- ಕಡೇಚೂರು ಬಾಡಿಯಾಳ ಕೈಗಾರಿಕಾ ಪ್ರದೇಶ
- ಕಂಪನಿಗಳು ತಪ್ಪೆಸಗಿವೆ ಎಂದು ಸಮಿತಿ ವರದಿ- ಆದರೂ, ಕ್ರಮಕ್ಕೆ ಹಿಂದೇಟು ಹಾಕುತ್ತಿರುವ ಅಧಿಕಾರಿಗಳು
- ಕನ್ನಡಪ್ರಭ ಸರಣಿ ವರದಿ ಭಾಗ : 135ಆನಂದ್ ಎಂ. ಸೌದಿ
ಕನ್ನಡಪ್ರಭ ವಾರ್ತೆ ಯಾದಗಿರಿಕಡೇಚೂರು ಬಾಡಿಯಾಳ ಕೈಗಾರಿಕಾ ಪ್ರದೇಶದಲ್ಲಿನ ಅಪಾಯಕಾರಿ ಕೆಮಿಕಲ್- ತ್ಯಾಜ್ಯ ಕಂಪನಿಗಳಿಂದ ವಿಷಗಾಳಿ ಹಾಗೂ ದುರ್ನಾತದಿಂದಾಗಿ ಅಲ್ಲಿನ ಸುತ್ತಮುತ್ತಲಿನ ಭಾಗದ ಜನರ ಆರೋಗ್ಯದ ಮೇಲೆ ದುಷ್ಪರಿಣಾಮಗಳು ಉಂಟಾಗುತ್ತಿವೆ ಎಂಬ ದೂರುಗಳ ಹಿನ್ನೆಲೆಯಲ್ಲಿ, ಸ್ಥಳ ಪರಿಶೀಲನೆ ಹಾಗೂ ವರದಿ ನೀಡುವಂತೆ ಸಹಾಯಕ ಆಯಕ್ತರ ನೇತೃತ್ವದಲ್ಲಿ ರಚಿತಗೊಂಡಿದ್ದ ಸಮಿತಿ ನೀಡಿದ್ದ ವರದಿಗಳಲ್ಲಿನ ಅಂಶಗಳಲ್ಲಿ, ಕೆಲವೊಂದು ಕಂಪನಿಗಳು ಸರ್ಕಾರದ ಷರತ್ತುಗಳ ಉಲ್ಲಂಘಿಸಿದ್ದು, ಇವುಗಳನ್ನು ಪಾಲಿಸುವಂತೆ ಸಲಹೆ ನೀಡಿ ಷರಾ ಬರೆದಿತ್ತು.
ಆದರೆ, ಸರ್ಕಾರದ ನಿಯಮಾವಳಿಗಳನ್ನು ಉಲ್ಲಂಘಿಸಿದ್ದ ಕಂಪನಿಗಳು ವಿರುದ್ಧ ಕ್ರಮಕ್ಕೆ ಮುಂದಾಗಬೇಕಿದ್ದ ಅಧಿಕಾರಿಗಳು ಮೌನಕ್ಕೆ ಜಾರಿದರೆ, ಸಲಹೆಗಳ ಶಿಫಾರಸುಗಳನ್ನು ಕಂಪನಿಗಳು ಮತ್ತಷ್ಟೂ ಹೆಚ್ಚು ಉಲ್ಲಂಘಿಸುತ್ತಿರುವುದು ದುರಂತ.ಷರತ್ತುಗಳ ಉಲ್ಲಂಘನೆಯಾದ ಆರೋಪದಡಿ ನೊಟೀಸ್ ಸ್ವೀಕರಿಸಿದ ಕಂಪನಿಗಳು, ಇನ್ನು ಮುಂದೆ ಹೀಗಾಗುವುದಿಲ್ಲ ಎಂದು ಪತ್ರ ಬರೆದಾ ಕ್ಷಣ ಅವುಗಳಿಗೆ ಪುನಾ: ಅನುಮತಿ ನೀಡುವ ಪರಿಸರ ಇಲಾಖೆ, ತಪ್ಪೆಸಗಿದ್ದ ಕಂಪನಿಯಿಂದ ಜನ-ಜಲ ಜೀವನದ ಮೇಲಾದ ದುಷ್ಟರಿಣಾಮದ ಭೀಕರತೆಯ ಬಗ್ಗೆ ಕ್ರಮಕ್ಕೆ ಮುಂದಾಗಲಿಲ್ಲ ಏಕೆ ಅನ್ನೋದು ಸಾರ್ವಜನಿಕರ ಅನುಮಾನಕ್ಕೆ ಕಾರಣವಾಗಿದೆ.
ಡಿಸೆಂಬರ್ 2024 ರಲ್ಲಿ ಮಾಲಿನ್ಯ ನಿಯಂತ್ರಣ ಮಂಡಳಿಯ ತಾಂತ್ರಿಕ ಸಮಿತಿ ಭೇಟಿ ನೀಡಿ, ಸಲಹೆಗಳ ಪಾಲಿಸುವಂತೆ ನೀಡಿದ್ದ ಆದೇಶವನ್ನೇ ಧಿಕ್ಕರಿಸಿದ್ದ ಬಹುತೇಕ ಕಂಪನಿಗಳು, ಸಹಾಯಕ ಆಯುಕ್ತರ ನೇತೃತ್ವದ ಸಮಿತಿಯ ಸೂಚನಗೆ ಕಿಮ್ಮತ್ತೇ ಕೊಡಲಿಲ್ಲ ಅನ್ನಲಾಗುತ್ತಿದೆ. ಆರಂಭದಲ್ಲಿ ಒಂದನ್ನು ಜಪ್ತಿ ಮಾಡಲಾಯಿತಾದರೂ, ಇತ್ತೀಚೆಗಷ್ಟೇ ಅದನ್ನು ಪುನರ್ಚಾಲನೆಗೆ ಆದೇಶಿಸಿದ್ದರಿಂದ, ಬೀಗಮುದ್ರೆ ತೆರವುಗೊಳಿಸಲಾಗಿದೆ.* ವರದಿಯ ಕೊನೆಯಲ್ಲೇನಿದೆ ?
ಸಮಿತಿಯು ಕಡೇಚೂರು-ಬಾಡಿಯಾಳ ಕೈಗಾರಿಕಾ ಪ್ರದೇಶಕ್ಕೆ ಹಾದು, ಭೇಟಿ ನೀಡಿ ಅಲ್ಲಿನ ಎಲ್ಲಾ ಕೈಗಾರಿಕೆಗಳನ್ನು, ಪರಿಶೀಲಿಸಲಾಗಿ, ಅವುಗಳಲ್ಲಿ ಮೆ. ಮದರ್ ಅರ್ಥ ಎನ್ವಿರೋ, ಕಲ್ಯಾಣ ಕರ್ನಾಟಕ ವೇಸ್ಟ್ ಮ್ಯಾನೇಜ್ಮೆಂಟ್ ಘಟಕಗಳಲ್ಲಿ ದುರ್ವಾಸನೆ ಹೊರಬರುತ್ತಿರುವದು ಅನುಭವಕ್ಕೆ ಬಂದಿದೆ. ಸಾಲ್ವೆಂಟ್ ಕೈಗಾರಿಕೆಗಳು ಮರುಬಳಕೆ ಮಾಡುವ ರಾಸಾಯುವಿಕೆ ಔಷಧಿಗಳ ವಾಸನೆ ಇರುವುದು ಅನುಭವಕ್ಕೆ ಬಂದಿದೆ. ಇನ್ನುಳಿದಂತೆ, ಕೆಲವೊಂದು ಔಷಧ ಉತ್ಪಾದನಾ ಕೈಗಾರಿಕೆಗಳ ಘಟಕಗಳಲ್ಲಿ ಸಾಮಾನ್ಯವಾಗಿ ವಾಸನೆ ಇರುವುದು ಕಂಡು ಬಂದಿದೆ. ಅಂತಹ ಕೈಗಾರಿಕೆಗಳಿಂದ ಹೊರಬರುವ ದುರ್ವಾಸನೆಯನ್ನು ಹಾಗೂ ತಡೆಯುವಲ್ಲಿ ಕೈಗಾರಿಕಾ ಘಟಕಗಳು ಈ ಸುಧಾರಣಾ ಕ್ರಮಗಳನ್ನು ಅಳವಡಿಸಿಕೊಂಡಲ್ಲಿ ದುರ್ವಾಸನೆ ಹರಡದಂತೆ ತಡೆಗಟ್ಟ ಬಹುದಾಗಿದೆ. ಅಲ್ಲದೆ ಕೈಗಾರಿಕಾ ಘಟಕಗಳ ಕಾರ್ಯಚಟುವಟಿಕೆಗಳನ್ನು ಹಾಗೂ ಕೈಗಾರಿಕೆಗಳಿಂದ ಹೊರಬರುತ್ತಿರುವ ದುರ್ವಾಸನೆ ಕುರಿತು ಕೂಲಂಕುಶವಾಗಿ ವರಿಶೀಲಿಸಲು ಪ್ರಶ್ನಿತ ಸಂಸ್ಥೆಗಳಿಂದ ಹಾಗೂ ತಜ್ಞರ ತಂಡದಿಂದ ಅಧ್ಯಯನ ನಡೆಸಿ ಅಗತ್ಯ ಕ್ರಮ ಕೈಗೊಳ್ಳ ಬಹುದು ಎಂದು ಜಂಟಿ ಪರಿಶೀಲನಾ ವರದಿಯನ್ನು ಜಿಲ್ಲಾಧಿಕಾರಿಗಳ ಮಾಹಿತಿ ಹಾಗೂ ಅವಗಾಹನೆಗಾಗಿ ಸಲ್ಲಿಸಿದೆ. "..ಕೋಟ್...ಇಷ್ಟೆಲ್ಲ ನಡೆದರೂ, ಇವತ್ತಿಗೂ ಅನೇಕ ಕೆಮಿಕಲ್ ಕಂಪನಿಗಳು ರಾಜಾರೋಷವಾಗಿ ಷರತ್ತುಗಳ ಉಲ್ಲಂಘಿಸುತ್ತ, ಜನ-ಜಲಚರಗಳ ಸಾವಿಗೆ ಕಾರಣವಾಗುತ್ತಿವೆ. ಆದರೆ ಕ್ರಮಕ್ಕೆ ಮುಂದಾಗದೆ, ಕಂಪನಿಗಳ ಪರವಾಗಿ ವಕಾಲತ್ತು ವಹಿಸುತ್ತಿರುವಂತಿರುವ ಅಧಿಕಾರಿಗಳ ಅಸಹಾಯಕತೆ ನಾಚಿಕೆಗೇಡು. : ವೀರೇಶ ಸಜ್ಜನ್, ಕನ್ನಡಪರ ಸಂಘಟನೆ ಮುಖಂಡ.
(20ವೈಡಿಆರ್15)-
20ವೈಡಿಆರ್13 : ಸಮಿತಿಯ ವರದಿಯ ಕೊನೆಯ ಅಂಶ. (ಬಾಕ್ಸ್ ಸುದ್ದಿಗೆ ಪೂರಕ ಫೋಟೋ)20ವೈಡಿಆರ್14 : ಕಡೇಚೂರು ಬಾಡಿಯಾಳ ಕೈಗಾರಿಕಾ ಪ್ರದೇಶದ ನೋಟ.