ಕನ್ನಡಪ್ರಭ ವಾರ್ತೆ ಬೀದರ್
ನಗರದ ಬಸವೇಶ್ವರ ವೃತ್ತದ ಬಳಿ ಬಿಜೆಪಿ, ಜೆಡಿಎಸ್ ಹಾಗೂ ಇನ್ನಿತರ ಸಂಘಟನೆಗಳಿಂದ ನೇಹಾ ಹತ್ಯೆ ಖಂಡಿಸಿ ನಡೆಸಿದ ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ತನ್ನಷ್ಟಕ್ಕೆ ತಾನು ವೀರಶೈವ ಮಹಾಸಭಾ ಪ್ರಮುಖರೆಂದು ಹೇಳಿಕೊಳ್ಳುವ ಸಚಿವ ಈಶ್ವರ ಖಂಡ್ರೆ ಮುಂದೆ ಬರಬೇಕಾಗಿತ್ತು. ಘಟನೆ ಕುರಿತು ಇಲ್ಲಿಯವರೆಗೆ ಖಂಡಿಸದೆ ಇರುವುದು ದುರ್ದೈವದ ಸಂಗತಿಯಾಗಿದೆ ಎಂದರು.
ಈಶ್ವರ ಖಂಡ್ರೆ ಅವರು ರಾಜಕೀಯ ಬಿಟ್ಟು ಸಮಾಜದ ಉದ್ಧಾರಕ್ಕಾಗಿ ಮುಂದೆ ಬರಲಿ ಇಂತಹ ಢೋಂಗಿತನಕ್ಕೆ ಜನರು ಒಪ್ಪಲ್ಲ. ಕಳೆದ 10 ತಿಂಗಳಿನಲ್ಲಿ ಕಾನೂನು ಸುವ್ಯವಸ್ಥೆ ಬಹುವಾಗಿ ಹದೆಗೆಟ್ಟಿದೆ. ಹಾಡು ಹಗಲೇ ಕಗ್ಗೊಲೆ, ಬಾಂಬ್ ಸ್ಫೋಟದ ಘಟನೆಗಳು ನಡೆಯುತ್ತಿವೆ. ಹಾಡುಹಗಲೇ ಕೊಲೆ ಮಾಡಲು ಆರೋಪಿ ಫಯಾಜ್‌ಗೆ ಧೈರ್ಯ ಬರಲು ಕಾಂಗ್ರೆಸ್ ಸರ್ಕಾರವೇ ಕಾರಣ. ಸಿಎಂ ಹಾಗೂ ಡಿಸಿಎಂಗೆ ಛಿಮಾರಿ ಹಾಕಬೇಕು ಎಂದ ಅವರು ಈಗಾಗಲೇ ಫಯಾಜ್‌ನನ್ನು ಬಂಧಿಸಲಾಗಿದೆ. ಆದರೆ ಉಳಿದವರನ್ನು ಬಂಧಿಸುವ ಶಕ್ತಿ ಸರ್ಕಾರಕ್ಕೆ ಇಲ್ಲ ಎಂದು ಆರೋಪಿಸಿದರು.ಬಿಜೆಪಿ ಜಿಲ್ಲಾಧ್ಯಕ್ಷ ಸೋಮನಾಥ ಪಾಟೀಲ್ ಮಾತನಾಡಿ, ಉತ್ತರ ಪ್ರದೇಶದ ಬುಲ್ಡೋಜರ್ ಬಾಬಾ ಮಾದರಿಯಾಗಿ ಮಾಡಲಿ ಇಂತಹ ಘಟನೆಗಳಿಗೆ ಕಡಿವಾಣ ಬೀಳಲಿದೆ ಎಂದರು.
ಶಾಸಕ ಡಾ. ಸಿದ್ದು ಪಾಟೀಲ್ ಮಾತನಾಡಿ, ಸೌದಿ ಅರಬ್ ದೇಶದಲ್ಲಿ ಇರುವಂತಹ ಕಾನೂನು ನಮ್ಮ ದೇಶದಲ್ಲಿಯೂ ಕೂಡ ಜಾರಿಗೆ ತರಬೇಕು. ಅನೇಕ ಕಡೆಗಳಲ್ಲಿ ಬಿಜೆಪಿಗರನ್ನು ಹೆದರಿಸುತ್ತಿದ್ದಾರೆ ಎಂದು ಆರೋಪಿಸಿದರು.
ಬಿಜೆಪಿ ವಿಭಾಗೀಯ ಪ್ರಮುಖರಾದ ಈಶ್ವರಸಿಂಗ್ ಠಾಕೂರ ಮಾತನಾಡಿ, ಮುಸ್ಲಿಂ ಶಿಕ್ಷಣ ಸಂಸ್ಥೆಗಳಲ್ಲಿ ತಮ್ಮ ಮಕ್ಕಳಿಗೆ ಪ್ರವೇಶ ಕೊಡಿಸಬೇಡಿ ಮುಂದಿನ ದಿನಗಳಲ್ಲಿ ನಿಮ್ಮ ಮಕ್ಕಳ ಭವಿಷ್ಯಕ್ಕೆ ಕಂಟಕ ಬರಬಹುದು ಎಲ್ಲರೂ ಕೂಡಿ ಲವ್ ಜಿಹಾದ್ ತಡೆಯುವ ಕೆಲಸ ಮಾಡಬೇಕಾಗಿದೆ ಎಂದರು.