ಎಲ್ಲಿಯೇ ಇದ್ದರೂ ಬೇರುಗಳು ಭಾರತದಲ್ಲಿರಲಿ: ನ್ಯಾಯಾಧೀಶೆ ಕವಿತಾ ಎಸ್. ಉಂಡೋಡಿ

KannadaprabhaNewsNetwork |  
Published : Jan 13, 2024, 01:32 AM IST
ಜಮಖಂಡಿ ನಗರದ ಬಸವಜ್ಯೋತಿ ವಿಜ್ಞಾನ ಮತ್ತು ವಾಣಿಜ್ಯ ಪದವಿಪೂರ್ವ ಮಹಾವಿದ್ಯಾಲಯಲ್ಲಿ ಆಯೋಜಿಸಿದ್ದ ’ರಾಷ್ಟ್ರೀಯಯುವಕರ ದಿನಾಚರಣೆ’ಯನ್ನು ನ್ಯಾಯಾಧೀಶೆಕವಿತಾಎಸ್. ಉಂಡೋಡಿ ಉದ್ಘಾಟಿಸಿದರು.ಡಾ.ಟಿ.ಪಿ.ಗಿರಡ್ಡಿ, ಪ್ರೊ.ಬಸವರಾಜಕಡ್ಡಿ, ನ್ಯಾಯಾಧೀಶಅರ್ಶದ್ ಅ.ಅನ್ಸಾರಿ, ಎಸ್.ಆರ್. ಕಾಡಗಿ, ಎಸ್.ಬಿ. ಕಾಳೆ ಇದ್ದಾರೆ. | Kannada Prabha

ಸಾರಾಂಶ

ಜಮಖಂಡಿ: ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ ಹಾಗೂ ಶಿಕ್ಷಣ ಇಲಾಖೆಯ ಸಹಯೋಗದಲ್ಲಿ ಸ್ಥಳೀಯ ಬಸವಜ್ಯೋತಿ ವಿಜ್ಞಾನ ಮತ್ತು ವಾಣಿಜ್ಯ ಪದವಿಪೂರ್ವ ಮಹಾವಿದ್ಯಾಲಯದಲ್ಲಿ ಶುಕ್ರವಾರ ಆಯೋಜಿಸಿದ್ದ ’ರಾಷ್ಟ್ರೀಯ ಯುವಕರ ದಿನಾಚರಣೆಯನ್ನು ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶೆ ಕವಿತಾ ಎಸ್. ಉಂಡೋಡಿ ಉದ್ಘಾಟಿಸಿದರು.ವಕೀಲರ ಸಂಘದ ಅಧ್ಯಕ್ಷ ಎಸ್.ಆರ್.ಕಾಡಗಿ ಮಾತನಾಡಿದರು. ಪ್ರಾಚಾರ್ಯ ಡಾ.ಟಿ.ಪಿ.ಗಿರಡ್ಡಿ ಅಧ್ಯಕ್ಷತೆ ವಹಿಸಿದ್ದರು.

ಕನ್ನಡಪ್ರಭ ವಾರ್ತೆ ಜಮಖಂಡಿ

ಭಾರತದ ಶ್ರೇಷ್ಠ ಸಂಸ್ಕೃತಿ ಮತ್ತು ಭವ್ಯ ಪರಂಪರೆಯನ್ನುಇಡೀ ಪ್ರಪಂಚಕ್ಕೆ ತಿಳಿಸಿಕೊಟ್ಟ ಕೀರ್ತಿ ಸ್ವಾಮಿ ವಿವೇಕಾನಂದರಿಗೆ ಸಲ್ಲುತ್ತದೆ. ಆದ್ದರಿಂದ ನಾವು ಪ್ರಪಂಚದ ಯಾವುದೇ ಮೂಲೆಯಲ್ಲಿ ವಾಸವಾಗಿದ್ದರೂ ನಮ್ಮ ಬೇರುಗಳು ಭಾರತದಲ್ಲಿರಬೇಕು ಎಂದು ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶೆ ಕವಿತಾ ಎಸ್. ಉಂಡೋಡಿ ಹೇಳಿದರು.

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ ಹಾಗೂ ಶಿಕ್ಷಣ ಇಲಾಖೆಯ ಸಹಯೋಗದಲ್ಲಿ ಸ್ಥಳೀಯ ಬಸವಜ್ಯೋತಿ ವಿಜ್ಞಾನ ಮತ್ತು ವಾಣಿಜ್ಯ ಪದವಿಪೂರ್ವ ಮಹಾವಿದ್ಯಾಲಯದಲ್ಲಿ ಶುಕ್ರವಾರ ಆಯೋಜಿಸಿದ್ದ ’ರಾಷ್ಟ್ರೀಯ ಯುವಕರ ದಿನಾಚರಣೆ’ ಉದ್ಘಾಟಿಸಿ ಮಾತನಾಡಿದರು.

ಹೆಚ್ಚುವರಿ ಸಿವಿಲ್ ನ್ಯಾಯಾಧೀಶ ಅರ್ಶದ್ .ಅ.ಅನ್ಸಾರಿ ಮಾತನಾಡಿ, 18 ವರ್ಷದೊಳಗಿನ ಬಾಲಕಿಯರ ಹಾಗೂ 21 ವರ್ಷದೊಳಗಿನ ಬಾಲಕರ ಬಾಲ್ಯ ವಿವಾಹ ಮಾಡುವುದು ಶಿಕ್ಷಾರ್ಹ ಅಪರಾಧವಾಗಿದೆ. ಬಾಲ್ಯ ವಿವಾಹ ಮಾಡಿಸುವವರಿಗೆ ಜಾಮೀನು ರಹಿತ 2 ವರ್ಷಗಳ ಕಠಿಣ ಜೈಲು ಶಿಕ್ಷೆ ವಿಧಿಸಲಾಗುತ್ತದೆ ಎಂದರು.

ವಕೀಲ ಎಸ್.ಬಿ. ಕಾಳೆ ವಿಶೇಷ ಉಪನ್ಯಾಸ ನೀಡುತ್ತ ಮಾತನಾಡಿ, ಯುವಕರು ರಾಷ್ಟ್ರದ ಶಕ್ತಿ. ಯುವಕರಿಂದಲೇ ಬಲಾಢ್ಯದೇಶದ ನಿರ್ಮಾಣ ಸಾಧ್ಯ ಎಂದು ಸ್ವಾಮಿ ವಿವೇಕಾನಂದರು ಯುವಕರಲ್ಲಿಟ್ಟಿದ್ದ ವಿಶ್ವಾಸವನ್ನು ಹುಸಿಗೊಳಿಸಬಾರದು ಎಂದರು.

ಆಡಳಿತಾಧಿಕಾರಿ ಪ್ರೊ.ಬಸವರಾಜ ಕಡ್ಡಿ ಮಾತನಾಡಿ, ಕ್ರೂರಿಯನ್ನು ಮಾನವನನ್ನಾಗಿ, ಮಾನವನನ್ನು ದೇವನನ್ನಾಗಿ ಮಾಡುವುದೇ ನಿಜವಾದ ಧರ್ಮ. ಮನುಷ್ಯನಲ್ಲಿನ ದೈವತ್ವವನ್ನು ಹೊರತೆಗೆಯುವುದೇ ಧರ್ಮ ಎಂದು ಸ್ವಾಮಿ ವಿವೇಕಾನಂದರು ಪ್ರತಿಪಾಸಿದ್ದರು ಎಂದರು.

ವಕೀಲರ ಸಂಘದ ಅಧ್ಯಕ್ಷ ಎಸ್.ಆರ್.ಕಾಡಗಿ ಮಾತನಾಡಿದರು. ಪ್ರಾಚಾರ್ಯ ಡಾ.ಟಿ.ಪಿ.ಗಿರಡ್ಡಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ವೇದಿಕೆಯಲ್ಲಿ ಸಂಸ್ಥೆಯ ಅಧ್ಯಕ್ಷ ಡಾ.ಗಿರೀಶ ಕಡ್ಡಿ, ಕಾರ್ಯದರ್ಶಿ ಶಕುಂತಲಾ ಕಡ್ಡಿ ಇದ್ದರು. ಸಾಕ್ಷಿ ಸಂಕ್ರಾವತ್, ಐಶ್ವರ್ಯ ನ್ಯಾಮಗೌಡ ಪ್ರಾರ್ಥಿಸಿರು. ರಮೇಶ ಬೀಳಗಿ ಸ್ವಾಗತಿಸಿದರು. ರೇಖಾ ಬುರ್ಲಿ ನಿರೂಪಿಸಿದರು. ಸುನಿತಾ ಕುಮಕಾಳೆ ವಂದಿಸಿದರು.

PREV

Recommended Stories

ಸುಹಾಸ್ ಶೆಟ್ಟಿ ಹ* ಕೇಸಲ್ಲಿ ಎನ್‌ಐಎನಿಂದ 18 ಕಡೆ ದಾಳಿ
ಬೆಂಗಳೂರು ನಗರದಲ್ಲಿ ಮತ್ತೆ ರಾರಾಜಿಸಲಿವೆ ಜಾಹೀರಾತು : ವಾರ್ಷಿಕ ₹ 6000 ಕೋಟಿ ನಿರೀಕ್ಷೆ