ಅಣ್ಣಾಸಾಬ ತೆಲಸಂಗ
ತಾಲೂಕಿನ ಗ್ರಾಮಾಂತರ ಪ್ರದೇಶಗಳಿಂದ ಶಾಲಾ ಕಾಲೇಜುಗಳಿಗೆ ಆಗಮಿಸುವ ವಿದ್ಯಾರ್ಥಿಗಳಿಗೆ ಸಕಾಲಕ್ಕೆ ಸಾರಿಗೆ ವ್ಯವಸ್ಥೆ ದೊರೆಯದೆ ಸಂಕಷ್ಟ ಅನುಭವಿಸುವಂತಾಗಿದೆ. ವಿದ್ಯಾರ್ಥಿಗಳಿಗೆ ಬಸ್ ಸಿಕ್ಕರೂ ಬಸ್ ಭರ್ತಿಯಾಗಿ ನೇತಾಡುತ್ತಾ ಪ್ರಯಾಣಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಅವ್ಯವಸ್ಥೆ ಸಂಬಂಧಪಟ್ಟ ಅಧಿಕಾರಿಗಳಿಗೆ ಮತ್ತು ಜನಪ್ರತಿನಿಧಿಗಳಿಗೆ ಗೊತ್ತಿದ್ದು ಗೊತ್ತಿಲ್ಲದಂತೆ ಮೌನವಾಗಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಅಥಣಿ ಸಾರಿಗೆ ಘಟಕದ ಅಧಿಕಾರಿಗಳು ತಾಲೂಕಿನ ವಿವಿಧ ಗ್ರಾಮಾಂತರ ಪ್ರದೇಶಗಳ ಮಾರ್ಗದಲ್ಲಿ ಪ್ರತಿನಿತ್ಯ ಓಡಿಸುವ ಸಾರಿಗೆ ಬಸ್‌ಗಳನ್ನು ವಿದ್ಯಾರ್ಥಿಗಳ ಅನುಕೂಲಕ್ಕೆ ತಕ್ಕಂತೆ ಸಮಯ ಮತ್ತು ಮಾರ್ಗವನ್ನು ಹೊಂದಿಸದೇ ಇರುವುದರಿಂದ ನಿತ್ಯ ವಿದ್ಯಾರ್ಥಿಗಳು ಇಂತಹ ಪರಿಸ್ಥಿತಿ ಅನುಭವಿಸಬೇಕಿದೆ. ಅಧಿಕಾರಿಗಳ ನಿರ್ಲಕ್ಷ್ಯ ಖಂಡಿಸಿ ಮೇಲಿಂದ ಮೇಲೆ ವಿದ್ಯಾರ್ಥಿಗಳು, ಪೋಷಕರು, ಮಹಿಳೆಯರು, ವಿವಿಧ ಸಂಘಟನೆಗಳು ಪ್ರತಿಭಟನೆ ನಡೆಸಿ ಸೂಕ್ತ ಬಸ್ ಸೌಲಭ್ಯಕ್ಕೆ ಆಗ್ರಹಿಸುತ್ತಲೇ ಇದ್ದಾರೆ. ಆದರೆ ಪ್ರಯೋಜನಕ್ಕೆ ಬಾರದಾಗಿದೆ.ಅಥಣಿ ತಾಲೂಕಿನ ಐನಾಪುರ ಮಾರ್ಗದಲ್ಲಿ ತಂಗಡಿ, ಶಿನಾಳ, ಹುಲಗಬಾಳಿ ಗ್ರಾಮಗಳಿಗೆ ಮತ್ತು ಖಿಳೇಗಾವಿ ಮಾರ್ಗದಲ್ಲಿನ ಪಾರ್ಥನಹಳ್ಳಿ, ಗುಂಡಿವಾಡಿ, ಬಳ್ಳಿಗೇರಿ ಮತ್ತು ಮಲಬಾದ, ಅನಂತಪುರ, ಕೊಟ್ಟಲಗಿ ಮಾರ್ಗದಲ್ಲಿನ ಯಕಂಚಿ, ಎಲಡಗಿ, ಅಡಹಳ್ಳಿ, ಕೋಹಳ್ಳಿ, ಐಗಳಿ, ಅರಟಾಳ ಮತ್ತು ಬಾಡಗಿ ಗ್ರಾಮಗಳಿಗೆ, ಶಿರಹಟ್ಟಿ ಮಾರ್ಗದಲ್ಲಿನ ಗ್ರಾಮಗಳಿಗೆ ಸಾರಿಗೆ ಬಸ್ ಕೊರತೆಯಿಂದಾಗಿ ವಿದ್ಯಾರ್ಥಿಗಳು ಸಕಾಲಕ್ಕೆ ಶಾಲಾ-ಕಾಲೇಜಿನ ತರಗತಿಗಳಿಗೆ ತೆರಳಲಾಗದೇ, ಸಮಯಕ್ಕೆ ಸರಿಯಾಗಿ ಮನೆಗೂ ಹೋಗಲಾಗದ ತೊಂದರೆ ಅನುಭವಿಸುತ್ತಿದ್ದಾರೆ.
ಸರ್ಕಾರ ಗ್ಯಾರಂಟಿ ಯೋಜನೆ ಆರಂಭಿಸಿದ ನಂತರ ಶಕ್ತಿ ಯೋಜನೆಯಡಿ ಮಹಿಳೆಯರು ಉಚಿತ ಪ್ರಯಾಣ ಮಾಡುತ್ತಿದ್ದು, ಇದರಿಂದ ವಿದ್ಯಾರ್ಥಿಗಳಿಗೆ, ಪುರುಷ ಪ್ರಯಾಣಿಕರಿಗೆ ಸಾರಿಗೆ ಬಸ್‌ಗಳಲ್ಲಿ ಆಸನವೇ ಸಿಗದಂತಾಗಿದೆ. ಬಸ್‌ನಲ್ಲಿ ಪ್ರಯಾಣಿಸಬೇಕಾದರೆ ಪ್ರಾಣದ ಹಂಗು ತೊರೆದು ಬಾಗಿಲಿಗೆ ನೇತಾಡಿಕೊಂಡು ಪ್ರಯಾಣಿಸಬೇಕು. ಇಂತಹ ದೃಶ್ಯಗಳು ಸಾಮಾನ್ಯವಾಗಿದ್ದು, ಈ ಬಗ್ಗೆ ವಿದ್ಯಾರ್ಥಿಗಳ ಪೋಷಕರು ಮತ್ತು ಜನರು ವ್ಯವಸ್ಥೆ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಗೂಡ್ಸ್ ವಾಹನಗಳಲ್ಲಿ ಪ್ರಯಾಣ:
--------ಕೋಟ್.....
- ಎನ್.ಎಂ.ಕೇರಿ, ಅಥಣಿ ಘಟಕ ವ್ಯವಸ್ಥಾಪಕರು.
ಕೋಟ್
- ಭುವನೇಶ್ವರಿ, ವಿದ್ಯಾರ್ಥಿನಿ, ತಂಗಡಿ.
-------------ಅಥಣಿ ಸಾರಿಗೆ ಘಟಕದಿಂದ ಹೆಚ್ಚುವರಿ ಬಸ್ ಇಲ್ಲದ ಕಾರಣ ಶಾಲೆ, ಕಾಲೇಜು ಬಿಟ್ಟ ನಂತರ ಮಕ್ಕಳ ಪರದಾಟ ಹೇಳದಂತಾಗಿದೆ. ಬಸ್‌ಗಳ ಕೊರತೆಯಿಂದ, ಖಾಸಗಿ ವಾಹನಗಳಿಗೆ ಪ್ರತಿದಿನ ಹಣ ನೀಡಿ ಪ್ರಯಾಣಿಸಲಾಗದೇ ಅನೇಕ ವಿದ್ಯಾರ್ಥಿಗಳು ಬಸ್‌ಗಳಿಗೆ ಜೋತುಬಿದ್ದು ತೆರಳುತ್ತಾರೆ. ಅನೇಕ ವಿದ್ಯಾರ್ಥಿಗಳಿಗೆ ಬಸ್ ಸಿಗದೇ ಶಾಲಾ, ಕಾಲೇಜು ಬಿಟ್ಟ ನಂತರ ಬಹಳ ಹೊತ್ತಿಗೆ ನಡೆದುಕೊಂಡು ಗ್ರಾಮಗಳಿಗೆ ಬರುತ್ತಿದ್ದಾರೆ.
- ಭೀಮಪ್ಪ ಬಿರಾದಾರ, ಬಾಡಗಿ ಗ್ರಾಮಸ್ಥರು.---------