ಕನ್ನಡ ಪ್ರಭ ವಾರ್ತೆ ಹೊನ್ನಾಳಿ
ರಾಜ್ಯ ಸರ್ಕಾರ ಬಡವರ ಅನುಕೂಲಕ್ಕಾಗಿ 5 ಗ್ಯಾರಂಟಿಗಳ ನ್ರಿನು ಜಾರಿಗೆ ತಂದಿರುವುದು ಸ್ವಾಗರ್ತಾಹ ಆದರೆ ಈ ಸಮೀಕ್ಷೆಗಳನ್ನು ಸಮೀಕ್ಷೆ ಮಾಡಲು ಅಂಗನವಾಡಿ ನೌಕರರನ್ನು ತೋಡಗಿಸಿಬೇಕು ಎಂದು ಫೆ.20ರಂದು ಸರ್ಕಾರ ಆದೇಶ ಮಾಡಿದೆ. ಆದರೆ, ಅಂಗನವಾಡಿ ನೌಕರರ ವೇತನ ಹೆಚ್ಚಳದ 6ನೇ ಗ್ಯಾರಂಟಿಯನ್ನು ಸರ್ಕಾರ ಈಡೇರಿಸದೇ ಗ್ಯಾರಂಟಿಗಳ ಸಮೀಕ್ಷೆಗೆ ಅಂಗನವಾಗಿ ನೌಕರರನ್ನು ತೊಡಗಿಸುವುದು ಸಮಂಜಸವಲ್ಲ ಎಂದು ಅಂಗನವಾಡಿ ನೌಕರರ ಸಂಘದ ತಾಲೂಕು ಅಧ್ಯಕ್ಷೆ ಚೆನ್ನಮ್ಮ ಹೇಳಿದರು.ಅವರು ಬುಧವಾರ ತಾಲೂಕು ಅಂಗನವಾಡಿ ಕಾರ್ಯಕರ್ತಯರ ಮತ್ತು ಸಹಾಯಕಿಯರ ಫೆಡರೇಷನ್ ತಾಲೂಕು ಘಟಕದ ವತಿಯಿಂದ ಪಟ್ಟಣದ ಕನಕ ರಂಗಮಂದಿರದ ಬಳಿ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಭಾಗವಹಿಸಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿ ಜ್ಯೋತಿ ಅವರಿಗೆ ಮನವಿ ಪತ್ರ ಸಲ್ಲಿಸಿ ಮಾತನಾಡಿದರು.ಸರ್ಕಾರ 6ನೇ ಗ್ಯಾರಂಟಿ ಜಾರಿಗೊಳಿಸಿ ವೇತನ ಹೆಚ್ಚಳ ಮಾಡಬೇಕು, ಈಗಿರುವ ಮೊಬೈಲ್ ಗಳಲ್ಲಿ ಸಮೀಕ್ಷೆ ಮಾಡಲು ಸಾಧ್ಯವಿಲ್ಲ. ಅದ್ದರಿಂದ ಕೂಡಲೇ ಹೊಸ ಮೊಬೈಲ್ ಗಳನ್ನು ಕೊಡಬೇಕು, ಅಂಗನವಾಡಿ ಕೇಂದ್ರದಲ್ಲಿ 6ವರ್ಷದೊಳಗಿನ ಮಕ್ಕಳನ್ನು ನೋಡಿಕೊಳ್ಳುವುದು ಸಹಾಯಕಿಯವರಿಗೆ ಕಷ್ಟವಾಗುತ್ತಿದೆ ಇದನ್ನು ನಿವಾರಿಸಬೇಕು ಎಂದರು.ಸಮೀಕ್ಷೆ ಮಾಡುವ ವೇಳೆ ಅಂಗನವಾಡಿ ಮಕ್ಕಳಿಗೆ ಏನಾದರೂ ಅನಾಹುತಗಳಾದರೆ ಯಾರೂ ಜವಾಬ್ದಾರರು ಎಂದು ತಿಳಿಸಬೇಕು. ಇಲಾಖೆಯ ಸಚಿವರು ಮತ್ತು ಇಲಾಖೆಯ ಅಧಿಕಾರಿಗಳು ಒಂದು ವರ್ಷದಿಂದ ಸಂಘಟನೆಯ ಪದಾಧಿಕಾರಿಗಳನ್ನು ಕರೆದು ಸಭೆ ನಡೆಸದೇ ಏಕಾಎಕಿಯಾಗಿ ಹಲವಾರು ತೀರ್ಮಾನಗಳನ್ನು ತೆಗೆದುಕೊಂಡಿರುವುದನ್ನು ಇಲಾಖಾ ಅಧಿಕಾರಿಗಳ ಗಮನಕ್ಕೆ ತರುತ್ತಾ, ಈ ಎಲ್ಲಾ ಸಮಸ್ಯೆಗಳ ಬಗ್ಗೆ ಕೂಡಲೇ ಸಭೆ ಕರೆದು ಚರ್ಚಿಸಬೇಕೆಂದು ತಮ್ಮ ಸಂಘ ಒತ್ತಾಯಿಸುತ್ತದೆ ಎಂದು ಹೇಳಿದರು. ತಮ್ಮ ಸಂಘದ ಹಕ್ಕೊತ್ತಾಯಗಳ ಮನವಿಯನ್ನು ಸಿಡಿಪಿಓ ಜ್ಯೋತಿ ಅವರಿಗೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಫೆಡರೇಷನ್ ಗೌರವಾಧ್ಯಕ್ಷ ಕೆ.ಜಿ.ಗೀತಾ, ಕಾರ್ಯದರ್ಶಿ ಎ.ಎಸ್, ವಸಂತ, ಚೈತ್ರ, ಶಾರದಮ್ಮ ಸೇರಿದಂತೆ ನೂರಾರು ಜನ ಅಂಗನವಾಡಿ ಕಾರ್ಯಕರತೆಯರು ಇದ್ದರು.ಸಮೀಕ್ಷೆಗೆ ನೇಮಿಸೋದಾದ್ರೆ 1 ಗ್ಯಾರಂಟಿಗೆ 10 ರು. ಕೊಡಿ
ಒಬ್ಬ ಕಾರ್ಯಕರ್ತೆ 120 ಮನೆಗಳನ್ನು ಸರ್ವೆ ಮಾಡಬೇಕು ಒಂದು ಮನೆಗೆ 5 ಗ್ಯಾರಂಟಿಗೆ ರು.10 ನಂತೆ ನಿಗದಿ ಮಾಡಿದ್ದೀರಿ, ವಿವರಗಳು ಮತ್ತು ಸಮಯ ಹೆಚ್ಚು ಬೇಕಾ ಗುತ್ತದೆ, ಕರಾವಳಿ ಪ್ರದೇಶಗಳಲ್ಲಿ ಮತ್ತು ಸಣ್ಣ ಗ್ರಾಮಗಳಲ್ಲಿ ಮನೆಗಳು ದೂರದಲ್ಲಿರುತ್ತವೆ ಸಾರಿಗೆ ವೆಚ್ಚವು ಬೇಕಾಗುತ್ತದೆ. ಅದ್ದರಿಂದ ಒಂದು ಗ್ಯಾರಂಟಿಗೆ ಕನಿಷ್ಟ 10 ರು.ನಂತೆ 5 ಗ್ಯಾರಂಟಿಗೆ 50 ರು. ಹಣ ನಿಗದಿಮಾಡಬೇಕು.