ದೇಶದ್ರೋಹಿ ಕೃತ್ಯ ಯಾರೇ ಮಾಡಿದರೂ ಕ್ಷಮಿಸಲ್ಲ

KannadaprabhaNewsNetwork |  
Published : Feb 29, 2024, 02:04 AM IST
ಫೋಟೋ: 28 ಹೆಚ್‌ಎಸ್‌ಕೆ 4ಹೊಸಕೋಟೆ ನಗರದ ಟಿಜಿ ಬಡಾವಣೆಯಲ್ಲಿ ವಿವಿಧ ಅಭಿವೃದ್ದಿ ಕಾಮಗಾರಿಗೆ ಶಾಸಕ ಶರತ್ ಬಚ್ಚೇಗೌಡ ಹಲವಾರು ಗಣ್ಯರೊಂದಿಗೆ ಭೂಮಿಪೂಜೆ ನೆರವೇರಿಸಿದರು. | Kannada Prabha

ಸಾರಾಂಶ

ಹೊಸಕೋಟೆ: ದೇಶ ದ್ರೋಹದ ಕೃತ್ಯ ಯಾರೇ ಮಾಡಿದ್ರೂ ಅದು ತಪ್ಪು. ಆದ್ದರಿಂದ ಅಂತಹವನ್ನು ಕ್ಷಮಿಸುವ ಪ್ರಶ್ನೆಯೇ ಇಲ್ಲ ಎಂದು ವಿಧಾನಸೌಧದಲ್ಲಿ ಪಾಕಿಸ್ತಾನ್ ಜಿಂದಾಬಾದ್ ಘೋಷಣೆ ಕುರಿತು ಶಾಸಕ ಶರತ್ ಬಚ್ಚೇಗೌಡ ಪ್ರತಿಕ್ರಿಯಿಸಿದರು.

ಹೊಸಕೋಟೆ: ದೇಶ ದ್ರೋಹದ ಕೃತ್ಯ ಯಾರೇ ಮಾಡಿದ್ರೂ ಅದು ತಪ್ಪು. ಆದ್ದರಿಂದ ಅಂತಹವನ್ನು ಕ್ಷಮಿಸುವ ಪ್ರಶ್ನೆಯೇ ಇಲ್ಲ ಎಂದು ವಿಧಾನಸೌಧದಲ್ಲಿ ಪಾಕಿಸ್ತಾನ್ ಜಿಂದಾಬಾದ್ ಘೋಷಣೆ ಕುರಿತು ಶಾಸಕ ಶರತ್ ಬಚ್ಚೇಗೌಡ ಪ್ರತಿಕ್ರಿಯಿಸಿದರು.

ನಗರದ ಟಿಜಿ ಬಡಾವಣೆಯಲ್ಲಿ ವಿವಿಧ ಅಭಿವೃದ್ದಿ ಕಾಮಗಾರಿಗೆ ಭೂಮ ಪೂಜೆ ಸಲ್ಲಿಸಿದ ಬಳಿಕ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಭಾರತ ಮಾತೆ ಎಂದಿಗೂ ಬಿಜೆಪಿಯವರ ಸ್ವತ್ತಲ್ಲ. ಬದಲಾಗಿ ದೇಶದ ಪ್ರತಿಯೊಬ್ಬ ನಾಗರಿಕರ ಸ್ವತ್ತು. ಆದರೆ ದೇಶದ ಮಣ್ಣಿನಲ್ಲಿ ಹುಟ್ಟಿ, ದೇಶದ ಅನ್ನವನ್ನು ತಿಂದು ಇಲ್ಲೆ ಜೀವಿಸುವವರು ಎಂದಿಗೂ ದೇಶ ವಿರೋಧಿ ಕೃತ್ಯ ಮಾಡಬಾರದು. ಅಲ್ಲದೆ ವಿಧಾನಸೌಧದಲ್ಲಿ ಪಾಕಿಸ್ತಾನ್ ಕಿ ಜೈ ಎಂದು ಘೋಷಣೆ ಕೂಗಿದ ಬಗ್ಗೆ ಸಮಗ್ರ ತನಿಖೆ ಆಗಬೇಕು. ಅವರು ನಿಜವಾಗಿ ಘೋಷಣೆ ಕೂಗಿದ್ದರೆ, ಖಂಡಿತ ಕ್ರಮ ಜರುಗಿಸಬೇಕು ಎಂದು ಹೇಳಿದರು.

ರಾಜಕೀಯ ಲೇಪನ ಬೇಡ:

ಅಲ್ಲದೆ ಯಾರೋ ಒಬ್ಬರು ಘೋಷಣೆ ಕೂಗಿದರು ಎಂದು ಬಿಜೆಪಿಯವರು ವಿನಾಕಾರಣ ರಾಜಕೀಯ ಲೇಪನ ಮಾಡಿ ರಾಜ್ಯಾಧ್ಯಂತ ಪ್ರತಿಭಟನೆ ಮಾಡುವುದು ಸರಿಯಲ್ಲ. ಅಲ್ಲದೆ ಎಲ್ಲರನ್ನೂ ಒಂದೇ ದೃಷ್ಠಿಕೋನದಲ್ಲಿ ನೋಡುವುದು ಸರಿಯಲ್ಲ. ಆದ್ದರಿಂದ ಸಮಗ್ರ ತನಿಖೆ ನಂತರ ತಪ್ಪಿತಸ್ಥರಿಗೆ ಶಿಕ್ಷೆ ಆಗುತ್ತದೆ. ವಿನಾಕಾರಣ ರಾಜಕೀಯಗಿ ಅಸ್ತ್ರವಾಗಿ ಮಾಡಿಕೊಳ್ಳುವುದು ಸರಿಯಲ್ಲ ಎಂದು ಶಾಸಕ ಶರತ್ ಬಚ್ಚೇಗೌಡ ತಿಳಿಸಿದರು.

ಅಭಿವೃದ್ದಿಗೆ ಆದ್ಯತೆ: ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದ ದಿನದಿಂದ ಬಡ, ಮಧ್ಯಮ ವರ್ಗ ಸೇರಿದಂತೆ ಎಲ್ಲಾ ವರ್ಗದ ಸಮಗ್ರ ಅಭಿವೃದ್ಧಿಗೆ ನಿರಂತರವಾಗಿ ಶ್ರಮಿಸುತ್ತಿದೆ. ಪ್ರಮುಖವಾಗಿ ಗ್ರಾಮೀಣ ಭಾಗದಲ್ಲಿ ಮೂಲ ಸೌಕರ್ಯಗಳ ಅಭಿವೃದ್ಧಿಗೆ ಆದ್ಯತೆ ನೀಡುತ್ತಿದ್ದು, ಹೊಸಕೋಟೆಯನ್ನು ಮಾದರಿ ನಗರವನ್ನಾಗಿ ನಿರ್ಮಾಣ ಮಾಡುತ್ತೇವೆ ಎಂದು ತಿಳಿಸಿದರು.

ಫೋಟೋ: 28 ಹೆಚ್‌ಎಸ್‌ಕೆ 4

ಹೊಸಕೋಟೆಯ ಟಿಜಿ ಬಡಾವಣೆಯಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಶರತ್ ಬಚ್ಚೇಗೌಡ ಭೂಮಿಪೂಜೆ ನೆರವೇರಿಸಿದರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ