5 ವಿದ್ಯುತ್ ಉಪ ಕೇಂದ್ರಗಳ ಸ್ಥಾಪನೆ ವಿಳಂಬ ಏಕೆ?

KannadaprabhaNewsNetwork |  
Published : Sep 14, 2025, 01:04 AM IST
13 ಜೆ.ಜಿ.ಎಲ್.1) ಜಗಳೂರು ಪಟ್ಟಣದ ಪತ್ರಕರ್ತರ ಭವನದಲ್ಲಿ ಶನಿವಾರ ಜೆಡಿಎಸ್ ಪಕ್ಷದಿಂದ ಜೆಡಿಎಸ್ ರಾಜ್ಯಪ್ರಧಾನಕಾರ್ಯದರ್ಶಿ ಕಲ್ಲೇರುದ್ರೇಶ್ ,ಇತರರು ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದರು. | Kannada Prabha

ಸಾರಾಂಶ

ದೇವಿಕೆರೆ ಭಾಗದಲ್ಲಿ 220/66 ಕೆ.ವಿ. ವಿದ್ಯುತ್ ಸ್ವೀಕರಣಾ ಕೇಂದ್ರ, ಅಣಬೂರು, ಹೊಸಕೆರೆ, ಬಸವನಕೋಟೆ, ಭಾಗದಲ್ಲಿ 66/11 ಉಪ ಕೇಂದ್ರಗಳು ಮಂಜೂರಾಗಿ 15 ವರ್ಷಗಳೇ ಕಳೆದಿವೆ. ಇತ್ತೀಚಿನ ಆಡಳಿತ ಸರ್ಕಾರಗಳ ಇಚ್ಛಾಶಕ್ತಿ ಕೊರತೆಯೋ ಅಥವಾ ರೈತಾಪಿ ವರ್ಗ ಧ್ವನಿ ಎತ್ತದ ಕಾರಣವೋ ಇನ್ನೂ ಸ್ಥಾಪನೆಯಾಗದೇ ಸೇವೆ ಆರಂಭ ವಿಳಂಬವಾಗುತ್ತಿದೆ ಎಂದು ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಕಲ್ಲೇರುದ್ರೇಶ್ ಹೇಳಿದ್ದಾರೆ.

- ಜಗಳೂರಲ್ಲಿ ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಕಲ್ಲೇರುದ್ರೇಶ್ ಪ್ರಶ್ನೆ

- - -

ಕನ್ನಡಪ್ರಭ ವಾರ್ತೆ ಜಗಳೂರು

ದೇವಿಕೆರೆ ಭಾಗದಲ್ಲಿ 220/66 ಕೆ.ವಿ. ವಿದ್ಯುತ್ ಸ್ವೀಕರಣಾ ಕೇಂದ್ರ, ಅಣಬೂರು, ಹೊಸಕೆರೆ, ಬಸವನಕೋಟೆ, ಭಾಗದಲ್ಲಿ 66/11 ಉಪ ಕೇಂದ್ರಗಳು ಮಂಜೂರಾಗಿ 15 ವರ್ಷಗಳೇ ಕಳೆದಿವೆ. ಇತ್ತೀಚಿನ ಆಡಳಿತ ಸರ್ಕಾರಗಳ ಇಚ್ಛಾಶಕ್ತಿ ಕೊರತೆಯೋ ಅಥವಾ ರೈತಾಪಿ ವರ್ಗ ಧ್ವನಿ ಎತ್ತದ ಕಾರಣವೋ ಇನ್ನೂ ಸ್ಥಾಪನೆಯಾಗದೇ ಸೇವೆ ಆರಂಭ ವಿಳಂಬವಾಗುತ್ತಿದೆ ಎಂದು ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಕಲ್ಲೇರುದ್ರೇಶ್ ಹೇಳಿದರು.

ಪಟ್ಟಣದ ಪತ್ರಕರ್ತರ ಭವನದಲ್ಲಿ ಶನಿವಾರ ಜೆಡಿಎಸ್ ಪಕ್ಷದಿಂದ ಪತ್ರಿಕಾಗೋಷ್ಠಿ ನಡೆಸಿ ಬೇಸರ ವ್ಯಕ್ತಪಡಿಸಿದ ಅವರು, ಈ ಕುರಿತು ಯಾವುದೇ ರಾಜಕಾರಣಿಗಳ ಅಭಿವೃದ್ಧಿ ಬಗ್ಗೆ ಪ್ರಶ್ನಿಸುವುದಿಲ್ಲ. ನಮ್ಮ ಮನವಿ ಇಷ್ಟೇ, ಮಂಜೂರಾದ ವಿದ್ಯುತ್ ಉಪ ಕೇಂದ್ರಗಳು ಬೇರೆ ಅಗತ್ಯವಿರುವ ತಾಲೂಕುಗಳಿಗಾದರೂ ಉಪಯೋಗವಾಗಲಿ. ಮಂಜೂರಾದ 5 ವಿದ್ಯುತ್ ಉಪ ಕೇಂದ್ರಗಳ ಆದೇಶ ರದ್ದುಪಡಿಸಿ, ಬೇರೆಡೆ ವರ್ಗಾವಣೆ ಮಾಡಿಕೊಡಬೇಕು ಎಂದರು.

2009ರಲ್ಲಿ ಜಗಳೂರು ಕ್ಷೇತ್ರಕ್ಕೆ ಮಂಜೂರಾದ 5 ವಿದ್ಯುತ್ ಉಪಕೇಂದ್ರಗಳನ್ನು ತೆರೆಯಲು ರೈತರು ಕೇಳಿಲ್ಲ. ರಾಜಕಾರಣಿಗಳ ಇಚ್ಛಾಶಕ್ತಿಯಿಲ್ಲ. ಬೇರೆ ತಾಲ್ಲೂಕಿನಾದ್ಯಂತ ಕೆರೆ-ಕಟ್ಟೆಗಳು ಭರ್ತಿಯಾಗಿವೆ. ರೈತರ ಕೃಷಿ ಬೋರ್ ವೆಲ್‌ಗಳ ಪಂಪ್ ಸೆಟ್‌ಗಳಿಗೆ ದಿನದಿಂದ ದಿನಕ್ಕೆ ವಿದ್ಯುತ್‌ ಅಭಾವ ಸೃಷ್ಠಿಯಾಗುತ್ತಿದೆ. ಮಾಜಿ ಮುಖ್ಯಮಂತ್ರಿಗಳಾದ ಜೆ.ಎಚ್. ಪಟೇಲ್, ಕುಮಾರಸ್ವಾಮಿ ಅವಧಿಯಲ್ಲಿ ಪಲ್ಲಾಗಟ್ಟೆ, ಹಿರೇಮಲ್ಲನಹೊಳೆಯಲ್ಲಿ 66/11 ಕೆವಿ ಉಪ ಕೇಂದ್ರಗಳು ಸ್ಥಾಪನೆಯಾಗಿವೆ. ಅನಂತರ ಯಾವೊಂದು ಸರ್ಕಾರವೂ ಕಿವಿಗೊಟ್ಟಿಲ್ಲ. ಪುನಃ 2009ರಲ್ಲಿ ಮಾಜಿ ಮುಖ್ಯಮಂತ್ರಿ ಕುಮಾರ ಸ್ವಾಮಿ ಆಡಳಿತಾವಧಿಯಲ್ಲಿ ಮಂಜೂರಾಗಿರುವ ಕ್ಷೇತ್ರದ ಅರಸೀಕೆರೆಯಲ್ಲಿ 66/11 ಕೆವಿ ಕಾಮಗಾರಿ ಪ್ರಗತಿಯಲ್ಲಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಜೆಡಿಎಸ್ ತಾಲೂಕು ಅಧ್ಯಕ್ಷ ಸಿದ್ದೇಶ್, ಹಿಂದುಳಿದ ವರ್ಗಗಳ ಅಧ್ಯಕ್ಷ ಲಕ್ಷ್ಮಣ್, ಪ್ರಧಾನ ಕಾರ್ಯದರ್ಶಿ ಉಸ್ಮಾನ್ ಇದ್ದರು.

- - -

-13ಜೆ.ಜಿ.ಎಲ್.1:

ಜಗಳೂರು ಪಟ್ಟಣದ ಪತ್ರಕರ್ತರ ಭವನದಲ್ಲಿ ಶನಿವಾರ ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಕಲ್ಲೇರುದ್ರೇಶ್ ಇತರರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.

PREV

Recommended Stories

ದಸರಾ ಹಬ್ಬ ಅದ್ಧೂರಿ ಆಚರಣೆಗೆ ಎಲ್ಲರೂ ಸಹಕರಿಸಿ: ಏಗಪ್ಪ ಸವದಿ
ಬಿಡಿಸಿಸಿ ಬ್ಯಾಂಕ್‌ ಹಿತರಕ್ಷಣೆಗೆ ನಾವು ಬದ್ಧ