಯ ಸಂಸ್ಕಾರ ಭಾರತಿ ಮಾಡುತ್ತಲಿದೆ ಎಂದು ಖ್ಯಾತ ಹಿಂದೂಸ್ಥಾನಿ ಗಾಯಕ ಪದ್ಮಶ್ರೀ ಪಂ. ಎಂ. ವೆಂಕಟೇಶಕುಮಾರ ಹೇಳಿದರು.

ಧಾರವಾಡ: ಯುವಕರಲ್ಲಿ ಸಂಸ್ಕಾರದ ಕೊರತೆ ಉಂಟಾದಾಗ ಅದನ್ನು ಬೆಳೆಸುವ ಸತ್ಕಾರ್ಯ ಸಂಸ್ಕಾರ ಭಾರತಿ ಮಾಡುತ್ತಲಿದೆ ಎಂದು ಖ್ಯಾತ ಹಿಂದೂಸ್ಥಾನಿ ಗಾಯಕ ಪದ್ಮಶ್ರೀ ಪಂ. ಎಂ. ವೆಂಕಟೇಶಕುಮಾರ ಹೇಳಿದರು.

ನಗರದ ಶಿವರತ್ನ ಕಂಫರ್ಟ್ಸ್ ಹಾಲ್‌ನಲ್ಲಿ ಜರುಗಿದ ಸಮಾರಂಭದಲ್ಲಿ ಲೇಖಕ ಸುರೇಶ ಗುದಗನವರ ಅವರ ಸಂಗೀತ ಯಾನ ಮತ್ತು ಹೆಜ್ಜೆ ಗುರುತು ಕೃತಿಗಳನ್ನು ಲೋಕಾರ್ಪಣೆಗೊಳಿಸಿದ ಅವರು, ಅತ್ಯಮೂಲ್ಯ ಕೃತಿಗಳನ್ನು ಸಂಸ್ಕಾರ ಭಾರತಿಯಿಂದ ಬಿಡುಗಡೆಗೊಳಿಸುವ ಮೂಲಕ ಯುವಪೀಳಿಗೆಯಲ್ಲಿ ಸಂಸ್ಕೃತಿಯನ್ನು ಸಂರಕ್ಷಿಸುವಲ್ಲಿ ಶ್ರಮಿಸುತ್ತಿದೆ ಎಂದರು.

ಸಂಗೀತ ಯಾನ ಕೃತಿಯನ್ನು ಪರಿಚಯಿಸಿದ ಸಂಸ್ಕಾರ ಭಾರತಿ ಕರ್ನಾಟಕ ಉತ್ತರ ಪ್ರಧಾನ ಕಾರ್ಯದರ್ಶಿ ಡಾ. ಶಶಿಧರ ನರೇಂದ್ರ, ಸಂಗೀತ ಸಾಧಕರ ಯಾನದಲ್ಲಿ ಆಯಾ ಕಾಲದ ಜ್ಞಾನ ಮತ್ತು ಪರಂಪರೆಯನ್ನು ಪ್ರಸ್ತುತ ಸಮಾಜಕ್ಕೆ ಮತ್ತು ಮುಂದಿನ ಪೀಳಿಗೆಗೆ ಪರಿಚಯಿಸುವ ಗುರುತರವಾದ ಜವಾಬ್ದಾರಿಯನ್ನು ಸುರೇಶ ಗುದಗನವರ ನಿಷ್ಠೆಯಿಂದ ಮಾಡಿದ್ದಾರೆ ಎಂದರು.

ಹಿರಿಯ ಸಾಹಿತಿ ಡಾ. ಪಿ.ಜಿ. ಕೆಂಪಣ್ಣವರ ಹೆಜ್ಜೆ ಗುರುತು ಕೃತಿಯನ್ನು ಪರಿಚಯಿಸಿದರು. ನೋವಿನಲ್ಲೂ ನಲಿವನ್ನು ಕಂಡ ಮಹಿಳಾ ಸಾಧಕಿಯರ ಅಪೂರ್ವ ಅರವತ್ತು ಚಿತ್ರಣಗಳು ನಿಜಕ್ಕೂ ಇಂದಿನ ಯುವ ಸಮುದಾಯಕ್ಕೆ ಮಾರ್ಗದರ್ಶಿ ಎಂದರು.

ಮುಖ್ಯ ಅತಿಥಿಯಾಗಿ ಉದ್ಯಮಿ ಶಿವಶಂಕರ ಕೆಂಗಾನೂರ, ಸಂಸ್ಕಾರ ಭಾರತಿ ಅಧ್ಯಕ್ಷೆ ಡಾ. ಸೌಭಾಗ್ಯ ಕುಲಕರ್ಣಿ ಮತ್ತು ಲೇಖಕ ಸುರೇಶ ಗುದಗನವರ ಮಾತನಾಡಿದರು.ಕರ್ನಾಟಕ ಮಾಧ್ಯಮ ಅಕಾಡಮಿ ಪ್ರಶಸ್ತಿ ಪುರಸ್ಕೃತ ಗುರುರಾಜ ಜಮಖಂಡಿ ಮತ್ತು ಕರ್ನಾಟಕ ಕಲಾಶ್ರೀ ಪ್ರಶಸ್ತಿಗೆ ಆಯ್ಕೆಯಾದ ಡಾ. ಮೃತ್ಯುಂಜಯ ಶೆಟ್ಟರ್ ಅವರನ್ನು ಸನ್ಮಾನಿಸಲಾಯಿತು.

ಡಾ. ಅರ್ಚನಾ ಪತ್ತಾರ ಸುತಾರ ಸುಗಮ ಸಂಗೀತ ನಡೆಯಿತು. ತಬಲಾದಲ್ಲಿ ವಿಜಯ ಸುತಾರ ಸಾಥ್ ನೀಡಿದರು. ಡಾ. ಶಾಂತಿನಾಥ ದಿಬ್ಬದ, ಡಾ. ಬಾಳಣ್ಣ ಶೀಗಿಹಳ್ಳಿ, ಡಾ. ರಾಜಶ್ರೀ ಗುದಗನವರ, ಪ್ರಕಾಶ ಬಾಳಿಕಾಯಿ ಮತ್ತಿತರುರ ಇದ್ದರು. ಪರಿಮಳಾ ಕಾಗಲಕರ ನಿರೂಪಿಸಿದರು, ಪ್ರಸಾದ ಮಡಿವಾಳರ ಸ್ವಾಗತಿಸಿದರು, ಶಿಲ್ಪಾ ಪಾಂಡೆ ವಂದಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗ್ಯಾರಂಟಿ ಯೋಜನೆಗಳಿಂದ ಬಡತನ ನಿರ್ಮೂಲನೆ: ರಾಜೇಂದ್ರ ರಾಣೆ
ಸಿದ್ಧಾಂತದ ಅಡಿಯಲ್ಲಿ ಪಕ್ಷ ಕಟ್ಟುವುದು ಬಹಳ ಮುಖ್ಯ