ಕಾಂಗ್ರೆಸ್‌ ಬಂದಾಗೆಲ್ಲ ಬರಗಾಲ ಬರುವುದು ಗ್ಯಾರಂಟಿ: ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ

KannadaprabhaNewsNetwork |  
Published : Apr 14, 2024, 01:47 AM IST
೧೩ ಟಿವಿಕೆ ೨ - ತುರುವೇಕೆರೆಯಲ್ಲಿ ನಡೆದ ಬಿಜೆಪಿ ಅಭ್ಯರ್ಥಿಯ ಪರ ಚುನಾವಣಾ ಪ್ರಚಾರದಲ್ಲಿ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದರು. | Kannada Prabha

ಸಾರಾಂಶ

ರಾಜ್ಯದ ಜನರಿಗೆ ನೀಡಿದ ೫ ಗ್ಯಾರಂಟಿಗಳ ಜೊತೆಗೆ ಈ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಲೆಲ್ಲಾ ಬರಗಾಲ ಬರುವುದು ಗ್ಯಾರಂಟಿ ಎಂಬ ಸಂದೇಶವನ್ನು ಈ ಕಾಂಗ್ರೆಸ್ ನೀಡಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ವ್ಯಂಗ್ಯವಾಡಿದ್ದಾರೆ.

ಕನ್ನಡಪ್ರಭ ವಾರ್ತೆ ತುರುವೇಕೆರ ರಾಜ್ಯದ ಜನರಿಗೆ ನೀಡಿದ ೫ ಗ್ಯಾರಂಟಿಗಳ ಜೊತೆಗೆ ಈ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಲೆಲ್ಲಾ ಬರಗಾಲ ಬರುವುದು ಗ್ಯಾರಂಟಿ ಎಂಬ ಸಂದೇಶವನ್ನು ಈ ಕಾಂಗ್ರೆಸ್ ನೀಡಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ವ್ಯಂಗ್ಯವಾಡಿದರು.

ಪಟ್ಟಣದಲ್ಲಿ ವಿ.ಸೋಮಣ್ಣ ಪರ ಮತಯಾಚನೆ ಮಾಡಿದ ಕುಮಾರಸ್ವಾಮಿ, ಇನ್ನು ಏಳೆಂಟು ತಿಂಗಳಿನಲ್ಲಿ ನಿಮ್ಮ ಸರ್ಕಾರ ಬರುತ್ತದೆ. ಅಂದರೆ ರೈತ ಪರ ಸರ್ಕಾರ ಅಧಿಕಾರಕ್ಕೆ ಬರಲಿದೆ ಎಂದು ಭವಿಷ್ಯ ನುಡಿದರು. ನಾನು ನನ್ನ ಪಕ್ಷದ ಉಳಿವಿಗಾಗಿ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡಿಲ್ಲ. ರಾಜ್ಯದ ಜನರ ಹಿತದೃಷ್ಟಇಯಿಂದ ಬಿಜೆಪಿಯೊಂದಿಗೆ ಕೈ ಜೋಡಿಸಿದ್ದೇನೆ. ಮುಂಬರುವ ದಿನಗಳಲ್ಲಿ ದೇಶದ ಪ್ರಧಾನಿಯಾಗಿ ನರೇಂದ್ರ ಮೋದಿಯವರು ಅಧಿಕಾರಕ್ಕೆ ಬರುವುದು ಗ್ಯಾರಂಟಿ. ಆ ಸಂಧರ್ಭದಲ್ಲಿ ಖುದ್ದು ತಾವೇ ಮೋದಿಯವರೊಂದಿಗೆ ಮಾತನಾಡಿ, ರಾಜ್ಯದ ಜನರ ಹಿತ ಕಾಯುವ ಕಾಯಕ ಮಾಡುತ್ತೇವೆ ಎಂದರು.ರೈತರು ಭಿಕ್ಷುಕರಲ್ಲ

ಈ ಕಾಂಗ್ರೆಸ್ ಸರ್ಕಾರ ಬರಗಾಲದ ಪರಿಹಾರವಾಗಿ ಕೇವಲ ೨ ಸಾವಿರ ರು.ಗಳನ್ನು ನೀಡಿದೆ. ಅದೂ ನೂರಕ್ಕೆ ನೂರರಷ್ಟು ಗುರಿ ತಲುಪಿಲ್ಲ. ಆದರೆ ೫ ಗ್ಯಾರಂಟಿಗಳನ್ನು ನೀಡಿದ್ದೇವೆಂದು ಪ್ರಚುರಪಡಿಸಲು ಸುಮಾರು ೩೦೦ ಕೋಟಿ ರು.ಗಳನ್ನು ವ್ಯಯ ಮಾಡಿದ್ದಾರೆ. ಅಂದರೆ ರೈತರಿಗೆ ಕೊಡಲು ಹಣ ಇಲ್ಲ ಎನ್ನುವ ಈ ಸರ್ಕಾರ ಜನರ ತೆರಿಗೆ ಹಣವನ್ನು ಸುಖಾಸುಮ್ಮನೆ ವ್ಯಯ ಮಾಡುತ್ತಿದೆ ಎಂದು ಕಿಡಿಕಾರಿದರು. ನರೇಂದ್ರ ಮೋದಿಯವರು ಪ್ರತಿಯೊಬ್ಬ ರೈತರಿಗೆ ಪ್ರತಿ ವರ್ಷ ೬ ಸಾವಿರ ರು.ಗಳನ್ನು ಕೊಡುವ ಯೋಜನೆ ಜಾರಿಗೆ ತಂದರು. ಬಿ.ಎಸ್.ಯಡಿಯೂರಪ್ಪನವರು ೪ ಸಾವಿರ ರೂಗಳನ್ನು ಹೆಚ್ಚುವರಿ ಮಾಡಿ ಪ್ರತಿಯೊಬ್ಬ ರೈತರಿಗೆ ೧೦ ಸಾವಿರ ರು.ಬರುವಂತೆ ಮಾಡಿದರು. ಆದರೆ ಈ ಸಿದ್ದರಾಮಯ್ಯ ರೈತರಿಗೆ ಕೊಡಲಾಗು ತ್ತಿದ್ದ ೪ ಸಾವಿರ ರು.ಗಳನ್ನು ನಿಲ್ಲಿಸಿ ರೈತರಿಗೆ ದ್ರೋಹ ಎಸಗಿದ್ದಾರೆಂದು ಕಿಡಿಕಾರಿದರು.ಮಹಾನ್ ನಾಯಕ

ಜಿಲ್ಲೆಯ ಪ್ರಮುಖ ವಾಣಿಜ್ಯ ಬೆಳೆಯಾಗಿರುವ ಕೊಬರಿಯ ಪ್ರತಿ ಕ್ವಿಂಟಾಲ್ ಕೊಬರಿಗೆ ೧೫ ಸಾವಿರ ರು.ಗಳ ಸೂಕ್ತ ಬೆಲೆ ಕೊಡಿಸುವ ಭರವಸೆಯನ್ನು ಕನಕಪುರದ ಮಹಾನ್ ನಾಯಕ ಹೇಳಿ ಹೋಗಿದ್ದರು. ಆದರೆ ಅಧಿಕಾರಕ್ಕೆ ಬಂದು ಎಂಟತ್ತು ತಿಂಗಳು ಆಗುತ್ತಾ ಬಂದರೂ ಸಹ ಇದುವರೆಗೂ ಕೊಬರಿ ಬಗ್ಗೆ ಮಾತೇ ಇಲ್ಲ ಎಂದು ಡಿ.ಕೆ.ಶಿವಕುಮಾರ್ ರವರನ್ನು ತಿವಿದರು. ಜೇಬಿಗೆ ಕತ್ತರಿ

೫ ಗ್ಯಾರಂಟಿಗಳ ಹೆಸರಿಗೆ ಜನರು ಮರುಳಾದರು. ನನ್ನ ಪಂಚರತ್ನ ಯೋಜನೆಗೆ ಬೆಲೆ ಇಲ್ಲದಂತಾಯಿತು. ಇತ್ತ ಹೆಂಗಸರಿಗೆ ೨ ಸಾವಿರ ರು.ಖಾತೆಗೆ ಹಾಕುವುದಾಗಿ ಹೇಳಿ ಅತ್ತ ಲಿಕ್ಕರ್ ಬೆಲೆ ಸೇರಿದಂತೆ ದಿನಬಳಕೆಯ ವಸ್ತುಗಳ ಬೆಲೆಯನ್ನು ಹೆಚ್ಚು ಮಾಡಿ ಮಹಿಳೆಯರಿಗೇ ಮೋಸ ಮಾಡಲಾಗಿದೆ. ಅವರ ಮನೆಯ ಯಜಮಾನನ ಜೇಬಿಗೆ ಕತ್ತರಿ ಹಾಕಲಾಗುತ್ತಿದೆ ಎಂದು ಎಚ್.ಡಿ.ಕುಮಾರಸ್ವಾಮಿ ಹೇಳಿದರು. ೨೮ ಸ್ಥಾನಗಳು

ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ೨೮ ಸ್ಥಾನಕ್ಕೆ ಸ್ಥಾನಕ್ಕೆ ೨೮ ಸ್ಥಾನಗಳಲ್ಲೂ ಸಹ ಬಿಜೆಪಿ ಮತ್ತು ಜೆಡಿಎಸ್ ನ ಅಭ್ಯರ್ಥಿಗಳು ಗೆಲ್ಲಲಿದ್ದಾರೆ. ಕಾರಣ ಅಧಿಕಾರಕ್ಕೆ ಬಂದ ಏಟೆಂಟು ತಿಂಗಳಿನಲ್ಲೇ ಕಾಂಗ್ರೆಸ್ ಸರ್ಕಾರ ಜನರ ವಿಶ್ವಾಸ ಕಳೆದುಕೊಂಡಿದೆ. ಈ ಚುನಾವಣೆಯಲ್ಲಿ ಕಾಂಗ್ರೆಸ್ ಗೆ ಜನರು ತಕ್ಕ ಶಾಸ್ತಿ ಮಾಡಲಿದ್ದಾರೆಂದು ಕುಮಾರಸ್ವಾಮಿ ಹೇಳಿದರು. ೨ ಲಕ್ಷ ಲೀಡ್ -

ವಿ.ಸೋಮಣ್ಣನವರು ಸುಮಾರು ೨ ಲಕ್ಷಕ್ಕೂ ಹೆಚ್ಚು ಅಂತರದಿಂದ ಗೆಲುವು ಸಾಧಿಸುವಲ್ಲಿ ಅನುಮಾನವೇ ಇಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದರು. ಈಗಾಗಲೇ ರಾಜ್ಯದ ಕಾಂಗ್ರೆಸ್ ಸರ್ಕಾರ ಜನರಿಂದ ದೂರವಾಗಿದೆ. ಜನರಿಗೆ ಈ ಸರ್ಕಾರವನ್ನು ಕಿತ್ತೊಗೆಯುವ ತನಕ ಸಮಾಧಾನವಿಲ್ಲ. ರಾಜ್ಯದ ಜನರ ಮಧ್ಯೆ, ಜಾತಿ ಜಾತಿಗಳ ಮಧ್ಯೆ ವಿಷಬೀಜ ಬಿತ್ತು ಕೆಲಸವನ್ನು ಕಾಂಗ್ರೆಸ್ ಸರ್ಕಾರ ಮಾಡುತ್ತಿದೆ. ಈ ಸರ್ಕಾರದಲ್ಲಿ ಯಾರೂ ನೆಮ್ಮದಿಯಾಗಿಲ್ಲ. ಗ್ಯಾರಂಟಿ ಹೆಸರಿನಲ್ಲಿ ಜನರನ್ನು ಲೂಟಿ ಮಾಡಲಾಗುತ್ತಿದೆ. ಎಲ್ಲಾ ವಸ್ತುಗಳ ಬೆಲೆ ಗಗನಕ್ಕೇರಿದೆ. ರೈತರಿಗೆ ಹೈನುಗಾರಿಕೆಗೆ ನೀಡಲಾಗುತ್ತಿದ್ದ ಪ್ರೋತ್ಸಾಹ ಧನವನ್ನು ನೀಡಲಾಗಿಲ್ಲ. ಸುಮಾರು ೬೫೦ ಕೋಟಿ ಹಣವನ್ನು ಇನ್ನೂ ಈ ಸರ್ಕಾರ ಬಿಡುಗಡೆ ಮಾಡದೇ ರೈತರಿಗೆ ವಂಚಿಸಿದೆ ಎಂದು ಆರೋಪಿಸಿದರು. ಈ ಸಂದರ್ಭದಲ್ಲಿ ಶಾಸಕ ಎಂ.ಟಿ.ಕೃಷ್ಣಪ್ಪ, ಮಾಜಿ ಶಾಸಕ ಮಸಾಲಾ ಜಯರಾಮ್, ಬಿಜೆಪಿಯ ಅಭ್ಯರ್ಥಿ ವಿ.ಸೋಮಣ್ಣ, ರಾಜ್ಯಸಭಾ ಸದಸ್ಯ ಜಗ್ಗೇಶ್ ಮಾತನಾಡಿದರು. ತಾಲೂಕಿನ ಹಾವಾಳ ಗ್ರಾಮದಿಂದ ಬೃಹತ್ ಮೆರವಣಿಗೆ ಏರ್ಪಡಿಸಲಾಗಿತ್ತು. ಸಹಸ್ರಾರು ಬಿಜೆಪಿ ಮತ್ತು ಜೆಡಿಎಸ್ ಕಾರ್ಯಕರ್ತರು ಭಾಗವಹಿಸಿದ್ದರು. ಈ ಸಂಧರ್ಭದಲ್ಲಿ ಮುಖಂಡರುಗಳಾದ ಎಂ.ಡಿ.ಲಕ್ಷ್ಮೀನಾರಾಯಣ್, ಜಿಲ್ಲಾ ಬಿಜೆಪಿ ಅಧ್ಯಕ್ಷ ಹೆಬ್ಬಾಕಾ ರವಿ, ರಾಜ್ಯ ಯುವ ಜೆಡಿಎಸ್ ನ ಪ್ರಧಾನ ಕಾರ್ಯದರ್ಶಿ ದೊಡ್ಡಾಘಟ್ಟ ಚಂದ್ರೇಶ್ ಸೇರಿದಂತೆ ಹಲವಾರು ಮುಖಂಡರು ಭಾಗವಹಿಸಿದ್ದರು.

PREV

Recommended Stories

ಸರ್ಕಾರಿ ಶಾಲೆ ಕುಡಿವ ನೀರಿಗೆ ವಿಷ ಬೆರೆಸಿದ್ದಕ್ಕೆ ಸಿಎಂ ಗರಂ
ಡಾ.ರಾಜ್‌ಕುಮಾರ್‌ರ ನೆಚ್ಚಿನ ಸಹೋದರಿ ನಾಗಮ್ಮ ನಿಧನ